ಸಿಬಿಎಸ್ಇ ಹತ್ತನೇ ತರಗತಿಗೆ ಆರು ಸಬ್ಜೆಕ್ಟ್ಸ್ ಕಡ್ಡಾಯ

Posted By:

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ತನ್ನ ಮೌಲ್ಯಮಾಪನ ವಿಧಾನದಲ್ಲಿ ಬದಲಾವಣೆಗೆ ಮುಂದಾಗಿದೆ, ನೂತನ  ವಿಧಾನದಂತೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಐದು ವಿಷಯಗಳ ಬದಲಾಗಿ ಕಡ್ಡಾಯವಾಗಿ ಆರು ವಿಷಯಗಳ ಅಧ್ಯಯನ ನಡೆಸಬೇಕು.

ಪ್ರಸ್ತುತ ಸಿಬಿಎಸ್ಇ ಹತ್ತನೇ ತರಗತಿಯ ವಿದ್ಯಾರ್ಥಿಗಳು ಐದು ವಿಷಯಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅವುಗಳಲ್ಲಿ ಎರಡು ಭಾಷಾ ವಿಷಯಗಳು, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿವೆ. ಅಲ್ಲದೆ ಒಂದು ವೃತ್ತಿಪರ ವಿಷಯವನ್ನು ಹೆಚ್ಚುವರಿಯಾಗಿ ಕಲಿಯಬೇಕಿದೆ. ಆದರೆ 2017 -18 ನೇ ಶೈಕ್ಷಣಿಕ ವರ್ಷದಿಂದ ವೃತ್ತಿಪರ ವಿಷಯ ಕಡ್ಡಾಯವಾಗಲಿದೆ.

ರಾಷ್ಟ್ರೀಯ ಕೌಶಲ್ಯ ಅರ್ಹತೆ ಚೌಕಟ್ಟು (ಎನ್ ಎಸ್ ಕ್ಯೂ ಎಫ್) ಪ್ರಕಾರ ಒಂದು ವೃತ್ತಿಪರ ವಿಷಯವನ್ನು ಕಡ್ಡಾಯಗೊಳಿಸಿದ್ದು, ಒಂದು ವೇಳೆ ಮೂರು ಐಚ್ಚಿಕ ವಿಷಯಗಳಲ್ಲಿ ವಿದ್ಯಾರ್ಥಿಯು ಅನುತ್ತೀರ್ಣಗೊಂಡು ವೃತ್ತಿಪರ ವಿಷಯದಲ್ಲಿ ತೇರ್ಗಡೆಯಾದರೆ ಉತ್ತಿರ್ಣ ಎಂದು ಪರಿಗಣಿಸಲಾಗುವುದು. ಅನುತ್ತಿರ್ಣಗೊಂಡ ವಿಷಯಕ್ಕೆ ಮತ್ತೊಮ್ಮೆ ಪರೀಕ್ಷೆ ಬರೆಯಲು ವಿದ್ಯಾರ್ಥಿ ಇಚ್ಚಿಸಿದಲ್ಲಿ ಅವಕಾಶ ಕಲ್ಪಿಸಲಾಗುವುದು.

ಸಿಬಿಎಸ್ಇ ಆರು ಸಬ್ಜೆಕ್ಟ್ಸ್

ವೃತ್ತಿಪರ ವಿಷಯಗಳು

ರಿಟೇಲ್ ಡೈನಾಮಿಕ್ಸ್, ಮಾಹಿತಿ ತಂತ್ರಜ್ಞಾನ, ಭದ್ರತೆ, ಆಟೋಮೊಬೈಲ್ ತಂತ್ರಜ್ಞಾನ, ಹಣಕಾಸು, ಪ್ರವಾಸೋದ್ಯಮ, ಸೌಂದರ್ಯ ಮತ್ತು ಅರೋಗ್ಯ , ಕೃಷಿ ಆಹಾರ ಉತ್ಪಾದನೆ, ಫ್ರಂಟ್ ಆಫೀಶ್ ನಿರ್ವಹಣೆ, ಬ್ಯಾಂಕಿಂಗ್ ಮತ್ತು ಇನ್ಸೂರೆನ್ಸ್, ಮಾರ್ಕೆಟಿಂಗ್ ಮತ್ತು ಆರೋಗ್ಯ ಸೇವೆ ಸೇರಿದಂತೆ ಒಟ್ಟು 13 ವಿಭಾಗಗಳಲ್ಲಿ ಯಾವುದಾದರು ಒಂದನ್ನು ಆರನೇ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬಹುದು.

ಪರೀಕ್ಷಾ ಮೌಲ್ಯಮಾಪನ

ಸಿಬಿಎಸ್ಇ ಪರೀಕ್ಷೆಯ ವಿಷಯಗಳು ಒಟ್ಟು 100 ಅಂಕಗಳಿಗೆ ನಡೆಯುತ್ತವೆ 100 ಅಂಕಗಳಲ್ಲಿ 50 ಅಂಕಗಳಿಗೆ ಲಿಖಿತ ಪರೀಕ್ಷೆಗಳಿದ್ದರೆ, ಉಳಿದ 50 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕ ಪರೀಕ್ಷೆಗಳು ಇರಲಿವೆ ಎಂದು ಸಿಬಿಎಸ್ಇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯಾರ್ಥಿಗಳು ಎರಡು ವಿಭಾಗಗಳಲ್ಲಿ ಕನಿಷ್ಠ 33 ಪ್ರತಿಶತ ಅಂಕಗಳಿಸುವುದು ಕಡ್ಡಾಯವಾಗಿದೆ.

ಹನ್ನೆರಡನೇ ತರಗತಿಯ ವಿಷಯಗಳ ಮಾರ್ಪಾಡು

ಹತ್ತನೇ ತರಗತಿಯಲ್ಲಿ ಆರು ವಿಷಯಗಳನ್ನು ಕಡ್ಡಾಯಗೊಳಿಸಿರುವಂತೆ ಹನ್ನೆರಡನೇ ತರಗತಿಯ ವಿಷಯಗಳಲ್ಲು ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಸಿಬಿಎಸ್ಇ ಹನ್ನೆರಡನೇ ತರಗತಿಯಲ್ಲಿ ಕಡಿಮೆ ದಾಖಲಾತಿ ಇರುವ ಏಳು ಶೈಕ್ಷಣಿಕ ವಿಷಯಗಳು ಮತ್ತು 34 ವೃತ್ತಿಪರ ವಿಷಯಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. 

ಸಿಬಿಎಸ್ಇ ಶಾಲೆಗಳು

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಶಾಲೆಗಳು ಭಾರತದ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಾಗಿವೆ. ಇವು ತನ್ನದೇ ಆದ ಪ್ರತ್ಯೇಕ ಪಠ್ಯಕ್ರಮ ಹೊಂದಿದ್ದು ಉನ್ನತ ಮಟ್ಟದ ಶಿಕ್ಷಣ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ಕೇಂದ್ರಿಯ ವಿದ್ಯಾಲಯ, ಜವಹಾರ್ ನವೋದಯ ವಿದ್ಯಾಲಯ ಮತ್ತು ಇನ್ನಿತರ ಖಾಸಗಿ ಶಾಲೆಗಳು ಮಾತ್ರ ಕೆಂದ್ರ ಸರ್ಕಾರದ ನಿಯಮಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

English summary
The Central Board of Secondary Education (CBSE) has made six subjects mandatory for students giving their class 10 board exams from the next academic year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia