ನೀಟ್ 2017 ಪರೀಕ್ಷೆ ಫಲಿತಾಂಶ ಪ್ರಕಟ

Posted By:

ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರನ್ಸ್ ಟೆಸ್ಟ್ (NEET) 2017ರ ಫಲಿತಾಂಶವನ್ನು ಶುಕ್ರವಾರ(ಜೂನ್ 23)ದಂದು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಕ್ಸಾಮಿನೇಷನ್ (ಸಿಬಿಎಸ್ ಇ) ಪ್ರಕಟಿಸಿದೆ.

ರಾಷ್ಟ್ರೀಯ ಮಟ್ಟದ ಈ ಪರೀಕ್ಷೆಯನ್ನು ಎಂಬಿಬಿಎಸ್ ಅಥವಾ ಬಿಡಿಎಸ್ ನ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ cbseresults.nic.in ಮತ್ತು cbseneet.nic.inನಲ್ಲಿ ನೋಡಬಹುದು.

NEET 2017ರ ಪದವಿ ಪೂರ್ವ ವೈದ್ಯಕೀಯ ಕೋರ್ಸ್ ಗಳ ಫಲಿತಾಂಶವನ್ನು ಪ್ರಕಟಿಸುವುದಕ್ಕೆ ಸಿಬಿಎಸ್ ಇಗೆ ಇತ್ತೀಚೆಗೆ ಅನುಮತಿ ಸಿಕ್ಕಿತ್ತು. ಫಲಿತಾಂಶ ಪ್ರಕಟಿಸುವುದರ ವಿರುದ್ಧದ ಯಾವುದೇ ಅರ್ಜಿಯನ್ನು ಹೈಕೋರ್ಟ್ ಗಳು ಪುರಸ್ಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ

ಫಲಿತಾಂಶ ಪಡೆಯುವ ವಿಧಾನ

  • cbseresults.nic.in ಅಥವಾ results.gov.in ಗೆ ಭೇಟಿ ಕೊಡಿ
  • CBSE NEET UG Result 2017 ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಅಪ್ಲಿಕೇಷನ್ ನಂಬರ್, ರೋಲ್ ನಂಬರ್, ಹುಟ್ಟಿದ ದಿನಾಂಕ ಸೇರಿದಂತೆ ಪ್ರಮುಖ ಅಂಶಗಳನ್ನು ದಾಖಲಿಸಿ.
  • ನಿಮ್ಮ ಸ್ಕ್ರೀನ್ ಮೇಲೆ ಬರುವ ಫಲಿತಾಂಶವನ್ನು ವೀಕ್ಷಿಸಿ, ಸೇವ್ ಮಾಡಿಕೊಳ್ಳಿ ಹಾಗೂ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ cbseresults.nic.in

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ

ಎಂಬಿಬಿಎಸ್ ಹಾಗೂ ಬಿಡಿಎಸ್ ಪ್ರವೇಶಕ್ಕೆ ಐವತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನೀಟ್ ಪರೀಕ್ಷೆ ಮೇ 7ರಂದು ನಡೆದಿತ್ತು. ದೇಶದಾದ್ಯಂತ 11 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಕನ್ನಡ, ಬೆಂಗಾಲಿ, ಅಸ್ಸಾಮಿ, ಗುಜರಾತಿ ಮತ್ತು ಒಡಿಯಾ ಸೇರಿ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇತ್ತು.

English summary
The Central Board of Secondary Education (CBSE) has declared the National Eligibility and Entrance Test NEET Result 2017 on cbseresults.nic.in. Here are the steps how to check the results.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia