ನೊಬೆಲ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು?

Posted By:

ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ. ವಿಜ್ಞಾನಿ ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ.

ಸರ್ಕಾಡಿಯನ್ ಗಡಿಯಾರ ಸಂಶೋಧಕರಿಗೆ 2017ನೇ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, 1895ರಲ್ಲಿ ತನ್ನ ಸಂಪತ್ತಿನ 94% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.

ನೊಬೆಲ್ ಪ್ರಶಸ್ತಿ ಮಾಹಿತಿ

ನೊಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು

  • ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.)
  • ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.)
  • ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ಕ್ಯಾರೋಲಿನ್‌ಸ್ಕಾ ಸಂಸ್ಥೆ)ಯು ನಿರ್ಧರಿಸುತ್ತದೆ.)
  • ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.)
  • ನೊಬೆಲ್ ಶಾಂತಿ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ ನಾರ್ವೆಯ ನೊಬೆಲ್ ಸಮಿತಿ)ಯು ನಿರ್ಧರಿಸುತ್ತದೆ.)
  • ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ(ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.)
  • ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ (ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು 1969 ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)

ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು

ರವೀಂದ್ರನಾಥ ಠಾಗೋರ್ - ಸಾಹಿತ್ಯದಲ್ಲಿ (1913)
ಸರ್. ಸಿ. ವಿ. ರಾಮನ್ - ಭೌತಶಾಸ್ತ್ರದಲ್ಲಿ (1930)
ಡಾ. ಹರಗೋಬಿಂದ ಖುರಾನ - ವೈದ್ಯಶಾಸ್ತ್ರದಲ್ಲಿ (1968)
ಮದರ್ ತೆರೇಸಾ - ಶಾಂತಿ ಪ್ರಶಸ್ತಿ (1979)
ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರದಲ್ಲಿ (1983)
ಅಮರ್ತ್ಯ ಸೇನ್ - ಅರ್ಥಶಾಸ್ತ್ರದಲ್ಲಿ (1998)
ಡಾ. ರಾಜೇಂದ್ರಕುಮಾರ್ ಪಚೌರಿ-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' (2007)
ವೆಂಕಟರಾಮನ್ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ (2009)
ಕೈಲಾಸ್ ಸತ್ಯಾರ್ಥಿ, ಶಾಂತಿ (2014)

1907 ರಿಂದ 2016 ರವರೆಗೂ 911 ಮಂದಿಗೆ 579 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಮಾತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿಲ್ಲ.

English summary
The Nobel Prize is a set of annual international awards bestowed in several categories by Swedish and Norwegian institutions in recognition of academic, cultural or scientific advances.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia