ಚಿತ್ರಕಲಾ ಸ್ಪರ್ಧೆ: ಮಕ್ಕಳ ದಿನಾಚರಣೆ ಪ್ರಯುಕ್ತ ಕೆರಿಯರ್ ಇಂಡಿಯಾ 'ಚಿತ್ರಕಲಾ-2017'

Posted By:

ನೀವು ಉತ್ತಮವಾಗಿ ಚಿತ್ರ ಬಿಡಿಸುತ್ತೀರಾ?, ನಿಮಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆಯಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಮಕ್ಕಳ ದಿನಾಚರಣೆ ಅಂಗವಾಗಿ ಕೆರಿಯರ್ ಇಂಡಿಯಾ ಚಿತ್ರಕಲಾ 2017 ನ್ಯಾಷನಲ್ ಲೆವೆಲ್ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ. ನೀವು ರಚಿಸಿದ ಚಿತ್ರಗಳ ಫೋಟೋವನ್ನು ನಮಗೆ ಕಳುಹಿಸುವ ಮೂಲಕ ವಿಜೇತರಾಗಿರಿ ಹಾಗೂ ಪ್ರಮಾಣ ಪತ್ರವನ್ನು ಪಡೆಯಿರಿ.

ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಟರ್ಧೆಯನ್ನು ಆಯೋಜಿಸಲಾಗುತ್ತಿದೆ.

ಕೆರಿಯರ್ ಇಂಡಿಯಾ 'ಚಿತ್ರಕಲಾ-2017'

ಸ್ಪರ್ಧೆಯ ವಿವರ

ಚಿತ್ರಕಲಾ ಸ್ಪರ್ಧೆಗೆ ಚಾಲನೆ ದೊರೆತಿದ್ದು, 4 ರಿಂದ 17 ವರ್ಷದೊಳಗಿನ ಮಕ್ಕಳು ಸ್ಪರ್ಧೇಯಲ್ಲಿ ಭಾಗವಹಿಸಬಹುದಾಗಿದೆ.

ಈ ಸ್ಪರ್ಧೆಯಲ್ಲಿ ಮಕ್ಕಳ ವಯೋಮಿಗೆ ತಕ್ಕಂತೆ ಕೆಲವು ವಿಷಯಗಳನ್ನು ನೀಡಲಾಗಿದ್ದು, ಆಯಾ ವಯೋಮಾನದವರು ಅವರಿಗೆ ನೀಡಿರುವ ವಿಷಯಗಳನ್ನಾಧರಿಸಿ ಚಿತ್ರಕಲೆ ಬಿಡಿಸಲು ಸೂಚಿಸಲಾಗಿದೆ.

ವಯಸ್ಸುವಿಷಯ
4-7 ವರ್ಷಗಳುನಾನು ಮತ್ತು ನನ್ನ ಗೆಳೆಯರು (Me and my Friends)
8-10 ವರ್ಷಗಳುಮೆಚ್ಚಿನ ಆಟದ ತಾಣ (Favourite play spot)
11-13 ವರ್ಷಗಳುದೊಡ್ಡವರಾದ ಮೇಲೆ ಏನಾಗಲು ಬಯಸುವಿರಿ (What will I become when I grow up?)
14-17 ವರ್ಷಗಳುನಮ್ಮ ನಗರ (My City)

ಚಿತ್ರಕಲಾ 2017 ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನ

ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ತಮ್ಮ ವಯೋಮಾನಕ್ಕೆ ನೀಡಿರುವ ವಿಷಯವನ್ನಾಧರಿಸಿ ರಚಿಸಿರುವ ಚಿತ್ರದ ಫೋಟೋ ತೆಗೆದು studentscorner@oneindia.co.in ವಿಳಾಸಕ್ಕೆ ಇ-ಮೇಲ್ ಮೂಲಕ ಕಳುಹಿಸಬೇಕು.

ಕೆರಿಯರ್ ಇಂಡಿಯಾ 'ಚಿತ್ರಕಲಾ-2017'

ಸೂಚನೆ

  • ನೀವೇ ರಚಿಸಿದ ಚಿತ್ರಗಳಾಗಿರಬೇಕು
  • ನಿಮ್ಮ ಚಿತ್ರಕಲೆಯ ಫೋಟೋ ಉತ್ತಮ ಗುಣಮಟ್ಟದ್ದಾಗಿರಬೇಕು (high resolution).
  • ನಾವು ನೀಡಿರುವ ವಿಷಯದ ಮೇಲೆ ಚಿತ್ರ ರೂಪುಗೊಂಡಿರಬೇಕು
  • ನೀವು ರಚಿಸಿರುವ ಚಿತ್ರಕಲೆಯ ಜೊತೆಗೆ ನಿಮ್ಮ ಸಂಪೂರ್ಣ ಹೆಸರು, ವಿಳಾಸ, ಓದುತ್ತಿರುವ ಶಾಲೆ, ತರಗತಿಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು. (ಅಸ್ಪಷ್ಟ ಮಾಹಿತಿ ಇರುವುದನ್ನು ಪರಿಗಣಿಸಲಾಗುವುದಿಲ್ಲ)

ಕ್ರಿಯಾತ್ಮಕವಾದ, ಸ್ಪಷ್ಟವಾದ ಸುಂದರ ಚಿತ್ರಕಲೆಗಳನ್ನು ಪರಿಗಣಿಸಲಾಗುವುದು. ಮೊದಲು ಬಂದ ಚಿತ್ರಕಲೆಗೆ ಹೆಚ್ಚು ಆದ್ಯತೆ ಇರುತ್ತದೆ. ಹಾಗಾಗಿ ಸ್ಪರ್ಧಾರ್ತಿಗಳು ತಡಮಾಡದೆ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಕಳುಹಿಸತಕ್ಕದ್ದು.

ಈ ಸ್ಟರ್ಧೆಯಲ್ಲಿ ಆಯ್ಕೆಯಾಗುವ ಚಿತ್ರಗಳನ್ನು careerindia.com ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಮೊದಲ ಮೂರು ವಿಜೇತರಿಗೆ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು.

ಪ್ರಮುಖ ದಿನಾಂಕಗಳು

  • ಫೋಟೋಗಳನ್ನು ಇ-ಮೇಲ್ ಮೂಲಕ ಕಳುಹಿಸಲು ಕೊನೆಯ ದಿನಾಂಕ: 08-11-2017
  • ವಿಜೇತರ ಹೆಸರನ್ನು ಪ್ರಕಟಿಸುವ ದಿನಾಂಕ: 14-11-2017

ಇನ್ನೇಕೆ ತಡ.. ಈಗಲೇ ಕುಂಚ ಬಣ್ಣಗಳನ್ನು ಹಿಡಿದು ಚಿತ್ರ ಬಿಡಿಸಲು ಸಿದ್ಧರಾಗಿ.

ಕೆರಿಯರ್ ಇಂಡಿಯಾ ತಂಡದಿಂದ ಮಕ್ಕಳ ದಿನಾಚರಣೆ ಶುಭಾಶಯಗಳು.

English summary
Children's day is around the corner and Careerindia has something exciting for kids out there! Gear up for CHITRAKALA 2017, the painting contest for children to showcase their talents.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia