ಕ್ಯಾಟ್ ಪರೀಕ್ಷೆ-2017: 31 ಸಾವಿರಕ್ಕೂ ಅಧಿಕ ಮಂದಿ ಗೈರು

ಐಐಎಂ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ಮತ್ತು ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ದಾಖಲಾತಿ ಪರೀಕ್ಷೆ (ಕ್ಯಾಟ್) ನವೆಂಬರ್ 26 ರಂದು ದೇಶಾದ್ಯಂತ ಸುಸೂತ್ರವಾಗಿ ನಡೆಯಿತು. ಆದರೆ ಈ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಸಂಖ್ಯೆ ಕೊಂಚ ಇಳಿಮುಖ ಕಂಡಿತ್ತು.

 

ಭಾನುವಾರ ನಡೆದ ಪರೀಕ್ಷೆಯಲ್ಲಿ ಮೂವತ್ತೊಂದು ಸಾವಿರಕ್ಕೂ ಅಧಿಕ ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದರು. ಈ ಬಾರಿ ಒಟ್ಟು 2,31,000 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ 31,368 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಐಐಎಂ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಟ್ ಪರೀಕ್ಷೆ-2017

ಈ ಬಾರಿ ಕ್ಯಾಟ್ ಪರೀಕ್ಷೆಯ ಹಾಜರಾತಿಯಲ್ಲಿ ಶೇ.13 ರಷ್ಟು ಇಳಿಕೆಯಾಗಿದೆ. 2015 ರಲ್ಲಿ 39000 (ಶೇ.18) ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ, 2016 ರಲ್ಲಿ 37400 (ಶೇ.16.1) ಮಂದಿ ಗೈರು ಹಾಜರಾಗಿದ್ದರು. ಕಳೆದ ಸಾಲಿಗೆ ಹೋಲಿಸಿದರೆ ಪರೀಕ್ಷೆ ಗೈರು ಹಾಜರಾತಿಯಲ್ಲಿ ಶೇ.3 ರಷ್ಟು ಇಳಿಕೆಯಾಗಿದೆ.

 

ಕೆಲವೆಡೆ ಗೊಂದಲ

ಕ್ಯಾಟ್ ಪರೀಕ್ಷೆಗೆ ಡ್ರೆಸ್ ಕೋಡ್ ಸೂಚಿಸಿದ್ದರು ಅದನ್ನು ನಿರ್ಲಕ್ಷಿಸಿ ಬಂದವರು ಪರೆದಾಡಬೇಕಾಯಿತು. ಚಪ್ಪಲಿ ಹಾಕಿಕೊಂಡು ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್) ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಚಪ್ಪಲಿ ಬಿಟ್ಟು ಪರೀಕ್ಷೆ ಬರೆದರು. ಈ ಮೊದಲೇ ನಿಯಮಗಳನ್ನು ಪ್ರವೇಶಪತ್ರದಲ್ಲಿ ನೀಡಲಾಗಿದ್ದರೂ ಕೆಲವ್ರು ಶೂ, ಚಪ್ಪಲಿ ಮತ್ತು ಬೆಲ್ಟ್ ಧರಿಸಿ ಬಂದ ಕಾರಣ ಪರೀಕ್ಷಾ ಸಿಬ್ಬಂದಿಗಳು ಅವುಗಳನ್ನು ತೆಗೆಸಿ ಅನಂತರ ಪ್ರವೇಶ ಕಲ್ಪಿಸಿದರು. ಕೆಲ ಹುಡುಗಿಯರ ತಲೆಯ ಕ್ಲಿಪ್ ತೆಗಿಸಿ ಪರಿಶೀಲನೆಗೆ ಒಳಪಡಿಸಿ ಪ್ರವೇಶ ಕಲ್ಪಿಸಿದರು.

ಕರ್ನಾಟಕದಲ್ಲಿ ಪರೀಕ್ಷೆ ಸುಸೂತ್ರ

ರಾಜ್ಯದಲ್ಲಿಯೂ ಕ್ಯಾಟ್ ಪರೀಕ್ಷೆ ಸುಸೂತ್ರವಾಗಿ ನಡೆದಿರುವ ಬಗ್ಗೆ ವರದಿಯಾಗಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಎರಡು ಪರೀಕ್ಷೆಗಳು ನಡೆದವು.

ಈ ಬಾರಿಯ ಕ್ಯಾಟ್‌ ಪರೀಕ್ಷೆಯನ್ನು ಐಐಎಂ-ಲಖನೌ ಆಯೋಜಿಸಿತ್ತು. ದೇಶದ 142 ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ಆಯೋಜಿಸಲಾಗಿತ್ತು.

ದೇಶದ 20 ಐಐಎಂ ಹಾಗೂ ಎಫ್‌ಎಂಎಸ್, ಎಸ್‌ಪಿಜೆಐಎಂಆರ್, ಎಂಡಿಎಸ್, ಎನ್ಐಟಿಐಇ, ಟಿಎಪಿಎಂಐ ಸೇರಿ ದೇಶದ ಪ್ರಮುಖ 100 ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕೆ ಕ್ಯಾಟ್ ಮೆರಿಟ್ ಪರಿಗಣಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
More than 31,000 candidates skipped CAT 2017 exam held on November 26, 2017. The total number of candidates registered for the top MBA entrance exam was 2,31,000.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X