ಯುವಕರಿಗೆ ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

Posted By:

ಇಂದು ಯುವಕರು ಹೆಚ್ಚು ಭಾರತೀಯ ಸೇನೆ ಕಡೆ ಮುಖ ಮಾಡುತ್ತಿದ್ದಾರೆ. ಸೈನ್ಯ ಸೇರಿ ದೇಶ ಸೇವೆ ಮಾಡುವ ಹಸಿವು ಹೆಚ್ಚಾಗಿದೆ.

ದೇಶದ ಅತ್ಯುನ್ನತ ಗೌರವ ತಂದು ಕೊಡುವ ಸೈನಿಕ ವೃತ್ತಿ ತನ್ನ ವಿವಿಧ ವಿಭಾಗಗಳಾದ ವಾಯುಪಡೆ, ನೌಕಾದಳ ಮತ್ತು ಗಡಿಗಳಲ್ಲಿ ಸೇವೆ ಮಾಡಲು ಪ್ರತಿ ವರ್ಷ ಸಾವಿರಾರು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಸೇನೆ ಸೇರುವವರಿಗೆ ಉತ್ತಮ ಸೌಲಭ್ಯಗಳನ್ನು ಸಹ ನೀಡುತ್ತಿದೆ.

ಭಾರತೀಯ ಸೇನೆ ಇತಿಹಾಸ ಮಾತ್ರ ರೋಚಕ!

ಉತ್ತಮ ದೈಹಿಕ ಸಾಮರ್ಥ್ಯ ಮತ್ತು ವಿದ್ಯಾಭ್ಯಾಸ ಹೊಂದಿದ ಯುವಕರು ಸೇನೆ ಕಡೆಹೆಚ್ಚು ಆಕರ್ಷಿತರಾಗಿದ್ದು ಮುಂಬರುವ ದಿನಗಳಲ್ಲಿ ಭಾರತೀಯ ಸೇನೆ ಇನ್ನಷ್ಟು ಬಲಗೊಳ್ಳುವ ಎಲ್ಲ ಸೂಚನೆಗಳು ಕಂಡಿವೆ.

ಐಐಟಿ ಗೆ ಗುಡ್ ಬೈ ಹೇಳಿ ದೇಶ ಸೇವೆಗೆ ಜೈ ಎಂದ ಶಿವಾಂಶ್‌ ಜೋಷಿ

ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

ಸೇನೆಯಲ್ಲಿ ಕಾಲಕ್ಕೆ ತಕ್ಕಂತೆ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿರುತ್ತದೆ. ಜೆನೆರಲ್ ಡ್ಯೂಟಿ ಸೋಲ್ಡ್ಜರ್, ಟ್ರೇಡ್ಸ್ಮೆನ್, ಕ್ಲರ್ಕ್, ನರ್ಸಿಂಗ್ ಅಸಿಸ್ಟಂಟ್ ಸೇರಿದಂತೆ ವಿವಿಧ ಟೆಕ್ನಿಕಲ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಇನ್ನು ಈ ನೇಮಕಾತಿಗೆ ಉತ್ತಮ ವೇತನ ಕೂಡ ನೀಡಲಾಗುತ್ತದೆ. ಸೇನೆಯಲ್ಲಿ ಅನುಭವ ಹೆಚ್ಚಿದಂತೆಲ್ಲ ವೇತನವು ಅವರ ಸೇವೆಗೆ ಅನುಗುಣವಾಗಿ ಏರಿಕೆಯಾಗುತ್ತದೆ. ವಾರ್ಷಿಕ 8 ರಿಂದ 10 ಲಕ್ಷದವರೆಗೂ ವೇತನ ಪಡೆಯಬಹುದು.

ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

ಭಾರತೀಯ ಸೇನೆ ಯಲ್ಲಿ ನಾಗರಿಕ ಸೇವೆಗಳ ನೇಮಕಾತಿ ಕೂಡ ಅಷ್ಟೇ ಮಹತ್ವ ಪಡೆದಿದೆ. ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ವಿವಿಧ ಹುದ್ದೆಗಳ ಪಟ್ಟಿ

ವಾಷರ್ಮೆನ್, ಸ್ವೀಪರ್, ಚೆಫ್, ಬಾರ್ಬರ್, ಟೈಲರ್, ಚೌಕಿದಾರ್, ಮೆಸ್ಸೆಂಜರ್, ಸ್ಟೆನೋಗ್ರಾಫೆರ್, ಕ್ಲರ್ಕ್, ವಾರ್ಡ್ ಹೆಲ್ಪರ್, ಕಾರ್ಪೆಂಟರ್, ಪೈಂಟರ್, ಬೂಟ್ ರಿಪೈರಾರ್, ಸಫಾಯಿವಾಲಾ

ವೇತನ ಶ್ರೇಣಿ: ರೂ.15000 ದಿಂದ 30000/-

ವಿದ್ಯಾರ್ಹತೆ: ಎಸ್.ಎಸ್.ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಾಯುಸೇನೆ

ವಾಯುಸೇನೆ ತನ್ನದೇ ಆದ ಪ್ರತ್ಯೇಕ ಸೇನೆ ಹೊಂದಿದ್ದು, ಇಲ್ಲಿಯೂ ಟೆಕ್ನಿಷಿಯನ್, ಪೈಲಟ್, ಏರ್ಮನ್, ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳ ನೇಮಕಾತಿ ನಡೆಯುತ್ತದೆ.

ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

ವಿವಿಧ ಹುದ್ದೆಗಳಿಗೆ ತನ್ನದೇ ಆದ ವಿದ್ಯಾರ್ಹತೆ ಕೇಳುವ ಇಲ್ಲಿ ವೇತನ ಕೂಡ ಉತ್ತಮವಾಗಿದೆ.

ವೇತನ ವಿವರ

ಟೆಕ್ನಿಷಿಯನ್: ರೂ.32769/-
ಪೈಲಟ್: ರೂ.103638/-
ಏರ್ಮನ್:ರೂ.45568/-
ಏರ್ಫೋರ್ಸ್ ಪೈಲಟ್: ವಾರ್ಷಿಕ 9 ರಿಂದ ಲಕ್ಷ
ಅಡ್ಮಿನಿಸ್ಟ್ರೇಟಿವ್ ಆಫೀಸರ್: ಮಾಸಿಕ 90 ಸಾವಿರದಿಂದ 2 ಲಕ್ಷ

ನೌಕಾದಳ

ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ಲಕ್ಷಾಂತರ ಜನರು ಕಾರ್ಯನಿರತರಾಗಿದ್ದಾರೆ. ಇದು ನೌಕಾ ವಾಯುಪಡೆಯನ್ನು ಕೂಡ ಹೊಂದಿದೆ.

ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

ಹುದ್ದೆ ಮತ್ತು ವೇತನದ ವಿವರ

ಸಬ್ ಲೆಫ್ಟಿನಂಟ್: ರೂ.15600-39100/-
ಲೆಫ್ಟಿನಂಟ್ ಕಮ್ಯಾಂಡರ್:ರೂ.15600-39100/-
ಕಮ್ಯಾಂಡರ್:ರೂ.37000-67000/-
ಕ್ಯಾಪ್ಟನ್:ರೂ.37000-67000/-
ಕೊಮೊಡೊರ್: ರೂ.ರೂ.37000-67000/-
ವೈಸ್ ಅಡ್ಮಿರಲ್:ರೂ.67000-79000/-
ಅಡ್ಮಿರಲ್:ರೂ.67000-79000/-

ಪೇದೆಗಳು

ಇಂಡಿಯನ್ ಆರ್ಮಿ ಜಿಡಿ ಕಾನ್ಸ್ಟೇಬಲ್, ಬಿಎಸ್ಸೆಫ್, ಸಿ ಆರ್ ಪಿ ಎಫ್ , ಸಿ ಐ ಎಸ್ ಎಫ್ ಸಿ ಗಳಲ್ಲಿ ಕಾನ್ಸ್ಟೇಬಲ್ ಮತ್ತು ಆಫೀಸರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

ಹುದ್ದೆ ಮತ್ತು ವೇತನ

ಇಂಡಿಯನ್ ಆರ್ಮಿ ಜಿಡಿ ಕಾನ್ಸ್ಟೇಬಲ್:ರೂ.25000/-
ಬಿಎಸ್ಸೆಫ್ (ಬಾರ್ಡರ್ ಸೆಕ್ಯುಟಿಟಿ ಫೋರ್ಸ್): ರೂ.23000/-
ಸಿ ಆರ್ ಪಿ ಎಫ್ (ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್): ರೂ.15600-60600/-
ಸಿ ಐ ಎಸ್ ಎಫ್ ಸಿ(ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್): ರೂ.20200/-
ಸಹಸ್ತ್ರ ಸೀಮಾ ಬಲ್ ಕಾನ್ಸ್ಟೇಬಲ್: ರೂ.21700/-

English summary
Among all the government jobs, defense is the most prestigious one as the entire nation is dependent on our country's guards for its safety and security.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia