ವಿಟಿಯು ರ್ಯಾಂಕಿಂಗ್: ಬೆಂಗಳೂರು ವಿದ್ಯಾರ್ಥಿಗಳು ಫಸ್ಟ್ ಅಂಡ್ ಬೆಸ್ಟ್

ಈ ಬಾರಿಯ ವಿಟಿಯು ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮುಂದಿದ್ದು, ಶೇ.84.71 ರಷ್ಟು ಉತ್ತೀರ್ಣರಾಗಿದ್ದಾರೆ. ಅಲ್ಲದೆ ಎಂ.ಟೆಕ್ ನಲ್ಲಿ ವಿದ್ಯಾರ್ಥಿನಿಯರು ಶೇ.100 ರಷ್ಟು ಸಾಧನೆ ಮಾಡಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಕಟಿಸಿರುವ 2016-17 ನೇ ಸಾಲಿನ ರ್ಯಾಂಕ್ ಪಟ್ಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ತುಮಕೂರಿನಲ್ಲಿ ಜನವರಿ 6 ಮತ್ತು 7 ರಂದು ಬೃಹತ್ ಉದ್ಯೋಗ ಮೇಳತುಮಕೂರಿನಲ್ಲಿ ಜನವರಿ 6 ಮತ್ತು 7 ರಂದು ಬೃಹತ್ ಉದ್ಯೋಗ ಮೇಳ

ಈ ಬಾರಿಯ ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮುಂದಿದ್ದು, ಶೇ.84.71 ರಷ್ಟು ಉತ್ತೀರ್ಣರಾಗಿದ್ದಾರೆ. ಗಂಡು ಮಕ್ಕಳು ಶೇ.68.14 ರಷ್ಟು ಪಾಸ್ ಆಗಿದ್ದರೆ. ಅಲ್ಲದೆ ಎಂ.ಟೆಕ್ ನಲ್ಲಿ ವಿದ್ಯಾರ್ಥಿನಿಯರು ಶೇ.100 ರಷ್ಟು ಸಾಧನೆ ಮಾಡಿದ್ದಾರೆ.

ಭಾರತೀಯ ರೈಲ್ವೆ: ವಿವಿಧ ಇಂಜಿನಿಯರ್ ಹುದ್ದೆಗಳ ನೇಮಕಾತಿಭಾರತೀಯ ರೈಲ್ವೆ: ವಿವಿಧ ಇಂಜಿನಿಯರ್ ಹುದ್ದೆಗಳ ನೇಮಕಾತಿ

ವಿಟಿಯು: ಬೆಂಗಳೂರು ವಿದ್ಯಾರ್ಥಿಗಳ ಮೇಲುಗೈ

ಬಿಇ, ಬಿಟೆಕ್ ನಲ್ಲಿ ಈ ವರ್ಷ ಶೇ.73.44 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೆಂಗಳೂರಿನ ಆರ್ ವಿ ಇಂಜಿನಿಯರಿಂಗ್ ಕಾಲೇಜು, ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜು, ಬಿಐಟಿ ಕಾಲೇಜು ಅತ್ಯಧಿಕ ರ್ಯಾಂಕ್ ಪಡೆದ ಕಾಲೇಜುಗಳಾಗಿವೆ.

ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜು 54 ರ್ಯಾಂಕ್ ಗಳನ್ನೂ ಪಡೆದರೆ, ಆರ್ ವಿ ಇಂಜಿನಿಯರಿಂಗ್ ಕಾಲೇಜು 32 ರ್ಯಾಂಕ್ ಹಾಗೂ ಬಿಐಟಿ ಕಾಲೇಜು 26 ರ್ಯಾಂಕ್ ಗಳನ್ನು ಪಡೆದಿವೆ.

24 ಚಿನ್ನದ ಪದಕಗಳು

ಈ ಬಾರಿಯ ವಿಟಿಯು ಫಲಿತಾಂಶದಲ್ಲಿ ಒಟ್ಟು 24 ಚಿನ್ನದ ಪದಕಗಳು ಬಿಇ,ಬಿಟೆಕ್ ವಿದ್ಯಾರ್ಥಿಗಳ ಪಾಲಾಗಿದೆ.

ನಗರದ ದಯಾನಂದ ಸಾಗರ್ ಕಾಲೇಜಿನ ಏರೋನಾಟಿಕಲ್ ವಿಭಾಗದ ವಿದ್ಯಾರ್ಥಿನಿ ಎಂ.ಎಸ್ ನಂದಾಶ್ರಿ ಬಿಇ-ಬಿಟೆಕ್ ಕೋರ್ಸಿನಲ್ಲಿ ಶೇ.84.9 ರಷ್ಟು ಅಂಕಗಳಿಸಿ ಟಾಪರ್ ಆಗಿ ಚಿನ್ನದ ಪದಕ ಪಡೆದಿದ್ದಾರೆ.

ಇದೇ ಕಾಲೇಜಿನ ಲಯೀಕ್ ಅಹಮೆದ್ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.80.33 ಅಂಕಗಳಿಸಿ ಮೊದಲ ಸ್ಥಾನ ಪಡೆದಿದ್ದರೆ.

ಎಂ.ಟೆಕ್ ನಲ್ಲಿ ಆ ವಿ ಇಂಜಿನಿಯರಿಂಗ್ ಕಾಲೇಜಿನ ಬಯೋ-ಇನ್ಫರ್ಮ್ಯಾಟಿಕ್ಸ್ ವಿಭಾಗದ ಶೈನಿ ಮಾರ್ಟಿಸ್ ಬಿ ಶೇ.85.17 ಅಂಕಗಳಿಸಿ ಟಾಪರ್ ಆಗಿದ್ದರೆ.

ವಿಟಿಯು ವಾರ್ಷಿಕ ಘಟಿಕೋತ್ಸವ

ವಿಟಿಯು ವಾರ್ಷಿಕ ಘಟಿಕೋತ್ಸವ ಜನವರಿ 9ರಂದು ಬೆಳಗಾವಿಯ ವಿಟಿಯು ಕ್ಯಾಂಪಸ್ ನಲ್ಲಿ ನಡೆಯಲಿದ್ದು, ಪ್ರಥಮ ರ್ಯಾಂಕ್ ಪಡೆದ ಎಲ್ಲ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುತ್ತದೆ.

ಇಂಜಿನಿಯರಿಂಗ್, ಬಿ.ಆರ್ಕ್, ಎಂಬಿಎ, ಎಂಸಿಎ, ಎಂಟೆಕ್ ಹಾಗೂ ಎಂ.ಆರ್ಕ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕರ್ನಾಟಕದ ನಾನಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 26 ವಿಶೇಷ ಪ್ರಶಸ್ತಿ ನೀಡಲಾಗುವುದಾಗಿ ವಿಟಿಯು ತಿಳಿಸಿದೆ. ಇತರೆ ರ್ಯಾಂಕ್ ಪಡೆದವರು ಜನವರಿ 9 ರಂದು ಮಧ್ಯಾಹ್ನ 3 ಗಂಟೆ ನಂತರ ವಿಟಿಯು ಮೌಲ್ಯಮಾಪನ ಕುಲಸಚಿವರಿಂದ ಪದವಿ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Bengaluru engineering colleges got maximum ranks in VTU ranking. This year, the pass percentage of students has gone up to 73.44 per cent. RV Engineering College, Bangalore, Dayanand Sagar Engineering College, BIT College are the highest ranked colleges.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X