ಶಾಲೆಗಳಲ್ಲಿ ಬಾಲಕರಿಗೆ ಹೋಂ ಸೈನ್ಸ್ ಶಿಕ್ಷಣ ಕಡ್ಡಾಯ

ಹೋಂ ಸೈನ್ಸ್ ಶಿಕ್ಷಣವು ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರು ಕೂಡ ಕಲಿಯಬೇಕಿದೆ. ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಿಸಲು ಹೋ ಸೈನ್ಸ್ ಅವಶ್ಯವಾಗಿದೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಿದ್ಧಪಡಿಸಿರುವ ಕರಡಿನಲ್ಲಿ ತಿಳಿಸಲಾಗಿದೆ

ಹೋಂ ಸೈನ್ಸ್ ಶಿಕ್ಷಣವು ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರು ಕೂಡ ಕಲಿಯಬೇಕಿದೆ. ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಿಸಲು ಹೋ ಸೈನ್ಸ್ ಅವಶ್ಯವಾಗಿದೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯು ಸಿದ್ಧಪಡಿಸಿರುವ ಕರಡಿನಲ್ಲಿ ತಿಳಿಸಲಾಗಿದೆ.

ಈ ಕರಡಿನಂತೆ ಶಾಲೆಗಳಲ್ಲಿ ಬಾಲಕರು ಇನ್ನುಮುಂದೆ ಕಡ್ಡಾಯವಾಗಿ ಗೃಹವಿಜ್ಞಾನ ವಿಷಯವನ್ನು ಕಲಿಯಬೇಕಿದೆ. ಗೃಹವಿಜ್ಞಾನ ವಿಷಯವನ್ನು ಬಾಲಕರಿಗೆ ಕಡ್ಡಾಯವಾಗಿ ಕಲಿಸಲು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯು ಸಿದ್ಧಪಡಿಸಿದ ಕರಡು ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬಾಲಕರಿಗೆ ಗೃಹವಿಜ್ಞಾನ ಕಡ್ಡಾಯ

ಮಹಿಳೆಯರ ಬಗೆಗೆ ಇರುವ ಸಾಂಪ್ರದಾಯಿಕ ಮನಸ್ಥಿತಿಯನ್ನು ಮುರಿಯಲು ಪುರುಷರು ಹೊಂ ಸೈನ್ಸ್ ಕಲಿಯುವಂತೆ ಪ್ರೇರೇಪಿಸಬೇಕು. ಇದರಿಂದ ಪುರುಷರೂ ಮಹಿಳೆಯರ ಬದುಕು ಉತ್ತಮಗೊಳ್ಳಲು ಕೊಡುಗೆ ನೀಡಿದಂತಾಗುತ್ತದೆ. ಪುರುಷ-ಮಹಿಳೆ ಇಬ್ಬರೂ ದುಡಿದರೂ ಮಹಿಳೆಯರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ನ ಕೆಲ ದಿನಗಳ ಹಿಂದೆ ಹೇಳಿದ್ದರು.

16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ನಿಯಮಗಳನ್ನು ಪರಿಷ್ಕರಿಸಲಾಗಿದೆ. 2001ರ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕರಡು ನೀತಿಯನ್ನು ಪುನರ್‌ರೂಪಿಸಿದೆ. ಲಿಂಗ ಸೂಕ್ಷ್ಮತೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಶಾಲೆಗಳ ಪಠ್ಯಕ್ರಮವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಪುನರ್‌ ರೂಪಿಸಬೇಕು ಎಂದು ಕರಡು ನೀತಿಯಲ್ಲಿ ತಿಳಿಸಲಾಗಿದೆ.

ಗೃಹ ವಿಜ್ಞಾನ ಹಾಗೂ ದೈಹಿಕ ಶಿಕ್ಷಣವನ್ನು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ. ಅದೇ ರೀತಿ ಉದ್ಯೋಗಸ್ಥ ಮಹಿಳೆಯರಿಗೆ ಉತ್ತೇಜನ, ಮಹಿಳಾ ನೇತೃತ್ವದ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ, ವಾಣಿಜ್ಯ ಸಂಸ್ಥೆಗಳಲ್ಲಿ ಪಾಲನಾ ಕೇಂದ್ರಗಳನ್ನು ಕಡ್ಡಾಯಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ.

ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವುದು, ತೆರಿಗೆ ವಿನಾಯಿತಿ ಹಾಗೂ ಚಿಕ್ಕ ವಯಸ್ಸಿನಲ್ಲಿ ಲಿಂಗ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಇಲಾಖೆಯು ಹಲವು ಶಿಫಾರಸುಗಳನ್ನು ಮಾಡಿದೆ. 2017ರ ರಾಷ್ಟ್ರೀಯ ಮಹಿಳಾ ನೀತಿ ನ್ನು ಸಿದ್ಧಪಡಿಸಿದ್ದು ಇದಕ್ಕೆ ಸಚಿವರ ಸಮಿತಿ ಒಪ್ಪಿಗೆ ನೀಡಿದೆ. ಸಚಿವ ಸಂಪುಟದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಸಮಾಜದಲ್ಲಿನ ಲಿಂಗ ತಾರತಮ್ಯವನ್ನು ಹೋಗಲಾಡಿಸುವುದಕ್ಕಾಗಿ ಹುಡುಗರನ್ನು ಕಾಲೇಜುಗಳಲ್ಲಿ ಹೋಂ ಸೈನ್ಸ್ ಕಲಿಯಲು ಪ್ರೇರೆಪಿಸಬೇಕು ಮತ್ತು ಹೆಣ್ಣು ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ಕಲಿಸಬೇಕು ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸಲಹೆ ನೀಡಿದ್ದಾರೆ.

ಹೋಂ ಸೈನ್ಸ್ ಕೋರ್ಸ್ ನಲ್ಲಿ ಆಹಾರ ಮತ್ತು ನ್ಯೂಟ್ರಿಷಿಯನ್, ಫ್ಯಾಬ್ರಿಕ್ ಮತ್ತು ಉಡುಪು ವಿನ್ಯಾಸ, ಹ್ಯೂಮನ್ ಡೆವಲಪ್ಮೆಂಟ್, ಸಂಪನ್ಮೂಲ ನಿರ್ವಹಣೆ, ಸಂವಹನ ಮತ್ತು ವಿಸ್ತರಣೆ ಇವೇ ಮೊದಲಾದ ವಿಷಯಗಳ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಬಹುದು.

ಹೋಮ್ ಸೈನ್ಸ್ ಭಾರತದಾದ್ಯಂತ ಮಾನ್ಯತೆ ಪಡೆದ ವೃತ್ತಿಯನ್ನೊದಗಿಸುತ್ತದೆ. ಶಾಲೆ-ಕಾಲೇಜು, ಆಸ್ಪತ್ರೆ, ಕ್ಷೇಮಾಭಿವೃದ್ಧಿ ಸಂಸ್ಥೆ, ಉಡುಪು ಮಾರಾಟ, ರೆಸ್ಟೋರೆಂಟ್ಸ್, ಫ್ಯಾಷನ್ ಜರ್ನಲಿಸಂ, ಸೇವಾ ವಲಯಗಳು, ಕೌನ್ಸೆಲಿಂಗ್, ಕೆಫೆಟೇರಿಯಾ, ಕೆಟರಿಂಗ್, ಕ್ಯಾಂಟೀನ್, ರೆಸ್ಟೋರೆಂಟ್, ಆಹಾರ ಸಂರಕ್ಷಣೆ ಘಟಕಗಳಲ್ಲಿ ಉದ್ಯೋಗ ಕಂಡುಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Boys may have to compulsorily study home science in school if a draft proposal prepared by the women and child development (WCD) ministry to promote gender sensitivity is approved by the Union cabinet.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X