ಮೌಲ್ಯಮಾಪನ ಎಡವಟ್ಟು: ಬಿಹಾರ ಪರೀಕ್ಷಾ ಮಂಡಳಿಗೆ 5 ಲಕ್ಷ ರೂ.ದಂಡ

Posted By:

ಮೌಲ್ಯಮಾಪನ ವಿಚಾರವಾಗಿ ಬಿಹಾರ ಪರೀಕ್ಷಾ ಮಂಡಳಿಗೆ (ಬಿಎಸ್​ಇಬಿ) ಪಾಟ್ನಾ ಹೈಕೋರ್ಟ್ ದಂಡ ವಿಧಿಸುವ ಮೂಲಕ ಶಿಕ್ಷಣ ಇಲಾಖೆಗೆ ತಕ್ಕ ಪಾಠ ಕಲಿಸಿದೆ.

ಹತ್ತನೇ ತರಗತಿ ಪರೀಕ್ಷೆಯ ಮೌಲ್ಯಮಾಪನ ವೇಳೆ ಪ್ರತಿಭಾವಂತ ವಿದ್ಯಾರ್ಥಿನಿಯ ಉತ್ತರ ಪತ್ರಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡದ ಕಾರಣ ಪಾಟ್ನಾ ಹೈಕೋರ್ಟ್ ಬಿಹಾರ ಪರೀಕ್ಷಾ ಮಂಡಳಿಗೆ (ಬಿಎಸ್​ಇಬಿ) 5 ಲಕ್ಷ ದಂಡ ವಿಧಿಸಿದೆ.

ಮೌಲ್ಯಮಾಪನ  ಎಡವಟ್ಟಿಗೆ  5 ಲಕ್ಷ ರೂ. ದಂಡ

ಪ್ರಿಯಾಂಕಾ ಸಿಂಗ್ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಬರೆದಿದ್ದರೂ, ಬಿಎಸ್​ಇಬಿ ನಿರ್ಲಕ್ಷ್ಯಂದ ಬಾಲಕಿಗೆ ಅನ್ಯಾಯವಾಗಿದೆ ಎಂದು ಕೋರ್ಟ್ ಹೇಳಿದೆ. ಪ್ರಿಯಾಂಕಾಗೆ ಸಂಸ್ಕೃತದಲ್ಲಿ 100 ಅಂಕಗಳಿಗೆ 9, ವಿಜ್ಞಾನ ವಿಷಯದಲ್ಲಿ 80 ಅಂಕಗಳಿಗೆ 29 ಅಂಕಗಳು ಬಂದಿದ್ದವು. ಪರೀಕ್ಷೆಯಲ್ಲಿ ಕಳಪೆಯಾಗಿ ಬರೆದಿಲ್ಲ ಎಂದು ಪ್ರಿಯಾಂಕ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಳು.

ಕೋರ್ಟ್ ಪ್ರಿಯಾಂಕಳಿಗೆ 40,000 ರೂ. ಠೇವಣಿ ಇಡಲು ಸೂಚಿಸಿ, ಮರುಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಮರು ಮೌಲ್ಯಮಾಪನ ವೇಳೆ ಪ್ರಿಯಾಂಕಾಗೆ ಸಂಸ್ಕೃತದಲ್ಲಿ 80 ಹಾಗೂ ವಿಜ್ಞಾನದಲ್ಲಿ 61 ಅಂಕ ಸಿಕ್ಕಿತ್ತು. ಬಳಿಕ ಬಿಎಸ್​ಇಬಿ ಉತ್ತರ ಪತ್ರಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಿರಲಿಲ್ಲ ಎಂದು ತಪ್ಪೊಪ್ಪಿಕೊಂಡಿತ್ತು.

ಬಿಹಾರ ಪರೀಕ್ಷ ಮಂಡಳಿ ಈ ಹಿಂದೆಯೂ ಒಂದೆರೆಡು ವಿಚಾರಗಳಲ್ಲಿ ಇಂತಹ ತಪ್ಪುಗಳನ್ನೇ ಮಾಡಿ ತಲೆ ತಗ್ಗಿಸಿತ್ತು, ದಾಖಲೆಗಳನ್ನು ಫೋರ್ಜರಿ ಮಾಡಿದ ವಿಚಾರದಲ್ಲಿ ಹನ್ನೆರಡನೇ ತರಗತಿಯ ಗಣೇಶ್ ಕುಮಾರ ಎಂಬುವವರನ್ನು ಬಂಧಿಇಸಲಾಗಿತ್ತು ಮತ್ತು ರಾಜ್ಯಶಾಸ್ತ್ರವು ಅಡುಗೆಗೆ ಸಂಬಂಧಿಸಿದ್ದು ಎಂದು ಹೇಳಿದ್ದ ಹನ್ನೆರಡನೇ ತರಗತಿಯ ಟಾಪರ್ ರೂಬಿ ರಾಯ್ ಅವರನ್ನು ಕೂಡ ಬಂಧಿಸಿದ್ದನ್ನು ನಾಲಿಲ್ಲಿ ಸ್ಮರಿಸಬಹುದು.

English summary
The Bihar School Examination Board (BSEB) was on Wednesday fined Rs 5 lakh by the Patna HC for flunking a meritorious girl in the Class X exam this year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia