ಸಿಬಿಎಸ್ಇ: ಶಿಕ್ಷಕರ ಮಾಹಿತಿ ಅಪ್ಲೋಡ್ ಮಾಡಲು ಸುತ್ತೋಲೆ

Posted By:

ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಸಿಬಿಎಸ್ಇ ಪರೀಕ್ಷೆ ಮತ್ತು ಮೌಲ್ಯಮಾಪನದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಅನುಭವಿ ಶಿಕ್ಷಕರ ಮಾಹಿತಿ ಕೋರಿದೆ.

ದೇಶಾದ್ಯಂತ 18000 ಕ್ಕು ಹೆಚ್ಚು ಅನುದಾನಿತ ಶಾಲೆಗಳನ್ನು ಹೊಂದಿರುವ ಸಿಬಿಎಸ್ಇ ಈ ಕುರಿತು ಮಂಗಳವಾರ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕಳುಹಿಸಿದೆ.

ಐಸಿಎಸ್ಇ ಅಂಕಮಿತಿ: 10ನೇ ತರಗತಿಗೆ ಶೇ.33, 12ನೇ ತರಗತಿಗೆ ಶೇ.35

ಶಿಕ್ಷಕರ ಮಾಹಿತಿ ಕೋರಿದ ಸಿಬಿಎಸ್ಇ

ಫೆಬ್ರವರಿ ಕೊನೆಯ ವಾರದಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಈ ಬಾರಿಯ ಹತ್ತು ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳಲ್ಲಿ ಯಾವುದೇ ಲೋಪಗಳು ಬಾರದಂತೆ ಮತ್ತು ಶೀಘ್ರ ಫಲಿತಾಂಶ ನೀಡುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದೆ.

ಇನ್ನು ಈ ಕುರಿತು ಏನಾದರು ಲೋಪಗಳು ಕಂಡುಬಂದಲ್ಲಿ ಸಿಬಿಎಸ್ಇ ಸೂಕ್ತ ಕ್ರಮ ಕೈಗೊಳ್ಳುವುದಾಗಿಯು ತಿಳಿಸಿದೆ. ಒಂದುವೇಳೆ ಶಿಕ್ಷಕರ ಮಾಹಿತಿ ನೀಡಲು ಶಾಲೆಗಳು ವಿಫಲವಾದರೆ ಅಂತಹ ಶಾಲೆಗಳ ಮಾನ್ಯತೆ ರದ್ದು ಗೊಳಿಸುವುದಾಗಿ ಸಿಬಿಎಸ್ಇ ಎಚ್ಚರಿಸಿದೆ

ಇನ್ನು ತರಬೇತಿ ಹೊಂದದ ಮತ್ತು ಅನಾನುಭವಿ ಶಿಕ್ಷಕರ ಬಗ್ಗೆ ಎಚ್ಚರಿಕೆ ನೀಡಿದೆ. ಒಂಬತ್ತನೇ ತರಗತಿಯಿಂದ ಹನ್ನೇರಡನೇ ತರಗತಿವರೆಗೂ ಬೋಧಿಸುವ ಶಿಕ್ಷಕರ ಪೂರ್ಣ ಮಾಹಿತಿಯನ್ನು ಪೋರ್ಟಲ್ ಗೆ ಅಪ್ಲೋಡ್ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.

ಈ ಸುತ್ತೋಲೆ ಅನ್ವಯ ದೇಶದ ಎಲ್ಲಾ ಸಿಬಿಎಸಿ ಅನುದಾನಿತ ಶಾಲೆಗಳ ಶಿಕ್ಷಕರ ಮಾಹಿತಿಯನ್ನು ಜನವರಿ ಐದರೊಳಗೆ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕಾಗಿದೆ.

ಈವರೆಗೆ ಅರ್ಧಂಬರ್ಧ ಮಾಹಿತಿ ನೀಡಿರುವ ಶಿಕ್ಷಕರು ಈ ಅವಧಿಯೊಳಗೆ ಪೂರ್ಣ ಮಾಹಿತಿಯನ್ನು ಅಪ್ಲೋಡ್ ಮಾಡುವಂತೆ ಸೂಚಿಸಲಾಗಿದೆ. ಇನ್ನು ಪರೀಕ್ಷಾ ಸಿಬ್ಬಂದಿ ಆಯ್ಕೆಯನ್ನು ಶಿಕ್ಷಕರ ಮಾಹಿತಿ ಮತ್ತು ಅನುಭವದ ಮೇಲೆ ಮಂಡಳಿಯೇ ಮಾಡಲಿದೆ.

ಈ ಬಾರಿಯ ಪರೀಕ್ಷೆಗಳು ಕಡಿಮೆ ಅವಧಿಯಲ್ಲಿ ನಡೆಯಲಿದ್ದು, ಅದಕ್ಕಾಗಿ ಮಂಡಳಿಯು ಸಾಕಷ್ಟು ಎಚ್ಚರ ವಹಿಸಿದ್ದು, ಎಂದಿಗಿಂತ ಬಿಗಿಯಾಗಿ ಪರೀಕ್ಷೆಗಳು ನಡೆಯಲಿವೆ.

English summary
The Central Board of Secondary Education (CBSE) has asked all affiliated schools to send their regular and experienced teachers for marking the copies in order to ensure quality and error-free evaluation, failing which, they will lose the affiliation with the Board.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia