ವಿದ್ಯಾರ್ಥಿನಿಯರ ಐಐಟಿ ಪ್ರವೇಶ ಸುಲಭಗೊಳಿಸಲು ಸಿಬಿಎಸ್ಇ 'ನ್ಯೂ ಇಂಡಿಯಾ' ಸ್ಕೀಮ್

Posted By:

ಸಿಬಿಎಸ್ಇ ನೂತನ ಕ್ರಮದಿಂದ ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇಯನ್ನು ವಿದ್ಯಾರ್ಥಿನಿಯರು ಸುಲಭವಾಗಿ ಎದುರಿಸಬಹುದಾಗಿದೆ.

ಐಐಟಿಗಳಲ್ಲಿ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಸೀಟು ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈ ಯೋಜನೆಯ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದ್ದು, ಐಐಟಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಸಿಬಿಎಸ್ಇ 'ನ್ಯೂ ಇಂಡಿಯಾ' ಎಂಬ ಯೋಜನೆ ಕೈಗೊಂಡಿದೆ.

ನ್ಯೂ ಇಂಡಿಯಾ ಸ್ಕೀಂ

ನ್ಯೂ ಇಂಡಿಯಾ ಸ್ಕೀಂ ಮೂಲಕ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಶೇ.70 ರಿಂದ ಶೇ.80 ರಷ್ಟು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿನಿಯರಿಗೆ ನೆರವಾಗುವ ಸ್ಟಡಿ ಮೆಟಿರಿಯಲ್, ಪಠ್ಯಗಳನ್ನು ಉಚಿತವಾಗಿ ಪೂರೈಸಲಾಗುತ್ತದೆ.

 ಸಿಬಿಎಸ್ಇ 'ನ್ಯೂ ಇಂಡಿಯಾ' ಸ್ಕೀಮ್

ದೇಶದ 60 ನಗರಗಳಲ್ಲಿ ವರ್ಚ್ಯುಯಲ್ ಕಾಂಟ್ಯಾಕ್ಟ್ ಕ್ಲಾಸ್ ಮೂಲಕ ತರಬೇತಿಯನ್ನು ನೀಡಲಿದ್ದು, ವಿದ್ಯಾರ್ಥಿನಿಯರು ತಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದಕ್ಕಾಗಿ ಅಗತ್ಯ ಸೌಲಭ್ಯವನ್ನು ಕಲ್ಪಿಸುವುದಾಗಿ ಹೇಳಲಾಗಿದೆ.

ಕುಟುಂಬದ ವಾರ್ಷಿಕ ಆದಾಯ ಆರು ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿನಿಯರು ಮಾತ್ರ ಈ ಯೋಜನೆಯ ಫಲ ಪಡೆಯಲಿದ್ದಾರೆ.

ನ್ಯೂ ಇಂಡಿಯಾ ಸ್ಕೀಂಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರು ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಬಹುದಾಗಿದೆ. ಅಲ್ಲದೇ ಸ್ಟಡಿ ಮೆಟಿರಿಯಲ್ ಗಳನ್ನು ಟ್ಯಾಬ್ಲೆಟ್ ಹಾಗೂ ಮೊಬೈಲ್ ಗಳಲ್ಲಿ ಬಳಸುವಂತೆ ಪ್ರಿಲೋಡ್ ಕೂಡ ಮಾಡಲಾಗುವುದು ಎಂದು ಸಿಬಿಎಸ್ಇ ಛೇರ್ಮನ್ ಆರ್ ಕೆ ಚತುರ್ವೇದಿ ತಿಳಿಸಿದ್ದಾರೆ.

ಈ ಹಿಂದೆ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಉಡಾನ್ ಎಂಬ ಯೋಜನೆ ಕೈಗೊಳ್ಳಲಾಗಿತ್ತು. ಉಡಾನ್ ಯೋಜನೆಯಿಂದ 135 ವಿದ್ಯಾರ್ಥಿನಿಯರು ಜೆಇಇ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರು. ಕಳೆದ ಬಾರಿ 143 ವಿದ್ಯಾರ್ಥಿನಿಯರು ಐಐಟಿ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದರು.

ದೇಶದ ಇತರೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.40 ರಷ್ಟು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ ಆದರೆ ಐಐಟಿಯಲ್ಲಿ ಶೇ.8 ರಷ್ಟು ಮಾತ್ರ ಇದ್ದಾರೆ. ಐಐಟಿಗಳಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಬೇಕೆಂದು ಶೇ.20 ರಷ್ಟು ಸೀಟುಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ.

English summary
The scheme with a vision of "New India", assists girl students with an overall score of 70% or above, and 80% in science and mathematics stream with free of cost tutorials, mentoring support, lectures and study material to prepare for engineering entrance examinations.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia