ಸಿಬಿಎಸ್ಇ ಹತ್ತನೇ ತರಗತಿ ಫಲಿತಾಂಶ: ಬಾಲಕರೇ ಮೇಲುಗೈ, ಹಿಂದೆ ಸರಿದ ದೆಹಲಿ

Posted By:

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು ಈ ಬಾರಿ ಬಾಲಕರು ಮೇಲುಗೈ ಸಾಧಿಸಿದ್ದಾರೆ.

ತೇರ್ಗಡೆ ಪ್ರಮಾಣದಲ್ಲಿ ಬಾಲಕರು, ಬಾಲಕಿಯರನ್ನು ಹಿಂದಿಕ್ಕಿರುವುದರ ಜೊತೆಯಲ್ಲಿ 10ರಲ್ಲಿ 10 ಗ್ರೇಡ್‌ ಅಂಕ (ಸಿಜಿಪಿಎ) ಪಡೆದವರಲ್ಲೂ ಬಾಲಕರೇ ಮುಂದಿದ್ದಾರೆ. 10ರಲ್ಲಿ 10 ರಲ್ಲಿ 1,05,188 ರಷ್ಟು ಗಳಿಸಿದರೆ, ಬಾಲಕಿಯರು 1,00,950 ಗಳಿಸಿದ್ದಾರೆ. ದೇಶದಾದ್ಯಂತ 16,347 ಶಾಲೆಗಳ 16,67,573 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ದೆಹಲಿ, ಅಲಹಾಬಾದ್, ಚೆನ್ನೈ, ಡೆಹ್ರಾಡೂನ್ ಮತ್ತು ತಿರುವನಂತಪುರ ಐದು ವಲಯಗಳ ಫಲಿತಾಂಶ ಪ್ರಕಟವಾಗಿದ್ದು, ಇನ್ನುಳಿದ ಎರಡು ವಲಯಗಳ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬಿಎಸ್ಇ ಹತ್ತನೇ ತರಗತಿ ಫಲಿತಾಂಶ

ಪ್ರತಿ ವರ್ಷದ ಫಲಿತಾಂಶಕ್ಕಿಂತ ಈ ಬಾರಿ ಶೇ 5.26 ರಷ್ಟು ಕುಸಿತವಾಗಿದೆ. ಈ ವರ್ಷ ಶೇ 90.95ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ 96.21ರಷ್ಟು ಫಲಿತಾಂಶ ದಾಖಲಾಗಿತ್ತು.

ಹಿಂದೆ ಸರಿದ ದೆಹಲಿ

ಶೇ 99.85ರಷ್ಟು ಫಲಿತಾಂಶ ದಾಖಲಿಸುವ ಮೂಲಕ ತಿರುವನಂತರಪುರ ವಲಯ ಮೊದಲ ಸ್ಥಾನದಲ್ಲಿದೆ. ಮದ್ರಾಸ್‌ ವಲಯ (ಶೇ 99.62) 2ನೇ ಸ್ಥಾನಲ್ಲಿದೆ. ಅಲಹಾಬಾದ್‌ ವಲಯಕ್ಕೆ 3ನೇ ಸ್ಥಾನ (ಶೇ 98.23) ದಕ್ಕಿದೆ. ಶೇ 78.09 ಫಲಿತಾಂಶ ದಾಖಲಿಸುವ ಮೂಲಕ ದೆಹಲಿ ವಲಯ ಕಳಪೆ ಪ್ರದರ್ಶನ ತೋರಿದೆ.

ದೆಹಲಿಯಲ್ಲಿ ಉತ್ತೀರ್ಣ ಪ್ರಮಾಣ ಶೇ. 13.67 ಇಳಿಕೆ: ಸಿಬಿಎಸ್​ಇ ದೆಹಲಿ ವಲಯದಲ್ಲಿ ಉತ್ತೀರ್ಣ ಪ್ರಮಾಣ ಶೇ. 13 ಇಳಿಕೆಯಾಗಿದೆ. ಕಳೆದ ವರ್ಷ ಶೇ. 91.06 ಉತ್ತೀರ್ಣ ಪ್ರಮಾಣವಿದ್ದು, ಈ ಬಾರಿ ಶೇ. 78.09ಕ್ಕೆ ಕುಸಿದಿದೆ. ವರ್ಷದಿಂದ ವರ್ಷಕ್ಕೆ ದೆಹಲಿ ವಲಯದ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಉತ್ತೀರ್ಣ ಪ್ರಮಾಣ ಇಳಿಕೆಯಾಗುತ್ತಿದೆ.

ಕಳೆದ ವರ್ಷವೂ ಅತಿ ಹೆಚ್ಚು ಉತ್ತೀರ್ಣ ಫಲಿತಾಂಶ ದಾಖಲಿಸಿದ್ದ ತಿರುವನಂತಪುರ ವಲಯ ಈ ಬಾರಿ ಶೇ. 99.62 ಉತ್ತೀರ್ಣ ಪ್ರಮಾಣದೊಂದಿಗೆ ದಾಖಲೆ ಸ್ಥಾಪಿಸಿದೆ.

English summary
The CBSE Class X results today threw up more than one surprise with the pass percentage dropping by over 5 per cent since last year and boys outperforming girls, a marked shift from previous batches.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia