Board Exam 2022 In These States : ಯಾವೆಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಬೋರ್ಡ್ ಪರೀಕ್ಷೆ ಆರಂಭ

ಕೋವಿಡ್ ನಂತರ ಅನೇಕ ರಾಜ್ಯಗಳ ಮಂಡಳಿಗಳು ತಮ್ಮ ಪರೀಕ್ಷಾ ಪ್ರಕ್ರಿಯೆಗಳನ್ನು ಆಫ್‌ಲೈನ್ ಮೋಡ್‌ನಲ್ಲಿ ನಡೆಸಲು ಪ್ರಾರಂಭಿಸಿವೆ. ಬಿಹಾರ ಮತ್ತು ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಫೆಬ್ರವರಿಯಲ್ಲಿ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಬೋರ್ಡ್ ಪರೀಕ್ಷೆಗಳನ್ನು ನಡೆಸಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ಸೇರಿದಂತೆ ಇನ್ನು ಕೆಲವು ರಾಜ್ಯಗಳು ಮಾರ್ಚ್‌ ತಿಂಗಳಿನಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿವೆ.

 
ಈ ರಾಜ್ಯಗಳಲ್ಲಿ ಇಂದಿನಿಂದ ಬೋರ್ಡ್ ಪರೀಕ್ಷೆಗಳು ಆರಂಭ

ಯಾವೆಲ್ಲಾ ರಾಜ್ಯಗಳಲ್ಲಿ ಇಂದಿನಿಂದ ಬೋರ್ಡ್ ಪರೀಕ್ಷೆ ಆರಂಭವಾಗಲಿದೆ ಎಂದರೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಮತ್ತು ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಶಿಕ್ಷಣ ಮಂಡಳಿ (GSHSEB) ಯ ವಿದ್ಯಾರ್ಥಿಗಳು ಇಂದಿನಿಂದ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.

ಈ ರಾಜ್ಯಗಳಲ್ಲಿ ಇಂದಿನಿಂದ ಬೋರ್ಡ್ ಪರೀಕ್ಷೆಗಳು ಆರಂಭ

ಕರ್ನಾಟಕ SSLC ಪರೀಕ್ಷೆ 2022 (KSEEB) :

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEEB) ಮಾರ್ಚ್ 28 ರ ಸೋಮವಾರದಿಂದ 10 ನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಯು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:45 ರವರೆಗೆ ನಡೆಯಲಿದೆ. 10 ನೇ ತರಗತಿ ಪರೀಕ್ಷೆಗಳು ಏಪ್ರಿಲ್ 11 ರಂದು ಮುಕ್ತಾಯಗೊಳ್ಳಲಿವೆ. ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ತಮಿಳು, ಇಂಗ್ಲಿಷ್, ಸಂಸ್ಕೃತ) ಪರೀಕ್ಷೆ ಸೋಮವಾರ ನಡೆಯಲಿದೆ. ಮಾರ್ಚ್ 30 ರಂದು ಪ್ರಥಮ ಭಾಷೆಯ ಪರೀಕ್ಷೆಯ ನಂತರ ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ) ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಕರ್ನಾಟಕ SSLC ಪ್ರವೇಶ ಪತ್ರ 2022 ಅನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬೇಕು. ಪರೀಕ್ಷಾ ಹಾಲ್‌ನಲ್ಲಿ ಕ್ಯಾಲ್ಕುಲೇಟರ್‌ಗಳು ಮತ್ತು ಮೊಬೈಲ್‌ಗಳಂತಹ ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು ನಿರ್ಬಂಧಿಸಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಓದಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳನ್ನು ನೀಡಲಾಗುತ್ತದೆ.

ಈ ರಾಜ್ಯಗಳಲ್ಲಿ ಇಂದಿನಿಂದ ಬೋರ್ಡ್ ಪರೀಕ್ಷೆಗಳು ಆರಂಭ

ಗುಜರಾತ್ ಬೋರ್ಡ್ ಪರೀಕ್ಷೆ 2022 (GSHSEB) :

ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ (GSHSEB) 10 ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್ 28ರ ಸೋಮವಾರದಿಂದ ನಡೆಸಲಿದೆ. ಪರೀಕ್ಷೆಗಳು ಏಪ್ರಿಲ್ 12 ರವರೆಗೆ ನಡೆಯಲಿವೆ. ಮೊದಲ ಭಾಷೆ (ಗುಜರಾತಿ, ಹಿಂದಿ, ಮರಾಠಿ, ಇಂಗ್ಲಿಷ್, ಉರ್ದು, ಸಿಂಧಿ, ತಮಿಳು, ತೆಲುಗು, ಒಡಿಯಾ) ಪರೀಕ್ಷೆ ಸೋಮವಾರ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಲ್ ಟಿಕೆಟ್ ತೆಗೆದುಕೊಂಡು ಹೋಗಬೇಕು. ಮೊದಲ ಭಾಷಾ ಪರೀಕ್ಷೆಯು ಮಾರ್ಚ್ 30 ರಂದು ಮೂಲ ಗಣಿತದ ನಂತರ ನಡೆಯಲಿದೆ. ಮಂಡಳಿಯು GSHSEB SSC ಅಥವಾ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಒಂದು ವಾರದ ಮೊದಲು ಹಾಲ್ ಟಿಕೆಟ್ ಅನ್ನು ಬಿಡುಗಡೆ ಮಾಡಿದೆ.

For Quick Alerts
ALLOW NOTIFICATIONS  
For Daily Alerts

English summary
Board exams 2022 : Board exam begins from in these states from march 28. Here is the details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X