ಸಿಬಿಎಸ್ಇ ಪೇಪರ್ ಲೀಕ್... ಸದ್ಯದಲ್ಲೇ ಗಣಿತ ಹಾಗೂ ಅರ್ಥಶಾಸ್ತ್ರ ಮರುಪರೀಕ್ಷೆ

Written By: Nishmitha B

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ 10 ನೇ ತರಗತಿಯ ಗಣಿತ ಹಾಗೂ 12 ನೇ ತರಗತಿ ಅರ್ಥಶಾಸ್ತ್ರ ವಿಷಯದಲ್ಲಿ ಮರುಪರೀಕ್ಷೆ ಮಾಡಲು ನಿರ್ಧರಿಸಿದೆ.

ಯಾಕೆ ಗಣಿತ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ಮರು ಪರೀಕ್ಷೆ ?

ದಿ ಸಿಬಿಎಸ್ಇ ಇತ್ತೀಚೆಗೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಈ ತಿಂಗಳು ನಡೆದ 10ನೇ ತರಗತಿಯ ಗಣಿತ ಹಾಗೂ 12 ನೇ ತರಗತಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆಯನ್ನ ರದ್ದು ಗೊಳಿಸಿ, ಸದ್ಯದಲ್ಲೇ ಮರು ಪರೀಕ್ಷೆಯನ್ನ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ. ಪರೀಕ್ಷೆ ಮುಂದಿನ ದಿನವೇ ಪ್ರಶ್ನಾ ಪತ್ರಿಕೆ ಲೀಕ್ ಆಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಣೆ ನೀಡಿದೆ ಇಲಾಖೆ.

ಸಿಬಿಎಸ್ಇ ಪೇಪರ್ ಲೀಕ್... ಸದ್ಯದಲ್ಲೇ ಗಣಿತ ಹಾಗೂ ಅರ್ಥಶಾಸ್ತ್ರ ಮರುಪರೀಕ್ಷೆ

ಯಾವಾಗ ಮರು ಪರೀಕ್ಷೆ ಸಾಧ್ಯತೆ?

ಇನ್ನೂ ಮರು ಪರೀಕ್ಷೆ ದಿನ ನಿಗದಿಯಾಗಿಲ್ಲ, ಬದಲಿಗೆ ಈ ವಾರದಲ್ಲೇ ಆಫೀಶಿಯಲ್ ವೆಬ್‌ಸೈಟ್ ಮೂಲಕ ಮರು ಪರೀಕ್ಷೆ ದಿನಾಂಕವನ್ನ ಪ್ರಕಟಿಸಲಾಗುವುದು ಎಂದು ಸ್ಪಷ್ಟ ಪಡಿಸಿದೆ ಇಲಾಖೆ

ಈ ಬಗ್ಗೆ ಹೆಚ್‌ಆರ್‌ಡಿ ಸಚಿವರು ಏನು ಹೇಳ್ತಾರೆ?

ಈ ಬಗ್ಗೆ ಮಾತನಾಡಿದ ಹೆಚ್‌ಆರ್‌ಡಿ ಸಚಿವ ಪ್ರಕಾಶ್ ಜವಡೇಕರ್, ಈ ಘಟನೆ ದೆಹಲಿ ಸ್ಕೂಲ್‌ನಲ್ಲಿ ನಡೆದಿದೆ. ಈ ಬಗ್ಗೆ ತನಿಖೆ ನಡೆಯಲಿದೆ. ದೆಹಲಿ ಸ್ಕೂಲ್‌ನಲ್ಲಿ ಮಾತ್ರ ಪರೀಕ್ಷೆ ಇಲ್ಲ ಇಡೀ ದೇಶದಲ್ಲಿ ಮರು ಪರೀಕ್ಷೆ ನಡೆಸುವುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಈ ಬಗ್ಗೆ ಈಗಾಗಲೇ ರಿಪೋರ್ಟ್ ನೀಡಲಾಗಿದೆ ಎಂದ ಸಚಿವ

ಈ ಬಗ್ಗೆ ಪೋಷಕರು ಏನಂತಾರೆ ?

ಈ ಘಟನೆ ನಡೆದ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚು ಆತಂಕಗೊಂಡಿದ್ದಾರೆ. ಈ ಬಗ್ಗೆ ಅನಿಸಿಕೆ ಹಂಚಿಕೊಂಡ ಸೈಕೋಲಾಜಿಸ್ಟ್ ಡಾ. ಮಿನಿ ರಾವ್ ಅವರು, ನನ್ನ ಮಗ ಇಷ್ಟು ದಿನ ಓದಿ, 6 ಗಂಟೆಗೂ ಹೆಚ್ಚು ಟ್ಯೂಶನ್ನಲ್ಲೂ ಕಲಿತು ಇದೀಗ ಮತ್ತೆ ಮರುಪರೀಕ್ಷೆ ಬರಿಯಬೇಕು ಅಂದ್ರೆ ನನಗೆ ಅಸಹಾಯಕತೆ ಅನುಭವವಾಗುತ್ತಿದೆ. ಪರೀಕ್ಷೆ ಮುಗಿದ ಕೂಡಲೇ ಪರೀಕ್ಷೆ ಚೆನ್ನಾಗಿತ್ತು ಎಂದಿದ್ದ ಮಗ ಅಲ್ಲಿಗೆ ಟೆನ್ಶನ್ ಮುಗಿದಿತ್ತು ಅಂದುಕೊಂಡ್ರೆ ಇದೀಗ ಮತ್ತೆ ಟೆನ್ಶನ್ ಕಂಟಿನ್ಯೂ ಆಗಿದೆ ಎಂದಿದ್ದಾರೆ.

English summary
The Central Board of Secondary Education has announced reconducting of CBSE class 10 Mathematics and class 12 Economics exams citing malpractices.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia