CBSE Board Exam 2021: ಸಿಬಿಎಸ್ಇ ಪರೀಕ್ಷೆಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಮೌಲ್ಯಮಾಪನ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಈ ವರ್ಷ ಪೂರ್ತಿ ಯಾವುದೇ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಶಾಲೆಗಳು ದೂರವಾಣಿ ಮೂಲಕ ಮೌಲ್ಯಮಾಪನ ನಡೆಸಲು ಅವಕಾಶ ನೀಡಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ.

ಸಿಬಿಎಸ್ಇ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಮೌಲ್ಯಮಾಪನ

ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಮೌಲ್ಯಮಾಪನ ಪರೀಕ್ಷೆ ನಡೆಸಲಾಗಿತ್ತು. ಆದರೆ ಕೆಲವು ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಹಾಗಾಗಿ ಅಂತಹ ವಿದ್ಯಾರ್ಥಿಗಳಿಗೆ ದೂರವಾಣಿ ಮೌಲ್ಯಮಾಪನ ನಡೆಸಲು ಬೋರ್ಡ್ ಅವಕಾಶ ನೀಡಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಅವಕಾಶ ಸಹಾಯವಾಗಲಿದೆ.

"ಶಾಲೆಯು ನಡೆಸಿದ ಯಾವುದೇ ಆಫ್‌ಲೈನ್ / ಆನ್‌ಲೈನ್ ಅಥವಾ ಟೆಲಿಫೋನಿಕ್ ಮೌಲ್ಯಮಾಪನಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗದಿದ್ದರೆ, ಶಾಲೆಯು ಆ ವಿದ್ಯಾರ್ಥಿಗಳಿಗೆ ಮೌಲ್ಯಮಾಪನ ನಡೆಸಿದ ಸಾಕ್ಷ್ಯಗಳನ್ನು ದಾಖಲಿಸಬಹುದು ಇದರಿಂದಾಗಿ ಸಿಬಿಎಸ್‌ಇ 10 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ಅಂಕಗಳನ್ನು ದಾಖಲಿಸಲು ಶಾಲೆಗಳಿಗೆ ಸಹಾಯ ಮಾಡುತ್ತದೆ" ಎಂದು ವರದಿಯಾಗಿದೆ.

ಒಂದು ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳು ನೀಡಿರುವ ಫೋನ್‌ ಸಂಖ್ಯೆಸರಿಯಾಗಿಲ್ಲದಿದಲ್ಲಿ ಅಥವಾ ವಿಳಾಸ ಸರಿಯಾಗಿ ನಮೂದಿಸದಿದ್ದಲ್ಲಿ ಮತ್ತು ಸಿಬ್ಬಂದಿಗಳು ಆ ವಿದ್ಯಾರ್ಥಿಗಳು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಅಂತಹ ವಿದ್ಯಾರ್ಥಿಯನ್ನು ಗೈರುಹಾಜರಿ ಎಂದು ಗುರುತಿಸಲಾಗುತ್ತದೆ.

ಫಲಿತಾಂಶವನ್ನು ಸಿದ್ದಪಡಿಸಲು ಮಂಡಳಿಯು ಶಾಲೆಗಳಿಗೆ ಗಣಿತ, ಸಾಮಾಜಿಕ ವಿಜ್ಞಾನ, ವಿಜ್ಞಾನ ಮತ್ತು ಭಾಷೆಗಳ ಇಬ್ಬರು ಶಿಕ್ಷಕರು ಸೇರಿದಂತೆ ಐದು ಶಿಕ್ಷಕರ ಸಮಿತಿಯನ್ನು ರಚಿಸುವಂತೆ ಸೂಚಿಸಿದೆ. ಭಾಷಾ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಅಥವಾ ಇತರ ವಿಷಯಗಳ ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅರ್ಥಮಾಡಿಕೊಂಡು ಅಂಕ ನೀಡಲು ಸಹಾಯವಾಗಬಹುದು. ಇದಲ್ಲದೆಯೇ ನೆರೆಹೊರೆ ಶಾಲೆಗಳ ಇಬ್ಬರು ಶಿಕ್ಷಕರನ್ನು ಶಾಲೆಯ ಬಾಹ್ಯ ಸದಸ್ಯರನ್ನಾಗಿ ನೇಮಿಸಬಹುದು ಎಂದು ಸಿಬಿಎಸ್ಇ ಹೇಳಿದೆ.

ಈ ವರ್ಷ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಲಾಗಿರುವುದರಿಂದ ಶಾಲೆಯು ವರ್ಷಪೂರ್ತಿ ನಡೆಸುವ ವಿವಿಧ ಪರೀಕ್ಷೆಗಳ ಆಧಾರದ ಮೇಲೆ ಅಂತಿಮ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವಂತೆ ಶಾಲೆಗಳಿಗೆ ತಿಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರೀಬೋರ್ಡ್ ಪರೀಕ್ಷೆಗಳಿಗೆ ಗರಿಷ್ಠವೆಂದರೆ 40 ಅಂಕಗಳು. ಮಂಡಳಿಯು ನಿರ್ಧರಿಸಿದ ಮಾನದಂಡದ ಪ್ರಕಾರ ಶಾಲೆಗಳು ನಡೆಸುವ ಮಿಡ್‌ಟರ್ಮ್‌ ಅಥವಾ ಯುನಿಟ್‌ ಪರೀಕ್ಷೆಗಳು 30 ಅಂಕಗಳಿಗೆ ಮತ್ತು ಪಿರಿಯೋಡಿಕಲ್‌ ಪರೀಕ್ಷೆಗಳು 10 ಅಂಕಗಳನ್ನು ಒಳಗೊಂಡಿರುತ್ತದೆ.

ಮಂಡಳಿಯು ನಿಗದಿಪಡಿಸಿದ ಈ ವಿಧಾನವನ್ನು ವಿದ್ಯಾರ್ಥಿಗಳಿಗೆ ಫಲಿತಾಂಶಗಳನ್ನು ನೀಡುವಲ್ಲಿ ಅನುಸರಿಸಲಾಗುವುದು. ಶಿಕ್ಷಣ ಅಥವಾ ತರಗತಿಗಳಿಗೆ ಪ್ರವೇಶವಿಲ್ಲದ ಅಥವಾ ವರ್ಷಪೂರ್ತಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದವರಿಗೆ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗುತ್ತದೆ.

ಶೈಕ್ಷಣಿಕ ಸಾಲಿನಲ್ಲಿ 2020 ರಂತೆಯೇ ಬಹುಪಾಲು ಶಾಲೆಗಳು ಮುಚ್ಚಲ್ಪಟ್ಟಿವೆ. ಸಿಬಿಎಸ್ಇ ಶಾಲೆಗಳು 10 ನೇ ತರಗತಿಯ ಮೌಲ್ಯಾಂಕನ ಅಂಕಗಳನ್ನು ಜೂನ್ 30 ಕ್ಕೆ ಸಲ್ಲಿಸಲು ಗಡುವನ್ನು ವಿಸ್ತರಿಸಲಾಗಿದೆ. ತರುವಾಯ ಜೂನ್ ಮೂರನೇ ವಾರದಲ್ಲಿ ಬಿಡುಗಡೆಯಾಗಬೇಕಿದ್ದ 10 ನೇ ತರಗತಿ ಫಲಿತಾಂಶವನ್ನು ಮುಂದೂಡಲಾಗಿದೆ. ಈಗ ಫಲಿತಾಂಶವನ್ನು ಜುಲೈ ಮೊದಲ ವಾರದೊಳಗೆ ಘೋಷಿಸುವ ನಿರೀಕ್ಷೆಯಿದೆ. ಆದಾಗ್ಯೂ ಮಂಡಳಿಯು ನವೀಕರಿಸಿದ ಫಲಿತಾಂಶ ದಿನಾಂಕವನ್ನು ಇನ್ನೂ ಬಿಡುಗಡೆ ಮಾಡಬೇಕಿದೆ.

For Quick Alerts
ALLOW NOTIFICATIONS  
For Daily Alerts

English summary
CBSE allows schools to hold telephonic assessment for students who have not attended online/offline cbse board exams.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X