ಸಿಬಿಎಸ್ ಸಿ 12 ಕ್ಲಾಸ್ ಮರುಪರೀಕ್ಷೆ : ಎಪ್ರಿಲ್ ೨೫ ರಂದು ಅರ್ಥಶಾಸ್ತ್ರ

Posted By:

ಸಿಬಿಎಸ್ ಸಿ ಪ್ರಶ್ನಾಪತ್ರಿಕೆ ಲೀಕ್ ಆಗಿದ್ದಕ್ಕೆ ಇಡೀ ದೇಶವೇ ಶಾಕ್ ಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ಕಡೆ ಪ್ರತಿಭಟನೆಗಳು ಕೂಡಾ ನಡೆಯುತ್ತಿವೆ. ಇದೀಗ ಬೋರ್ಡ್ ಮರು ಸಿಬಿಎಸ್ ಸಿ 12ನೇ ಕ್ಲಾಸ್ ನ ಅರ್ಥಶಾಸ್ತ್ರ ಮರು ಪರೀಕ್ಷೆಯ ದಿನಾಂಕವನ್ನ ಪ್ರಕಟಿಸಿದೆ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೋರ್ಡ್ ಈ ಬಗ್ಗೆ ದೆಹಲಿ ಪೊಲೀಸರಿಂದ ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಘಟನೆ ಬಗ್ಗೆ ಕ್ರಿಮಿನಲ್ ಇನ್‌ವೆಸ್ಟಿಗೇಶನ್ ನಡೆಯುತ್ತಿದೆ ಎಂದ ಬೋರ್ಡ್ ಇದೇ ವೇಳೆ ಮರು ಪರೀಕ್ಷೆಯ ದಿನಾಂಕವನ್ನ ಪ್ರಕಟಿಸಿದೆ.

ಸಿಬಿಎಸ್ ಸಿ 12 ಕ್ಲಾಸ್ ಮರುಪರೀಕ್ಷೆ : ಎಪ್ರಿಲ್ ೨೫ ರಂದು ಅರ್ಥಶಾಸ್ತ್ರ

ಬೋರ್ಡ್ ನೀಡಿರುವ ಪ್ರಕಟಣೆಯ ಪ್ರಕಾರ 12ನೇ ತರಗತಿಯ ಅರ್ಥಶಾಸ್ತ್ರ ಕೋಡ್ 030 ಮರು ಪರೀಕ್ಷೆ ನಡೆಯಲಿದ್ದು, ಈ ಹಿಂದೆ ನಡೆದ ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿಗಳು ಹಾಜರಾಗಬೇಕಾಗಿದೆ. ಅಷ್ಟೇ ಅಲ್ಲ ಹಳೆಯ ಪ್ರವೇಶ ಪತ್ರದ ಮೂಲಕ ಎಕ್ಸಾಂ ಬರೆಯಬೇಕಾಗಿದೆ ಎಂದು ತಿಳಿಸಲಾಗಿದೆ. ಎಪ್ರಿಲ್ 25 ರಂದು ಪರೀಕ್ಷೆ ನಡೆಯಲಿದೆ.

ಇನ್ನು 10 ನೇ ತರಗತಿಯ ಗಣಿತ ಪರೀಕ್ಷೆಯ ಬಗ್ಗೆಯೂ ಲೀಕಾಗಿದೆ ಈ ಮಾತು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ದೆಹಲಿ ಹಾಗೂ ಹರ್ಯಾಣ ಹೊರತು ಪಡಿಸಿ ಬೇರೆ ರಾಜ್ಯಗಳಲ್ಲಿ ಮರು ಪರೀಕ್ಷೆ ನಡೆಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಇನ್ನೂ ಸಮಗ್ರ ತನಿಖೆ ಬಳಿಕ ಮರು ಪರೀಕ್ಷೆ ಅಗತ್ಯವಿದ್ದಲ್ಲಿ ಜುಲೈ ತಿಂಗಳಿನಲ್ಲಿ ಆಯೋಜಿಸಲಾಗುವುದು ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ವಿದ್ಯಾರ್ಥಿಗಳು ಈ ಬಗ್ಗೆಗಿನ ಹೆಚ್ಚಿನ ಮಾಹಿತಿಗಾಗಿ ಸಿಬಿಎಸ್ಇ ಆಫೀಶಿಯಲ್ ಸೈಟ್‌ಗೆ ಭೇಟಿ ನೀಡಬೇಕಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಏನಾದ್ರೂ ಸಂದೇಹ ದೂರುಗಳಿದ್ದರೆ ಬೋರ್ಡ್ ಜತೆ ಇಮೇಲ್ ಮೂಲಕ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ಇದು ಬೋರ್ಡ್ ಕ್ರಿಯೆಟ್ ಮಾಡಿರುವ ಹೊಸ ಇಮೇಲ್ ಐಡಿ examhelp.cbse@gmail.com. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ

English summary
The entire nation is still under shock with the CBSE question papers leaking. Despite nationwide protests over the row of question paper leak, the board has released the re-exam date for the class 12 economics.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia