CBSE Merit Scholarship Scheme For Single Girl Child : ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಕೇಂದ್ರ ಪ್ರೌಢಶಿಕ್ಷಣ ಮಂಡಳಿ) ಪೋಷಕರಿಗೆ ಒಬ್ಬಳೆ ಹೆಣ್ಣು ಮಗಳಾದ ವಿದ್ಯಾರ್ಥಿಗಳಿಂದ ಮೆರಿಟ್‌ ಸ್ಕಾಲರ್‌ಶಿಪ್‌ ಸ್ಕೀಮ್‌ಗೆ ಅರ್ಜಿ ಆಹ್ವಾನಿಸಿದೆ. ಜೊತೆಗೆ ಹಿಂದಿನ ವರ್ಷ ಅಂದರೆ 2020ರಲ್ಲಿ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿರುವವರು ಕೂಡ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಿಬಿಎಸ್ಇ ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್ ಸ್ಕಾಲರ್‌ಶಿಪ್ ಸ್ಕೀಮ್‌ಗೆ ಬೋರ್ಡ್‌ನ ಅಧಿಕೃತ ವೆಬ್‌ಸೈಟ್ www.cbse.gov.in ಗೆ ಭೇಡಿ ನೀಡಿ ಜನವರಿ 17,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಸ್ಕೀಮ್ ಗೆ ಅರ್ಜಿ ಸಲ್ಲಿಸಲು ಕೇಳಲಾಗಿರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಬಿಎಸ್ಇ ಮೆರಿಟ್ ಸ್ಕಾಲರ್‌ಶಿಪ್ ಗೆ ಅರ್ಜಿ ಆಹ್ವಾನ

CBSE Merit Scholarship Scheme For Single Girl Child 2021-22 : ಅರ್ಹತೆಗಳು

ಸಿಬಿಎಸ್ಇ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಪೋಷಕರಿಗೆ ಒಂಟಿ ಹೆಣ್ಣು ಮಗುವಾಗಿರಬೇಕು. 10ನೇ ತರಗತಿ ಪಾಸ್‌ ಮಾಡಿ 11 ನೇ ತರಗತಿಯನ್ನು ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 60% ರಷ್ಟು ಗ್ರೇಡ್ ಪಾಯಿಂಟ್ ಸರಾಸರಿಯನ್ನು ಹೊಂದಿರಬೇಕು. 10 ನೇ ತರಗತಿಯಲ್ಲಿ ಅರ್ಜಿದಾರರ ಬೋಧನಾ ಶುಲ್ಕವು ತಿಂಗಳಿಗೆ ರೂ 1500 ಮೀರಬಾರದು. ವಿದ್ಯಾರ್ಥಿನಿಯು 10 ಮತ್ತು 12 ನೇ ತರಗತಿಗಳಿಗೆ ಸಿಬಿಎಸ್ಇ ಶಾಲೆಗೆ ದಾಖಲಾಗಿರಬೇಕು. ಪ್ಲಸ್-2 ಕೋರ್ಸ್‌ಗಳಲ್ಲಿನ ಶಾಲಾ ಶುಲ್ಕವು 10 ನೇ ತರಗತಿಗಿಂತ ಶೇಕಡಾ 10% ಕ್ಕಿಂತ ಹೆಚ್ಚಿರಬಾರದು.

ಸಿಬಿಎಸ್ಇ ಮೆರಿಟ್ ಸ್ಕಾಲರ್‌ಶಿಪ್ ಗೆ ಅರ್ಜಿ ಆಹ್ವಾನ

CBSE Merit Scholarship Scheme for Single Girl Child 2021-22: ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: 27-12-2021
ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 17-01-2022
ಶಾಲೆಗಳು ಆನ್‌ಲೈನ್‌ ಅರ್ಜಿ ಪರಿಶೀಲನೆಗೆ ಅವಕಾಶ : 31-12-2021 ರಿಂದ 25-01-2022 ರವರೆಗೆ.

ಸಿಬಿಎಸ್ಇ ಮೆರಿಟ್ ಸ್ಕಾಲರ್‌ಶಿಪ್ ಗೆ ಅರ್ಜಿ ಆಹ್ವಾನ

CBSE Merit Scholarship Scheme for Single Girl Child 2021-22: ಅರ್ಜಿ ಸಲ್ಲಿಸುವುದು ಹೇಗೆ ?

ಸ್ಟೆಪ್ 1: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ cbse.gov.in ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಸ್ಕಾಲರ್‌ಶಿಪ್‌ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ಇನ್ನೊಂದು ಹೊಸ ಪುಟ ತೆರೆಯುತ್ತದೆ ಅಲ್ಲಿ 'Single Girl Child Scholarship -2021 (Fresh Application)" or "CBSE Scholarship for Single Girl Child of Class X1- Renewal" ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4: ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ
ಸ್ಟೆಪ್ 5: ನಂತರ ವಿದ್ಯಾರ್ಥಿಗಳು ಭವಿಷ್ಯದ ಉಲ್ಲೇಖಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ತೆಗೆದುಕೊಳ್ಳಿ.

ಅಥವಾ ತಮ್ಮ ಶಾಲೆಗಳಲ್ಲಿ ಆಡಳಿತ ಮಂಡಳಿಯವರಿಂದ ಸಹಾಯ ಪಡೆಯುವ ಮೂಲಕ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

ಸಿಬಿಎಸ್ಇ ಮೆರಿಟ್ ಸ್ಕಾಲರ್‌ಶಿಪ್ ಗೆ ಅರ್ಜಿ ಆಹ್ವಾನ

ಸಿಬಿಎಸ್‌ಇ ಸಿಂಗಲ್ ಗರ್ಲ್‌ ಚೈಲ್ಡ್‌ ಸ್ಕಾಲರ್‌ಶಿಪ್‌ ನಲ್ಲಿ ಪ್ರತಿ ವಿದ್ಯಾರ್ಥಿನಿಗೆ ಮಾಸಿಕವಾಗಿ ರೂ.500/-ರೂಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿವೇತನವು ನೇರವಾಗಿ ವಿದ್ಯಾರ್ಥಿನಿಯ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತದೆ. ಮತ್ತು ಸಿಬಿಎಸ್‌ಇ ಮೆರಿಟ್‌ ಸ್ಕಾಲರ್‌ಶಿಪ್‌ ನವೀಕರಣಕ್ಕೆ ವಿದ್ಯಾರ್ಥಿನಿಯು 11ನೇ ತರಗತಿಯಲ್ಲಿ ಶೇಕಡ 50 ಅಂಕಗಳೊಂದಿಗೆ ಪಾಸ್‌ ಆಗಿರಬೇಕು.

ವಿದ್ಯಾರ್ಥಿಗಳು ಸಿಬಿಎಸ್‌ಇ ಮೆರಿಟ್‌ ಸ್ಕಾಲರ್‌ಶಿಪ್‌ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ವೆಬ್‌ಸೈಟ್‌ cbse.gov.in ಗೆ ಭೇಟಿ ನೀಡಿ ತಿಳಿಯಬಹುದು.

ಸಿಬಿಎಸ್ಇ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತು 2020ರಲ್ಲಿ ನೀಡಲಾದ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ನವೀಕರಿಸಲು ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
CBSE invited applications for merit scholarship scheme for single girl child.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X