ದೇಶದ ಅತ್ಯುತ್ತಮ ಕೃಷಿ ವಿವಿಗಳ ಪಟ್ಟಿಯಲ್ಲಿ ಬೆಂಗಳೂರಿನ ಜಿಕೆವಿಕೆ

Posted By:

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಈಗ ದಕ್ಷಿಣ ಭಾರತದ ಅಗ್ರಮಾನ್ಯ ವಿವಿ ಎಂದೆನಿಸಿದೆ. ದಕ್ಷಿಣ ಭಾರತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥಾನ ಮತ್ತು ರಾಷ್ಟ್ರಮಟ್ಟದ ಕೃಷಿ ವಿಶ್ವವಿದ್ಯಾಲಯಗಳಲ್ಲಿ 3ನೇ ಸ್ಥಾನ ಪಡೆದು ಬೆಂಗಳೂರಿಗೆ ಹೆಮ್ಮೆ ತಂದಿದೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನೀಡಿರುವ ಮೌಲ್ಯಮಾಪನದಲ್ಲಿ ಬೆಂಗಳೂರಿನ ಜಿಕೆವಿಕೆಗೆ ಈ ಹಿರಿಮೆ ದೊರೆತಿದೆ. ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟಂತಹ 57 ಕೃಷಿ ವಿಶ್ವವಿದ್ಯಾಲಯಗಳು ಕಳೆದ 5 ವರ್ಷಗಳಲ್ಲಿ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಾಡಿದ ಸಾಧನೆ ಮತ್ತು ಸಲ್ಲಿಸಿದ ಸೇವೆಯನ್ನು ಪರಿಗಣಿಸಲಾಗಿದೆ.

ಜಿಕೆವಿಕೆ ಸಾಧನೆ

ಕಳೆದ 5 ವರ್ಷಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ 16 ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. 177 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕಿರಿಯ ಸಂಶೋಧಕರ ಫೆಲೋಶಿಪ್, 62 ಶಿಕ್ಷಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅಗ್ರಸ್ಥಾನದಲ್ಲಿ ಬೆಂಗಳೂರಿನ ಜಿಕೆವಿಕೆ

ಕೃಷಿಗೆ ಸಂಬಂಧಿಸಿದ 2 ತಂತ್ರಜ್ಞಾನಗಳನ್ನು ಪೇಟೆಂಟ್ ಮಾಡಲಾಗಿದೆ ಮತ್ತು 14 ತಂತ್ರಜ್ಞಾನಗಳನ್ನು ಪೇಟೆಂಟ್ ಗಾಗಿ ನೋಂದಾಯಿಸಲಾಗಿದೆ. ಕೃಷಿಯಲ್ಲಿ 5 ತಳಿಗಳು ಮತ್ತು 98 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ರೈತರ ಜಮೀನಿಗೆ ವರ್ಗಾಯಿಸಲಾಗಿದೆ.

ಜಿಕೆವಿಕೆ

ಬೆಂಗಳೂರು ಕೃಷಿ ವಿವಿಯು 1899 ರಲ್ಲಿ 30 ಎಕರೆ ಪ್ರದೇಶದಲ್ಲಿ ಸಂಶೋಧನಾ ಪ್ರಯುಕ್ತ ಬೆಂಗಳೂರಿನಲ್ಲಿ ಆರಂಭವಾಯಿತು. ವಿವಿಗೆ ಜಾಗವನ್ನು ಅಂದಿನ ಮೈಸೂರು ಸಂಸ್ಥಾನದ ಮಹಾರಾಣಿ ಕೆಂಪ ನಂಜಾಮ್ಮಾಣಿ ವಾಣಿ ವಿಲಾಸ ಸನ್ನಿದಿಯವರು ದಾನವಾಗಿ ನೀಡಿದರು.

ಜರ್ಮನ್ ಮೂಲದ ಡಾ.ಲೆಹ್ಮನ್ ಮೊದಲ ನಿರ್ದೇಶಕರಾರಿ ಇಲ್ಲಿಯ ಪ್ರಯೋಗಶಾಲೆಗೆ ಚಾಲನೆ ನೀಡಿದರು. 1913 ರಲ್ಲಿ ದಿವಾನ್ ಸರ್ ಎಂ ವಿಶ್ವೇಶ್ವರಯ್ಯರವರ ನೇತೃತ್ವದಲ್ಲಿ ಕೃಷಿ ವಸತಿಶಾಲೆಯನ್ನು ಆರಂಭಿಸಲಾಯಿತು. 1920 ರಲ್ಲಿ ಶಾಲೆಯನ್ನು ಕಾಲೇಜಾಗಿ ಮಾರ್ಪಡಿಸಲಾಯಿತು. 1946ರಲ್ಲಿ ನಾಲ್ಕು ವರ್ಷಗಳ ಪದವಿ ಕೋರ್ಸ್ ಆರಂಭಿಸಿದ ಈ ಕೃಷಿ ಕಾಲೇಜು 1964 ರಲ್ಲಿ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿತು.

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ 13ನೇ ಸ್ಥಾನದಲ್ಲಿದೆ. ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾಲಯ 25ನೇ ಸ್ಥಾನದಲ್ಲಿದೆ.

ದೇಶದ ಮೊದಲ 10 ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯಗಳು

1) ಐಸಿಎಆರ್ - ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಕರ್ನಲ್.
2) ಐಸಿಎಆರ್ - ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ನವದೆಹಲಿ.
3) ಪಂಜಾಬ್ ಅಗ್ರಿಕಲ್ಚರಲ್ ಯುನಿವರ್ಸಿಟಿ, ಲುಧಿಯಾನಾ.
4) ಚೌಧರಿ ಚರಣ್ ಸಿಂಗ್ ಹರ್ಯಾಣ ಅಗ್ರಿಕಲ್ಚರಲ್ ಯುನಿವರ್ಸಿಟಿ, ಹಿಸಾರ್.
5) ಐಸಿಎಆರ್ - ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಬರೇಲಿ.
6) ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಬೆಂಗಳೂರು.
7) ತಮಿಳುನಾಡು ಅಗ್ರಿಕಲ್ಚರಲ್ ಯುನಿವರ್ಸಿಟಿ, ಕೊಯಮತ್ತೂರು.
8) ಜಿಬಿ ಪಂತ್ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಪಂತನಗರ.
9) ಗುರು ಆನಂದ್ ದೇವ್ ವೆಟರ್ನರಿ ಅಂಡ್ ಅನಿಮಲ್ ಸೈನ್ಸಸ್ ಯುನಿವರ್ಸಿಟಿ, ಲುಧಿಯಾನಾ.
10) ತಮಿಳುನಾಡು ವೆಟರ್ನರಿ ಅಂಡ್ ಅನಿಮಲ್ ಸೈನ್ಸಸ್ ಯುನಿವರ್ಸಿಟಿ, ಚೆನ್ನೈ.

English summary
The University of Agricultural Sciences, Bengaluru ranked first among the agricultural universities in South India and stood first in Karnataka. It is also 3rd best among the agricultural universities in India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia