ಬಿಎಂಟಿಸಿ ನೇಮಕಾತಿ: ಹುದ್ದೆಗಳು 2225, ಅರ್ಜಿದಾರರು 3 ಲಕ್ಷ!

Posted By:

ನಿರುದ್ಯೋಗ ಸಮಸ್ಯೆಯೋ, ಸರ್ಕಾರಿ ಉದ್ಯೋಗದ ವ್ಯಾಮೋಹವೋ 2,225 ಹುದ್ದೆಗಳಿಗೆ 3 ಲಕ್ಷ ಆನ್ ಲೈನ್ ಅರ್ಜಿಗಳು ಸಲ್ಲಿಕೆಯಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಬಿಇಎಲ್: 27ಕ್ಕೂ ಅಧಿಕ ಇಂಜಿನಿಯರ್ ಗಳ ನೇಮಕಾತಿ

ಬೆಂಗಳೂರು ನಗರ ಸಾರಿಗೆ ಸಂಸ್ಥೆಯು ವಿವಿಧ 2,225 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ಬರೋಬ್ಬರಿ 3 ಲಕ್ಷ ಆನ್ ಲೈನ್ ಅರ್ಜಿಗಳು ಸಲ್ಲಿಕೆಯಾಗಿದೆ.

ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್: ವಿವಿಧ ಹುದ್ದೆಗಳ ನೇಮಕಾತಿ

ಬಿಎಂಟಿಸಿ ನೇಮಕಾತಿ

ಬಿಎಂಟಿಸಿ ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ, ಕುಶಲಕರ್ಮಿ ಹಾಗೂ ತಾಂತ್ರಿಕ ಸಹಾಯ ಹೀಗೆ 2,225 ಹುದ್ದೆಗಳಿಗೆ ಡಿಸೆಂಬರ್ ಎರಡನೇ ವಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಡಿ.11 ರಿಂದ ಡಿ.26 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.

ಚಾಲಕ-500 ಹೈ.ಕ. ಮೀಸಲು ಹುದ್ದೆ 108, ನಿರ್ವಾಹಕ-534, ಸ.ಸಂ. ನಿರೀಕ್ಷಕ 39 ಮೀಸಲು ಹುದ್ದೆ 16, ತಾಂತ್ರಿಕ ಸಹಾಯಕ-898 ಮೀಸಲು ಹುದ್ದೆ 120, ಕುಶಲಕರ್ಮಿ-82 ಮೀಸಲು ಹುದ್ದೆ 28ಒಟ್ಟು 2,225 ಇದ್ದು, ಮೂರು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

ಮೂರು ಲಕ್ಷ ಅರ್ಜಿಗಳಲ್ಲಿ ಅತಿ ಹೆಚ್ಚು ಅರ್ಜಿಗಳು ಚಾಲಕ ಮತ್ತು ನಿರ್ವಾಹಕ ಹುದ್ದೆಗಳಿಗೆ ಸಲ್ಲಿಕೆಯಾಗಿವೆ. 500 ಚಾಲಕ ಹಾಗೂ 534 ನಿರ್ವಾಹಕ ಹುದ್ದೆಗಳು ಖಾಲಿ ಇದ್ದು ಬಹುತೇಕ ಮಂದಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಇನ್ನು ಇದರ ಜೊತೆ ಅಂತರ್ ನಿಗಮ ವರ್ಗಾವಣೆ ಸಂದರ್ಭದಲ್ಲಿ ನಿಗಮದಿಂದ ಹೊರಹೋಗಲು 10 ಸಾವಿರಕ್ಕೂ ಅಧಿಕ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ವರ್ಗಾವಣೆಗೆ 2,337 ಸಿಬ್ಬಂದಿ ಅರ್ಹರಾಗಿದ್ದರು.

ವರ್ಗಾವಣೆಯಿಂದ ತೆರವಾಗುವ ಸ್ಥಾನ ತುಂಬಲು ನಿಗಮ ಅರ್ಜಿ ಆಹ್ವಾನಿಸಿತ್ತು. ಸಲ್ಲಿಯಾಗಿರುವ ಅರ್ಜಿ ಸಂಖ್ಯೆ ನೋಡಿದರೆ ಯುವಕರು ನಿಗಮದಲ್ಲಿ ಕಾರ್ಯನಿರ್ವಹಿಸಲು ಉತ್ಸುಕರಾಗಿರುವುದು ತಿಳಿಯುತ್ತದೆ. ಶೀಘ್ರದಲ್ಲಿ ಪರೀಕ್ಷಾ ದಿನಾಂಕ ಘೋಷಣೆ ಮಾಡಲಾಗುತ್ತದೆ. ಚಾಲಕ ಹುದ್ದೆಗೆ ನೇರ ನೇಮಕಾತಿ ಇರಲಿದ್ದು, ಉಳಿದ ಎಲ್ಲ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದ್ದಾರೆ.

English summary
Around Three lakh applications have been submitted for the 2225 posts in BMTC as the corporation recruiting for 500 drivers, 534 conductors and other technical and non-technical posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia