ಸಿಎಟಿ-2017 ಫಲಿತಾಂಶ ಪ್ರಕಟ: 20 ಮಂದಿಗೆ ಶೇ.100 ರಷ್ಟು ಫಲಿತಾಂಶ

Posted By:

ಐಐಎಂ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ಮತ್ತು ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ದಾಖಲಾತಿ ಪರೀಕ್ಷೆ (ಕ್ಯಾಟ್) ಯ ಫಲಿತಾಂಶ ಹೊರಬಿದ್ದಿದೆ.

ಯುಜಿಸಿ ಎನ್ಇಟಿ 2017: ಫಲಿತಾಂಶ ಪ್ರಕಟ

ನವೆಂಬರ್ 26,2017ರಂದು ದೇಶಾದ್ಯಂತ ಕ್ಯಾಟ್ ಪರೀಕ್ಷೆ ನಡೆದಿತ್ತು. ಈ ಬಾರಿ ದೇಶದ 140 ಕೇಂದ್ರಗಳಲ್ಲಿ ಒಟ್ಟು 1,99,632 ಮಂದಿ ಪರೀಕ್ಷೆ ಬರೆದಿದ್ದರು.

ಉನ್ನತ ಶಿಕ್ಷಣ ಸಮೀಕ್ಷೆ: ರಾಜ್ಯದಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು!

ಸಿಎಟಿ-2017 ಫಲಿತಾಂಶ

ಈ ಬಾರಿಯ ಕ್ಯಾಟ್ ಪರೀಕ್ಷೆಯಲ್ಲಿ 20 ಮಂದಿ ಶೇ.100 ರಷ್ಟು ಫಲಿತಾಂಶ ಪಡೆದು ಅಚ್ಚರಿ ಮೂಡಿಸಿದ್ದಾರೆ. ಕಳೆದ ಬಾರಿ ಕೂಡ
20 ಮಂದಿ ಶೇ. 100 ರಷ್ಟು ಫಲಿತಾಂಶ ಪಡೆದಿದ್ದರು, ಆದರೆ ಕಳೆದಬಾರೀ ಬರಿ ಪುರುಷರೇ ಈ ಸಾಧನೆ ಮಾಡಿದ್ದು, ಈ ಬಾರಿ ಮಹಿಳಾ ಅಭ್ಯರ್ಥಿಗಳು ಕೂಡ ಸೇರಿದ್ದಾರೆ.

ಸಿಎಟಿ-2017 ಫಲಿತಾಂಶ

ಕಳೆದ ಬಾರಿ ಈ ಸಾಧನೆ ಮಾಡಿದವರಲ್ಲಿ ಎಲ್ಲರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು. ಆದರೆ ಈ ಬಾರಿ ಮೂರು ಮಂದಿ ನಾನ್ ಇಂಜಿನಿಯರ್ಸ್ ಇದ್ದಾರೆ.

ಲಕ್ನೋ ಈ ಬಾರಿಯ ಪರೀಕ್ಷೆಯನ್ನು ಆಯೋಜಿಸಿತ್ತು, ಆಂಧ್ರಪ್ರದೇಶದ ಪಾಲಿಗೆ ಹೆಚ್ಚಿನ ಫಲಿತಾಂಶ ಸಿಕ್ಕಿದ್ದು, ಫಲಿತಾಂಶವನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಫಲಿತಾಂಶ ನೋಡುವ ವಿಧಾನ

  • ಕ್ಯಾಟ್ ಮುಖ್ಯ ವೆಬ್ಸೈಟ್ ಗೆ ಭೇಟಿ ನೀಡಿ
  • ರಿಸಲ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಯೂಸರ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ
  • ರಿಸಲ್ಟ್ ಪಡೆಯಿರಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Results for the Common Admission Test (CAT) that will enable candidates to take admission in some of India's top business schools were declared on Monday, January 8.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia