CBSE 2022 Revaluation : ಸಿಬಿಎಸ್ಇ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?

ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ 2022 ಮರುಮೌಲ್ಯಮಾಪನ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿ ಮತ್ತು 12 ನೇ ತರಗತಿಯ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಜುಲೈ 26 ರಂದು ಪ್ರಾರಂಭಿಸಿದೆ.

ಸಿಬಿಎಸ್ಇ 10 ಮತ್ತು 12ನೇ ತರಗತಿ ಮರುಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನ

CBSE ವಿದ್ಯಾರ್ಥಿಗಳಿಗೆ 2 ನೇ ಅವಧಿಯ ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸಲು ಮತ್ತು CBSE ಫಲಿತಾಂಶ 2022 ರಲ್ಲಿ ಗಳಿಸಿದ ಅಂಕಗಳ ಪರಿಶೀಲನೆಗೆ ಸಹ ಅವಕಾಶ ನೀಡಿದೆ. CBSE ಟರ್ಮ್ 2 ಫಲಿತಾಂಶ 2022 ರಲ್ಲಿ ಅತೃಪ್ತರಾಗಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡುವ ಮೂಲಕ 10 ಮತ್ತು 12 ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಮರುಪರಿಶೀಲನೆ ಅಥವಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ರೋಲ್ ಸಂಖ್ಯೆ, 5-ಅಂಕಿಯ ಶಾಲಾ ಸಂಖ್ಯೆ ಮತ್ತು ಕೇಂದ್ರ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಸಿಬಿಎಸ್‌ಇ ಫಲಿತಾಂಶ 2022 ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾತ್ರ ಆ ವಿಷಯಗಳಲ್ಲಿ ಉತ್ತರ ಪುಸ್ತಕಗಳ ಫೋಟೊಕಾಪಿ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಸಿಬಿಎಸ್‌ಇ ಹೇಳಿಕೆಯಲ್ಲಿ ತಿಳಿಸಿದೆ.

CBSE ಫಲಿತಾಂಶ 2022ರ 12ನೇ ತರಗತಿಯ ಟರ್ಮ್ 2ರ ಫಲಿತಾಂಶದ ಅಂಕಗಳ ಪರಿಶೀಲನೆಗೆ ಅರ್ಜಿ ಶುಲ್ಕವು ಪ್ರತಿ ವಿಷಯಕ್ಕೆ ರೂ 500 ಆಗಿದ್ದರೆ, ಪ್ರತಿ ವಿಷಯಕ್ಕೆ ಪ್ರತಿ ಉತ್ತರ ಪುಸ್ತಕಕ್ಕೆ ರೂ 700 ಮತ್ತು ಮರು-ಮೌಲ್ಯಮಾಪನಕ್ಕಾಗಿ ಪ್ರತಿ ಪ್ರಶ್ನೆಗೆ ರೂ 100/- ಆಗಿದೆ. CBSE 10 ನೇ ತರಗತಿಯ ಫಲಿತಾಂಶ 2022ರ ಅಂಕಗಳ ಪರಿಶೀಲನೆ ಮತ್ತು ಫೋಟೊಕಾಪಿಗಳನ್ನು ಪಡೆಯಲು ಅರ್ಜಿ ಶುಲ್ಕ 500/- ರೂ ಆಗಿದ್ದರೆ, ಮರು ಮೌಲ್ಯಮಾಪನಕ್ಕಾಗಿ ಪ್ರತಿ ಪ್ರಶ್ನೆಗೆ 100 ರೂಗಳನ್ನು ಪಾವತಿಸಬೇಕಿರುತ್ತದೆ.

ಸಿಬಿಎಸ್ಇ 10 ಮತ್ತು 12ನೇ ತರಗತಿ ಮರುಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನ

CBSE 10ನೇ ಮತ್ತು 12ನೇ ತರಗತಿ ಫಲಿತಾಂಶ 2022 ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?:

ಸ್ಟೆಪ್ 1 : ಅಧಿಕೃತ ವೆಬ್‌ಸೈಟ್‌ cbse.gov.in. ಗೆ ಭೇಟಿ ನೀಡಿ
ಸ್ಟೆಪ್ 2 : ಮುಖಪುಟದಲ್ಲಿ, "CBSE ಕ್ಲಾಸ್ 10, ಕ್ಲಾಸ್ 12 ಟರ್ಮ್ 2 ಮರುಮೌಲ್ಯಮಾಪನ" ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್ 3 : ನಿಮ್ಮ ತರಗತಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ರೋಲ್ ಸಂಖ್ಯೆ, 5-ಅಂಕಿಯ ಶಾಲಾ ಸಂಖ್ಯೆ ಮತ್ತು ಕೇಂದ್ರ ಸಂಖ್ಯೆಯನ್ನು ನಮೂದಿಸಿ.
ಸ್ಟೆಪ್ 4 : ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಪತ್ರಿಕೆಯ ಆಯ್ಕೆಮಾಡಿ ಮತ್ತು ಶುಲ್ಕವನ್ನು ಪಾವತಿಸಿ.

ಸಿಬಿಎಸ್ಇ 10 ಮತ್ತು 12ನೇ ತರಗತಿ ಟರ್ಮ್ 2 ಫಲಿತಾಂಶಗಳು 2022 ಅನ್ನು ಜುಲೈ 22 ರಂದು ಪ್ರಕಟಿಸಲಾಯಿತು. CBSE ಫಲಿತಾಂಶ 2022 ರಲ್ಲಿ ಸಿಬಿಎಸ್ಇ 10 ನೇ ತರಗತಿಯ ಫಲಿತಾಂಶವು ಶೇಕಡಾ 94.40 ಮತ್ತು 12 ನೇ ತರಗತಿ ಫಲಿತಾಂಶವು ಶೇಕಡಾ 92.71ರಷ್ಟಿದೆ.

For Quick Alerts
ALLOW NOTIFICATIONS  
For Daily Alerts

English summary
CBSE class 10 and 12 result has been released. here is how to apply and fee for revaluation process.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X