ಸಿಬಿಎಸ್ಇ: ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ತರಬೇತಿ ಕಡ್ಡಾಯ

Posted By:

ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ತರಬೇತಿಯನ್ನು ಕಡ್ಡಾಯಗೊಳಿಸುವ ವಿಚಾರವಾಗಿ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) ನೂತನ ಸುತ್ತೋಲೆ ಹೊರಡಿಸಿದೆ.

ಶಿಕ್ಷಕರನ್ನು ಅವರ ಸೇವಾವಧಿಯಲ್ಲಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕಳುಹಿಸಿಬೇಕು, ಇಲ್ಲವಾದಲ್ಲಿ ಮಾನ್ಯತೆ ನವೀಕರಣದ ವೇಳೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬಿಎಸ್‌ಇ ತನ್ನಿಂದ ಮಾನ್ಯತೆ ಪಡೆದಿರುವ ಎಲ್ಲಾ ಶಾಲೆಗಳಿಗೆ ಆದೇಶಿಸಿದೆ.

ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ತರಬೇತಿ ಕಡ್ಡಾಯ

ಮಾನ್ಯತೆ ನವೀಕರಣದ ಅರ್ಜಿಗಳನ್ನು ಪರಿಶೀಲಿಸುವಾಗ ಆಯಾ ಶಾಲೆಗಳು ತಮ್ಮ ಶಿಕ್ಷಕರಿಗೆ ತರಬೇತಿ ಕೊಡಿಸಿ
ರುವ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ

ಬಹುತೇಕ ಶಾಲೆಗಳು ತಮ್ಮ ಶಿಕ್ಷಕರಿಗೆ ತರಬೇತಿ ಕೊಡಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಇದು ಸಿಬಿಎಸ್‌ಇ ಮಾನ್ಯತಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಸಿದೆ.

ತರಬೇತಿ ನಿಯಮಗಳು ಮತ್ತು ಸುತ್ತೋಲೆ ವಿವರ

  • ಸಿಬಿಎಸ್‌ಇ ಮಾನ್ಯತಾ ನಿಯಮಗಳ ಪ್ರಕಾರ ಮಂಡಳಿಯಿಂದ ಮಾನ್ಯತೆ ಪಡೆದ ಶಾಲೆಗಳು ತಮ್ಮ ಎಲ್ಲಾ ಶಿಕ್ಷಕರನ್ನು ಪ್ರತಿ ವರ್ಷ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಮತ್ತು ತರಬೇತಿಗಳಿಗೆ ಕಡ್ಡಾಯವಾಗಿ ಕಳುಹಿಸಬೇಕು.
  • ಶಿಕ್ಷಕರ ತರಬೇತಿಗಳಿಗಾಗಿ ಸಿಬಿಎಸ್‌ಇ ವ್ಯವಸ್ಥಿತ ಕಾರ್ಯಕ್ರಮವೊಂದನ್ನು ರೂಪಿಸಿದ್ದು. ಗುರುಗ್ರಾಮ, ಕಾಕಿನಾಡ (ಆಂಧ್ರ ಪ್ರದೇಶ), ಕೋಲ್ಕತ್ತ, ಕೊಚ್ಚಿ, ಪುಣೆ ಮತ್ತು ಪಂಚಕುಲಾಗಳಲ್ಲಿ (ಹರಿಯಾಣ) ವಿಶೇಷ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ.
  • ಸಿಬಿಎಸ್‌ಇ ತರಬೇತಿ ಕೇಂದ್ರಗಳಲ್ಲದೆ ರಾಜ್ಯ ಸರ್ಕಾರಗಳು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ತರಬೇತಿ ಕೇಂದ್ರಗಳಿಗಾದರೂ ಶಿಕ್ಷಕರನ್ನು ತರಬೇತಿಗೆ ಕಳುಹಿಸಬೇಕು ಎಂದು ನಿಯಮ ಹೇಳುತ್ತದೆ.
  • ಶಿಕ್ಷಕರ ಸಾಮರ್ಥ್ಯ ಮತ್ತು ಮನೋ ಭಾವ ಸುಧಾರಿಸುವಲ್ಲಿ ಇಂತಹ ತರಬೇತಿಗಳ ಅವಶ್ಯಕತೆ ಇದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಸುತ್ತೋಲೆ ವಿವರಿಸಿದೆ

English summary
Every school should organize at least one week training programme forteachers every year in association with any teachers training institute recognized by the State or Central Government or by any agency identified by the Board.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia