Ruth Clare D'silva : ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದ ಮಂಗಳೂರಿನ ಹುಡುಗಿ

ಸಿಎ ಪರೀಕ್ಷೆಯಲ್ಲಿ ಫಸ್ಟ್ ರ್ಯಂಕ್ ಪಡೆದ ಮಂಗಳೂರಿನ ಹುಡುಗಿ ರುತ್ ಕ್ಲ್ಯಾರ್ ಡಿಸಿಲ್ವ

ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಸಿಎ ಫೌಂಡೇಶನ್​ ಮತ್ತು ಫೈನಲ್ ಪರೀಕ್ಷೆಗಳ ಫಲಿತಾಂಶವನ್ನು ​ ನಿನ್ನೆ ​ಬಿಡುಗಡೆ ಮಾಡಲಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಟಾಪರ್ ಆಗಿದ್ದು, ಸಿಎ ಹಳೆಯ ಕೋರ್ಸ್​​​ ಮಾಡಿ ಅಂತಿಮ ಪರೀಕ್ಷೆ ಬರೆದಿದ್ದ ಮಂಗಳೂರಿನ ರುಥ್​ ಕ್ಲೇರ್​ ಡಿಸಿಲ್ವಾ ಶೇ.59 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್​ ಪಡೆದಿದ್ದಾರೆ.

 

ರುಥ್​ ಕ್ಲೇರ್​ ಡಿಸಿಲ್ವಾ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರಾಂಕ್ ಪಡೆದ ಪ್ರಥಮ ಮಂಗಳೂರಿಗನವರಾಗಿದ್ದು, ರೋಸಿ ಮಾರಿಯಾ ಡಿಸಿಲ್ಲಾ ಮತ್ತು ರಫರ್ಟ್ ಡಿಸಿಲ್ಲಾ ದಂಪತಿಯ ಪುತ್ರಿಯಾಗಿದ್ದಾರೆ.

ಡಿಸಿಲ್ವಾ ಶಾಲಾ ದಿನಗಳಿಂದಲೂ ಅಕೌಂಟೆನ್ಸಿ ವಿಷಯದ ಕುರಿತು ಹೆಚ್ಚು ಆಸಕ್ತರಾಗಿದ್ದರು. ಹಾಗಾಗಿಯೇ ದಿನಕ್ಕೆ ೮ ರಿಂದ ೯ ತಾಸುಗಳ ಕಾಲ ಸಿಎ ಓದಿಗೆ ಮೀಸಲಿಟ್ಟು, ಇಂದು ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪರೀಕ್ಷೆಯನ್ನು ಎದುರಿಸಿದ್ದ ಆಕೆ ಛಲ ಬಿಡದೆ ಮತ್ತೆ ಪರೀಕ್ಷೆಯನ್ನು ಎದುರಿಸಿ ಸಾಧಿಸಿ ತೋರಿಸಿದ್ದಾರೆ ಎಂದು ಆಕೆಯ ಮಾರ್ಗದರ್ಶಕ ಹಾಗೂ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ (ಸಿಐಎಲ್)ನ ಸಂಚಾಲಕ, ನಂದಗೋಪಾಲ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ದೇಶಕ್ಕೆ ಪ್ರಥಮ ಶ್ರೇಣಿ ಪಡೆದ ರುತ್ ಸಾಧನೆಯಿಂದಾಗಿ ಆಕೆಯ ಮಾರ್ಗದರ್ಶಕರ ಜೊತೆಗೆ ಆಕೆಯ ಮನೆಯವರಿಗೂ ಸಂತೋಷ ತಂದಿದೆ. ಸಿಎ ಪರೀಕ್ಷೆ ಬರೆದ ಮೂರನೇ ಪ್ರಯತ್ನದಲ್ಲಿಯೇ ರುತ್ ಕ್ಲ್ಯಾರ್ ಅವರು ಪ್ರಥಮ ಶ್ರೇಣಿಗೆ ಭಾಜನರಾಗಿರುವುದು ಮಂಗಳೂರಿಗೆ ಹಮ್ಮೆ ತಂದಿದೆ.

 

ರುತ್ ಕ್ಲ್ಯಾರ್ ಡಿಸಿಲ್ವಾರಿಗೆ ಸಿಎ ಬಗ್ಗೆ ತರಬೇತಿ ನೀಡಿರುವ ವಿವಿಯನ್ ಪ್ರತಿಕ್ರಿಯೆ ನೀಡಿ, ಆಕೆ ಸಂವಹನ ಕೌಶಲ್ಯ ಅತ್ಯುತ್ತಮವಾಗಿದ್ದು, ತನ್ನ ಸಾಮರ್ಥ್ಯದ ಬಗ್ಗೆ ದೃಢ ನಂಬಿಕೆಯನ್ನು ಆಕೆ ಹೊಂದಿರುವುದೇ ಆಕೆಯ ಈ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಿಪಿಟಿ ಪರೀಕ್ಷೆಯಲ್ಲಿ ರುತ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ಸೈಂಟ್ ತೆರೆಸಾದಲ್ಲಿ ಶಾಲಾ ವಿದ್ಯಾಭ್ಯಾಸ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದಿಂದ ಪದವಿ ಶಿಕ್ಷಣ ಪಡೆದಿದ್ದಾರೆ.

"ಈ ಬಾರಿಯ ಪರೀಕ್ಷೆ ಕಠಿಣವಾಗಿತ್ತು. ಆದರೆ ನಾನು ಅತ್ಯುತ್ತಮವಾಗಿ ಪರೀಕ್ಷೆಯನ್ನು ಬರೆದಿದ್ದೆ. ಆದರೆ ಪ್ರಥಮ ಶ್ರೇಣಿ ನಿರೀಕ್ಷೆ ಮಾಡಿರಲಿಲ್ಲ. ಸಿಎ ಪರೀಕ್ಷೆಯನ್ನು ತೇರ್ಗಡೆಯಾಗುವುದೇ ಅದ್ಭುತ,'' ಎಂದು ರುತ್ ಡಿಸಿಲ್ವಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಿಎ ಫೈನಲ್ ಪರೀಕ್ಷೆಗಳು ಜುಲೈ 5 ಮತ್ತು ಜುಲೈ 19 ರ ನಡುವೆ ನಡೆದಿದ್ದವು. ಸಿಎ ಫೈನಲ್ (ಹಳೆಯ ಸ್ಕೀಮ್) ಗ್ರೂಪ್ 1 ಪರೀಕ್ಷೆಯನ್ನು ಜುಲೈ 5, 7, 9 ಮತ್ತು 11 ರಂದು ನಡೆಸಲಾಯಿತು ಮತ್ತು ಸಿಎ ಫೈನಲ್ (ಹಳೆಯ ಸ್ಕೀಮ್) ಗ್ರೂಪ್ 2 ಪರೀಕ್ಷೆಗಳನ್ನು ಜುಲೈ 13, 15, 17 ಮತ್ತು 19 ರ ವರೆಗೆ ನಡೆಸಲಾಯಿತು.

For Quick Alerts
ALLOW NOTIFICATIONS  
For Daily Alerts

English summary
Mangaluru girl ruth clare d'silva has got all india first rank in CA july 2021 examination.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X