ಎರಡೂ ಪರೀಕ್ಷೆ ಒಂದೇ ದಿನ: ಬರೆಯುವುದು ಯಾವುದನ್ನ ?

Posted By:

ಒಂದೇ ದಿನ ಕೇಂದ್ರ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳು ನಡೆಯಲಿದ್ದು, ಅಭ್ಯರ್ಥಿಗಳು ಯಾವ ಪರೀಕ್ಷೆಯನ್ನು ಬರೆಯಬೇಕು ಎಂಬ ಗೊಂದಲದಲ್ಲಿದ್ದಾರೆ.

ಇದೇ ತಿಂಗಳ 8 ರಿಂದ ಮೂರು ದಿನ ಕೆಪಿಎಸ್ಸಿ ಜಲ ಸಂಪನ್ಮೂಲ ಇಲಾಖೆಯ ಹುದ್ದೆಗಳ ಪರೀಕ್ಷೆ ನಡೆಯಲಿದ್ದು, ಅದೇ ದಿನಗಳಲ್ಲಿ ಐಬಿಪಿಎಸ್ ಆರ್ ಆರ್ ಬಿ ಪರೀಕ್ಷೆ ನಿಗದಿಯಾಗಿದೆ.

ಎರಡೂ ಪರೀಕ್ಷೆ ಒಂದೇ ದಿನ

ಐಬಿಪಿಎಸ್ ಪ್ರಾಥಮಿಕ (ಪ್ರಿಲಿಮ್ಸ್) ಪರೀಕ್ಷೆಯು ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ

ಕೆಪಿಎಸ್ಸಿ ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಹುದ್ದೆಗಳಿಗೆ ನಡೆಯಲಿರುವ ಪರೀಕ್ಷಾ ದಿನಾಂಕ:
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: 08-09-2017
ಸಹಾಯಕ ಅಭಿಯಂತರರು: 09-09-2017
ಕಿರಿಯ ಅಭಿಯಂತರರು: 10-09-2017

ಈ ಎರಡೂ ಪರೀಕ್ಷೆಗಳಿಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಎರಡೂ ಪರೀಕ್ಷೆಗಳು ಒಂದೇ ದಿನ ಬಂದಿರುವುದರಿಂದ ಒಂದು ಪರೀಕ್ಷೆಯಲ್ಲಿ ಭಾಗಿಯಾದರೆ ಇನ್ನೊಂದು ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಂಕಷ್ಟದಲ್ಲಿದ್ದಾರೆ.

ಪರೀಕ್ಷೆಯ ದಿನಾಂಕ ಬದಲಾವಣೆಗಾಗಿ ಕೆಲ ಅಭ್ಯರ್ಥಿಗಳು ಸಂಬಂಧಪಟ್ಟವರನ್ನು ಭೇಟಿಯಾದರು ಯಾವುದೇ ಪ್ರಯೋಜನವಾಗಿಲ್ಲ. ಕೆಪಿಎಸ್ಸಿ ಯಾಗಲಿ, ಐಬಿಪಿಎಸ್ ಅಗಲಿ ಅಭ್ಯರ್ಥಿಗಳಿಗೆ ಸ್ಪಂದಿಸದಿರುವುದು ಅಭ್ಯರ್ಥಿಗಳಲ್ಲಿ ಬೇಸರ ಮೂಡಿಸಿದೆ.

English summary
Both IBPS and KPSC scheduled exams on same day. This angers the students who applied for both the exams.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia