ಬೆಸ್ಕಾಂ ಜೂನಿಯರ್ ಲೈನ್‌ಮನ್‌ ಹುದ್ದೆ ಅಧಿಸೂಚನೆ

Posted By:

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಉದ್ಯೋಗ ಪ್ರಕಟಣೆ ಸಂಖ್ಯೆ: ಕವಿಪ್ರನಿನಿ/ಬಿ16/40342/2016-17, ದಿನಾಂಕ: 05.08.2016 ಕ್ಕೆ ಅನುಗುಣವಾಗಿ ನಿಗಧಿಪಡಿಸಿದ ಶೈಕ್ಷಣಿಯ ವಿದ್ಯಾರ್ಹತೆಯಲ್ಲಿ (ಎಸ್ ಎಸ್ ಎಲ್ ಸಿ/10 ನೇ ತರಗತಿ) ಗಳಿಸಿರುವ ಅಂಕಗಳ ಅರ್ಹತೆಯ ಆಧಾರದ ಮೇಲೆ ದಿನಾಂಕ: 18.10.2016 ರಿಂದ 23.10.2016 ರವರೆಗೆ ನಡೆದ ಸಹನಾ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಫ್ ಅಂಕಗಳೊಂದಿಗೆ ಕವಿಪ್ರನಿನಿಯ ಹಾಗೂ ಸಂಬಂಧಿಸಿದ ಕಂಪನಿಗಳ ಅಂತರ್ಜಾಲದಲ್ಲಿ ದಿನಾಂಕ: 07.01.2017 ರಂದು ಪ್ರಕಟಿಸಲಾಗಿತ್ತು.

ಸದರಿ ಆಯ್ಕೆ ಪಟ್ಟಿಯನ್ನು ತಯಾರಿಸುವಾಗ ಸ್ಥಳೀಯ ವೃಂದದಲ್ಲಿ(ಹೈ-ಕ) ಲಭ್ಯವಿರುವ ಹುದ್ದೆಗಳಿಗೆದುರಾಗಿ ಅರ್ಹ ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಮೊದಲು ತಯಾರಿಸಿ ತದನಂತರ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳನ್ನು ಪರಿಗಣಿಸಲಾಗಿರುತ್ತದೆ.

ಉಲ್ಲೇಖ-4 ರ ಸರ್ಕಾರದ ಸುತೋಲೆಯಲ್ಲಿ, ಮೆರಿಟ್ ಪಟ್ಟಿಯಿಂದ ಆಯ್ಕೆ ಪಟ್ಟಿಯನ್ನು ತಯಾರಿಸುವಲ್ಲಿ ಮೊದಲಿಗೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳನ್ನು ಪರಿಗಣಿಸಿ, ಆಯ್ಕೆ ಪಟ್ಟಿ ತಯಾರಿಸುವುದು, ತದನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆದುರಾಗಿ ಅರ್ಹ ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸುವಂತೆ ತಿಳಿಸಲಾಗಿರುತ್ತದೆ.

ಲೈನ್‌ಮನ್‌ ಹುದ್ದೆ ಅಧಿಸೂಚನೆ

ಪ್ರಸ್ತುತ ಸದರಿ ಸುತ್ತೋಲೆಗನುಗುಣವಾಗಿ ಹೊಸ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿರುತ್ತದೆ. ಆದ್ದರಿಂದ ಬೆಸ್ಕಾಂ ಕಂಪನಿಯ ಕಿರಿಯ ಮಾರ್ಗದಾಳು ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ: 07.01.2017 ರ ಅಧಿಸೂಚನೆಯ ಮುಖಾಂತರ ಪ್ರಕಟಿಸಲಾಗಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹಿಂಪಡೆಯಲಾಗಿದೆ.

ಆಕ್ಷೇಪಣೆ ಸಲ್ಲಿಸಲು ಅವಕಾಶ

ಹೊಸ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಫ್ ಅಂಕಗಳೊಂದಿಗೆ ಬೆಸ್ಕಾಂ ಕಂಪನಿಯ ವೆಬ್ಸೈಟ್ ವಿಳಾಸದಲ್ಲಿ ಪ್ರಕಟಿಸಲಾಗಿದೆ. ಹೊಸ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಮಂಜಸವಾದ ಆಕ್ಷೇಪಣೆಗಳಿದ್ದಲ್ಲಿ, 1:5 ಅನುಪಾತದಲ್ಲಿ ಆಯ್ಕೆಯಾಗಿ ಸಹನಾ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ್ದ ಅಭ್ಯರ್ಥಿಗಳು ಮಾತ್ರ ಸೂಕ್ತ ವಿವರ ಹಾಗೂ ದಾಖಲಾತಿಗಳೊಂದಿಗೆ ತಮ್ಮ ಹೆಸರು ಹಾಗೂ ಅರ್ಜಿ ಸಂಖ್ಯೆಯನ್ನು ನಮೂದಿಸಿ recruitmentbescom@gmail.com ಗೆ ಇ-ಮೇಲ್ ಮಾಡುವುದು.

ಬೆಸ್ಕಾಂ ವೆಬ್ಸೈಟ್ ವಿಳಾಸ www.bescom.org

ಸೂಚನೆ

  • ಅಕ್ಷೇಪಣೆಗಳನ್ನು ಸಲ್ಲಿಸಲು 25.03.2017 ಕೊನೆಯ ದಿನಾಂಕವಾಗಿರುತ್ತದೆ.
  • ಕಿರಿಯ ಮಾರ್ಗದಾಳು ಬ್ಯಾಕ್ಲಾಗ್ ಹುದ್ದೆಗೆ ಸಂಬಂಧಿಸಿದಂತೆ, ಪ್ರಕಟಿಸಿದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಅಭ್ಯರ್ಥಿಗಳ ಮಾಹಿತಿಗಾಗಿ ಸರ್ಕಾರದ ದಿನಾಂಕ: 16.11.2016 ರ ಸುತ್ತೋಲೆಯನ್ನು ನಿಗಮದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

English summary
Withdrawal of the Provisional Selection List published on 07.01.2017 for the post of Junior Lineman & Publishing of New Provisional Selection List for the post of Junior Lineman in BESCOM

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia