ಇವತ್ತು ನಾಳೆಯೊಳಗೆ ಸಿಬಿಎಸ್ಇ ಫಲಿತಾಂಶ ಪ್ರಕಟ

Posted By:

10 ಹಾಗೂ 12ನೇ ತರಗತಿಯ ಸಿಬಿಎಸ್‌ಇ ಫಲಿತಾಂಶಗಳು ನಿಗದಿಯಂತೆ ಪ್ರಕಟವಾಗಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಗುರುವಾರ ಹೇಳಿದ್ದರು. ಸದ್ಯದ ಬೆಳವಣಿಗೆಯಂತೆ ಇವತ್ತು ಇಲ್ಲಾ ನಾಳೆಯೊಳಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಆದರೆ ಫಲಿತಾಂಶ ಪ್ರಕಟಣೆ ದಿನಾಂಕವನ್ನು ಸಚಿವಾಲಯ ಖಚಿತವಾಗಿ ಹೇಳಿಲ್ಲ. ಕಳೆದ ವರ್ಷ ಮೇ 21ರಂದು ಫಲತಾಂಶ ಪ್ರಕಟವಾಗಿತ್ತು. ಈ ಬಾರಿ ಒಂದು ವಾರ ತಡವಾಗಿ ಪರೀಕ್ಷೆಗಳು ಆರಂಭವಾಗಿದ್ದವು. ಇದೇ ಮೇ ಅಂತ್ಯದಲ್ಲಿ ಫಲಿತಾಂಶ ಪ್ರಕಟವಾಗುವ ವಿಶ್ವಾಸವನ್ನು ಮಂಡಳಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ

ಸಿಬಿಎಸ್ಇ ಫಲಿತಾಂಶ ಪ್ರಕಟ

ಸಿಬಿಎಸ್ಇ ಹನ್ನೆರಡನೇ ತರಗತಿಯ ಫಲಿತಾಂಶ ಮುಂದೂಡಲಾಗಿದೆ. ಈ ಹಿಂದೆ ತಿಳಿಸಿದ್ದಂತೆ ಮೇ 24 ಕ್ಕೆ ಫಲಿತಾಂಶಗಳು ಪ್ರಕಟಗೊಳ್ಳಬೇಕಿತ್ತು, ಆದರೆ ದೆಹಲಿ ಹೈ ಕೋರ್ಟ್ ತೀರ್ಪಿನನ್ವಯ ಫಲಿತಾಂಶವು ವಿಳಂಬವಾಗಿದೆ. ಕೃಪಾಂಕ ಇಲ್ಲದೆಯೇ ಈ ವಾರ ಫಲಿತಾಂಶ ಪ್ರಕಟಿಸಲು ಸಿಬಿಎಸ್‌ಇ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಈ ವರ್ಷ ಕೃಪಾಂಕ ಪದ್ಧತಿ ಮುಂದುವರಿಸಬೇಕು ಎಂದು ಹೈಕೋರ್ಟ್‌ ತೀರ್ಪಿನಿಂದಾಗಿ ಕೃಪಾಂಕ ನೀಡಿ ಫಲಿತಾಂಶ ಪ್ರಕಟಿಸಬೇಕಾದ ಅನಿವಾರ್ಯಕ್ಕೆ ಸಿಬಿಎಸ್‌ಇ ಸಿಲುಕಿದೆ.

ವಿಳಂಬಕ್ಕೆ ಕಾರಣ

ಕ್ಲಿಷ್ಟ ಪ್ರಶ್ನೆಗಳಿಗೆ ಕೃಪಾಂಕ ನೀಡುವ ಪದ್ಧತಿ ರದ್ದತಿಗೆ ದೆಹಲಿ ಹೈಕೋರ್ಟ್‌ ತಡೆ ನೀಡಿದೆ. ಅದನ್ನು ತೆರವುಗೊಳಿಸಲು ಇರುವ ಅವಕಾಶಗಳ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಪರಿಶೀಲನೆ ನಡೆಸುತ್ತಿದೆ.

ರಿಸಲ್ಟ್ ಪಡೆಯುವ ವಿಧಾನ

  • ಸಿಬಿಎಸ್ಇ ಅಧಿಕೃತ ವಿಳಾಸಕ್ಕೆ ಭೇಟಿ ನೀಟಿ
  • Class 12 Results ಬಟನ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಹೆಸರು ಮತ್ತು ರೋಲ್ ನಂಬರ್ ನಮೂದಿಸಿ
  • ರಿಸಲ್ಟ್ ಪ್ರಿಂಟ್ ಪಡೆಯಿರಿ

ಹೆಚ್ಚಿನ ಮಾಹಿತಿಗಾಗಿ ಸಿಬಿಎಸ್ಇ ವಿಳಾಸಕ್ಕೆ ಭೇಟಿ ನೀಡಿ cbse.nic.in

English summary
CBSE Board Class 12 results 2017 will be declared 'soon', according to media reports, even as the board has not made an announcement yet

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia