ಬಿಎಂಟಿಸಿ ಬಸ್ ಪಾಸ್: ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

Posted By:

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಇನ್ನುಮುಂದೆ ಬಸ್ ಪಾಸ್ ಗಾಗಿ ಕ್ಯೂನಲ್ಲಿ ನಿಲ್ಲಬೇಕಿಲ್ಲ. ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದೆ.

ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ, ತಾಂತ್ರಿಕ, ವೈದ್ಯಕೀಯ ಹಾಗೂ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಪೂರ್ವ ಮುದ್ರಿತ ಬಸ್‌ ಪಾಸ್‌ ಹಾಗೂ ಸ್ಮಾರ್ಟ್‌ ಕಾರ್ಡ್‌ ವಿತರಿಸುತ್ತಿದ್ದು, ವಿದ್ಯಾರ್ಥಿಗಳು ವಿತರಣಾ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್‌ ಬಸ್‌ ಪಾಸ್‌ ಪಡೆದುಕೊಳ್ಳಬಹುದಾಗಿದೆ.

35 ಪಾಸ್‌ ವಿತರಣಾ ಕೇಂದ್ರಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಎಲ್ಲ ಕೆಲಸದ ದಿನಗಳಲ್ಲಿ ಪೂರ್ವ ಮುದ್ರಿತ ವಿದ್ಯಾರ್ಥಿ ರಿಯಾಯಿತಿ ಬಸ್‌ ಪಾಸ್‌ಗಳನ್ನು ನೀಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿ ಬಸ್‌ ಪಾಸ್‌ ನೀಡಲಾಗುತ್ತದೆ. ಆದರೆ, ಈ ವಿದ್ಯಾರ್ಥಿಗಳು ಸಂಸ್ಕರಣಾ ಶುಲ್ಕ ₹80, ವಿಮಾ ಶುಲ್ಕ ₹40 ಹಾಗೂ ಮಾಹಿತಿ ತಂತ್ರಜ್ಞಾನ ಶುಲ್ಕ ₹10ವನ್ನು ಬಸ್‌ಪಾಸ್‌ ಪಡೆಯಲು ನೀಡಬೇಕು. ಸ್ಮಾರ್ಟ್‌ ಕಾರ್ಡ್‌ ಪಡೆಯಲು ವಾರ್ಷಿಕ ಶುಲ್ಕ ₹25 ಸೇರಿದಂತೆ ₹155 ಪಾವತಿಸಬೇಕು.

ಈ ಪಾಸ್‌ ಪಡೆದ ವಿದ್ಯಾರ್ಥಿಗಳು ಆಗಸ್ಟ್ 1ರಿಂದ ಸೆಪ್ಟೆಂಬರ್‌ 30ರೊಳಗೆ ಸ್ಮಾರ್ಟ್‌ ಕಾರ್ಡ್‌ ವಿತರಣಾ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್‌ ಬಸ್‌ ಪಾಸ್‌ಗೆ ಕಡ್ಡಾಯವಾಗಿ ಬದಲಿಸಿಕೊಳ್ಳಬೇಕು. ಈ ವೇಳೆ ₹130 ಸಂಸ್ಕರಣಾ ಶುಲ್ಕ ಪಾವತಿಸುವ ಅಗತ್ಯ ಇಲ್ಲ.

ವಿದ್ಯಾರ್ಥಿ ರಿಯಾಯಿತಿ ಪಾಸಿನ ಅರ್ಜಿ ನಮೂನೆಯನ್ನು ಬದಲಾವಣೆ ಮಾಡಲಾಗಿದೆ. ಇದನ್ನು ಸಂಸ್ಥೆಯ ಪಾಸ್‌ ಕೌಂಟರ್‌ಗಳಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲೂ ಅರ್ಜಿ ಲಭ್ಯವಿದೆ.

ವೆಬ್ಸೈಟ್ ವಿಳಾಸ www.mybmtc.com

ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು

ವಿದ್ಯಾರ್ಥಿಗಳು ದೃಢೀಕೃತ ಭಾವಚಿತ್ರ ಹೊಂದಿದ ಅರ್ಜಿಯ ಜೊತೆಯಲ್ಲಿ ಕಾಲೇಜು ಶುಲ್ಕ ಪಾವತಿಯ ರಶೀದಿ, ಕಾಲೇಜಿನ ಗುರುತಿನ ಚೀಟಿ, ಇತ್ತೀಚಿನ ಸ್ಟಾಂಪ್‌ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್‌ ಜೆರಾಕ್ಸ್‌ ಪ್ರತಿ ಸಲ್ಲಿಸಬೇಕು, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣಪತ್ರ ಸಲ್ಲಿಸಬೇಕು.

ಸ್ಮಾರ್ಟ್‌ ಕಾರ್ಡ್‌ ವಿತರಣಾ ಕೌಂಟರ್‌ಗಳು

ಮೆಜೆಸ್ಟಿಕ್‌, ಕೆಂಗೇರಿ ಟಿಟಿಎಂಸಿ, ಶಿವಾಜಿನಗರ ಬಸ್‌ ನಿಲ್ದಾಣ, ದೊಮ್ಮಲೂರು, ಶಾಂತಿನಗರ, ಐಟಿಪಿಎಲ್‌, ಜಯನಗರ, ವಿಜಯನಗರ ಟಿಟಿಎಂಸಿ, ಕೋರಮಂಗಲ, ಯಶವಂತಪುರ ಟಿಟಿಎಂಸಿ. ಸ್ಮಾರ್ಟ್‌ ಕಾರ್ಡ್‌ ವಿತರಣಾ ಬೆಂಗಳೂರು ಒನ್‌ ಕೇಂದ್ರಗಳು: ಜೆ.ಪಿ.ನಗರ ಮೈನ್‌, ಸಂಜಯನಗರ ಮೈನ್‌, ನಾಗರಭಾವಿ ಮೈನ್‌, ಜೀವನಹಳ್ಳಿ, ರಾಜಾಜಿನಗರ ಮೈನ್‌, ಕೆ.ಆರ್‌.ಪುರ ಮಿನಿ, ಆರ್‌.ಟಿ.ನಗರ ಮೈನ್‌, ಕಾವಲ್‌ಬೈರಸಂದ್ರ, ಇಂದಿರಾನಗರ ಮೈನ್‌, ಮಲ್ಲೇಶ್ವರ, ಕೊಡಿಗೇಹಳ್ಳಿ, ಬಸವೇಶ್ವರನಗರ ಎಲ್‌ಐಸಿ ಕಾಲೊನಿ ಹಾಗೂ ಅರಕೆರೆ.

ಪೂರ್ವ ಮುದ್ರಿತ ಬಸ್‌ ಪಾಸ್‌ಗಳನ್ನು ಮೆಜೆಸ್ಟಿಕ್‌, ಬನಶಂಕರಿ ಟಿಟಿಎಂಸಿ, ಜಯನಗರ ಟಿಟಿಎಂಸಿ, ಶಿವಾಜಿನಗರ ಬಸ್‌ ನಿಲ್ದಾಣ, ಯಶವಂತಪುರ ಟಿಟಿಎಂಸಿ, ವಿಜಯನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ ಹಾಗೂ ಕಲ್ಯಾಣನಗರ ಬಸ್‌ ನಿಲ್ದಾಣಗಳಲ್ಲಿ ಬೆಳಿಗ್ಗೆ 6.30ರಿಂದ ರಾತ್ರಿ 9ರ ವರೆಗೆ ವಿತರಿಸಲಾಗುತ್ತದೆ.

English summary
BMTC smart card for students is now available at 35 centres. students can apply through online also.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia