ಈ ಶಾಲೆಯಲ್ಲಿ ಪುಸ್ತಕವಿಲ್ಲ, ಪಾಠವಿಲ್ಲ, ಪರೀಕ್ಷೆ ಇಲ್ಲವೇ ಇಲ್ಲ!

Posted By:

ಇಂದಿನ ದಿನಗಳಲ್ಲಿ ಶಾಲೆಯೆಂದರೆ ಪಠ್ಯಪುಸ್ತಕ, ಶಿಕ್ಷಕರು ಮತ್ತು ಪರೀಕ್ಷೆಗಳು ಮಾತ್ರ ಎಂದೆನಿಸಿವೆ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ.ಶಾಲೆಗೆ ಸೇರಿಸುವ ಮುನ್ನ ಐಸಿಎಸ್ಇ, ಸಿಬಿಎಸ್ಇ ಎಂದು ತಲೆಕೆಡಿಸಿಕೊಂಡು ಮಕ್ಕಳನ್ನು ಉನ್ನತ ದರ್ಜೆಯ ಶಾಲೆಗಳಿಗೆ ಸೇರಿಸಲು ರಾತ್ರಿ ಇಡೀ ಕ್ಯೂ ನಿಲ್ಲುತ್ತಾರೆ.

ಮಕ್ಕಳು ಶಾಲೆಗೆ ಸೇರಿಸಿದ ಮೇಲೊಂತು ಪೋಷಕರ ಪಾಡು ಹೇಳತೀರದು. ಪ್ರತಿ ದಿನ ಹೋಂ ವರ್ಕ್ ಮಾಡಿಸುವುದು, ಟ್ಯೂಷನ್ ಕಳುಹಿಸುವುದು, ಪರೀಕ್ಷೆ ಬಂತೆಂದರೆ ಸಾಕು ಮಕ್ಕಳ ಜೊತೆ ತಾವು ನಿದ್ದೆಗೆಟ್ಟು ಮಕ್ಕಳಿಗೆ ಓದಿಸುತ್ತಾರೆ. ಇನ್ನು ಮಕ್ಕಳ ಫಲಿತಾಂಶದ ಬಗ್ಗೆ ಹೇಳಲೇ ಬೇಕಿಲ್ಲ ಮಕ್ಕಳು ರ್ಯಾಂಕ್ ಬರುವುದೊಂದೆ ಅವರ ಸಾಧನೆ ಎನ್ನುವವರೆಗೂ ಆಲೋಚಿಸುತ್ತಾರೆ. ಆದರೆ ಇಲ್ಲೊಂದು ಶಾಲೆ ಈ ಎಲ್ಲದಕ್ಕೂ ತದ್ವಿರುದ್ಧ ಇಲ್ಲಿ ಯಾವುದೇ ಪಾಠಗಳು ನಡೆಯುವುದಿಲ್ಲ, ಪರೀಕ್ಷೆಗಳಿಲ್ಲ, ಹೋಂ ವರ್ಕ್, ಅಸೈನ್ಮೆಂಟ್ ಪ್ರಾಜೆಕ್ಟ್ ಎಂಬ ತಲೆನೋವುಗಳು ಇಲ್ಲವೇ ಇಲ್ಲ.

ಈ ಶಾಲೆಯಲ್ಲಿ ಪರೀಕ್ಷೆಯಿಲ್ಲ.

ಈ ರೀತಿಯ ಶಾಲೆಗಳನ್ನು ನಾವು ಊಹಿಸಲು ಸಾಧ್ಯವಿಲ್, ಆದರೂ ಇಂತದ್ದೊಂದು ಶಾಲೆ ಇದೆ. ಅಮೆರಿಕದ ಬ್ರೂಕ್ಲಿನ್ ಫ್ರೀ ಸ್ಕೂಲ್ ಇದಕ್ಕೆ ನೈಜ ಉದಾಹರಣೆ. ಈ ಶಾಲೆಯಲ್ಲಿ ಕಲಿಸಲು ಶಿಕ್ಷಕರಿಲ್ಲ ಬದಲಾಗಿ ವಿದ್ಯಾರ್ಥಿಗಳೇ ಪಾಠ ಮಾಡುತ್ತಾರೆ. ಇಂಥದ್ದೇ ಪಾಠ ಮಾಡಬೇಕೆಂಬ ನಿರ್ಬಂಧವೂ ಇಲ್ಲ, ಯಾವ ವಿಷಯದ ಬಗ್ಗೆ ಬೇಕಾದರು ಇಲ್ಲಿ ಚರ್ಚೆಗಳಾಗಬಹುದು. . ವಿದ್ಯಾರ್ಥಿಗಳು ಟಿ.ವಿ ನೋಡಬಹುದು, ಬೇಜಾರಾದರೆ ಹೊರಗೆ ಹೋಗಿ ತಿರುಗಾಡಿಯೂ ಬರಬಹುದು. ನಿದ್ದೆಯನ್ನೂ ಮಾಡಬಹುದು. ಇಷ್ಟವಿದ್ದರೆ ಶಾಲೆಗೆ ಬರಬಹುದು, ಇಲ್ಲವೆಂದರೆ ಬರದೆಯೂ ಇರಬಹುದು.

ಮಕ್ಕಳನ್ನು ಸ್ವತಂತ್ರವಾಗಿ ಚಿಂತಿಸುವ ರೀತಿಯನ್ನು ಚಿಕ್ಕಂದಿನಲ್ಲೇ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಶಾಲೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಶಿಕ್ಷಕರು ಬರಿ ಹೆಸರಿಗೆ ಮಾತ್ರ ಅವರ ಕೆಲಸ ಏನಿದ್ದರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದಷ್ಟೆ.

ಈ ಶಾಲೆಯ ಸಂಸ್ಥಾಪಕ ಅಲೆನ್ ಬರ್ಗರ್ ಅಮೆರಿಕಾದ ಮ್ಯಾನ್ಹಟನ್ ಹೈ ಸ್ಕೂಲಿನಲ್ಲಿ ಸಹಾಯಕ ಪ್ರಾಂಶುಪಾಲರಾಗಿದ್ದವರು. ಬರ್ಗರ್ ಅವರಿಗೆ ಈ ರೀತಿ ಪರ್ಯಾಯ ಶಾಲೆ ಪ್ರಾರಂಭಿಸುವ ಅಲೋಚನೆ ಹುಟ್ಟಲು ಕಾರಣ 1960-70ರ ಫ್ರೀ ಸ್ಕೂಲ್ ಮೂವ್ಮೆಂಟ್ (ಪರ್ಯಾಯ ಶಿಕ್ಷಣದ ಚಳವಳಿ). ತಮ್ಮ ಆಲೋಚನೆಯನ್ನು ನ್ಯೂಸ್ ಲೆಟರ್ ಒಂದರಲ್ಲಿ ಪ್ರಕಟಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಇದರ ಪ್ರತಿಫಲವಾಗಿ 2004 ರಲ್ಲಿ ಈ ಶಾಲೆ ಆರಂಭವಾಯಿತು.

ವಿಶೇಷ ಕಲ್ಪನೆಯೊಂದಿಗೆ ಆರಂಭವಾದ ಈ ಶಾಲೆಗೆ ಆರಂಭದಲ್ಲಿ ಪೋಷಕರು ಮಕ್ಕಳನ್ನು ಸೇರಿಸಲು ಹಿಂದೇಟಾಕಿದ್ದರು. ಕೇವಲ 30 ವಿದ್ಯಾರ್ಥಿಗಳು ಮತ್ತು ಮೂರು ಶಿಕ್ಷಕರೊಂದಿಗೆ ಆರಂಭವಾದ ಈ ಶಾಲೆ ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಹೊಂದುತ್ತಿದೆ. ಇಂದು ಈ ಶಾಲೆಯಲ್ಲಿ ನೂರಕ್ಕೂ ಅಧಿಕ ಮಂದಿ ಕಲಿಯುತ್ತಿದ್ದಾರೆ.

ಇಲ್ಲಿ ಮಕ್ಕಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ನಾಲ್ಕನೆ ವಯಸ್ಸಿಗೆ ಶಾಲೆಗೆ ಸೇರಿಸಿಕೊಳ್ಳಲಾಗುವುದು. 4 ರಿಂದ 11 ವಯಸ್ಸಿನವರಿಗೆ ಒಂದು ಹಂತವಾದರೆ, 11ರಿಂದ 18 ವಯಸ್ಸಿನ ವಿದ್ಯಾರ್ಥಿಗಳಿಗೆ ಮತ್ತೊಂದು ಹಂತದಲ್ಲಿ ಶಿಕ್ಷಣ ನೀಡಲಾಗುತ್ತದೆ.

English summary
The Brooklyn Free School is a private, ungraded, democratic free school in Fort Greene, Brooklyn, founded in 2004. Students range in age from 4 to 18 years old. The school follows the noncoercive philosophy.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia