ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ 10ನೇ ತರಗತಿ ಮತ್ತು 12ನೇ ತರಗತಿ ಟರ್ಮ್ 1ರ ಫಲಿತಾಂಶವನ್ನು ಅತೀ ಶೀಘ್ರದಲ್ಲಿ ಪ್ರಕಟ ಮಾಡುವ ಸಾಧ್ಯತೆ ಇದೆ. ಫಲಿತಾಂಶವನ್ನು ಪ್ರಕಟಿಸಿದ ಬಳಿಕ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದು.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್, ಸಿಐಎಸ್‌ಸಿಇ'ಯು ICSE, ISC 2022 ಸೆಮಿಸ್ಟರ್ 1 ಫಲಿತಾಂಶವನ್ನು ಫೆಬ್ರುವರಿ 07 ರಂದು ಬಿಡುಗಡೆ ಮಾಡಿದೆ.
ವರದಿಗಳ ಪ್ರಕಾರ ಸಿಬಿಎಸ್‌ಇ'ಯು 10ನೇ ತರಗತಿ ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಟರ್ಮ್ 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನಷ್ಟೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಪಾಸ್ ಅಥವಾ ಫೇಲ್ ಎಂಬುದನ್ನು ತಿಳಿಸುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಅಂತಿಮ ಫಲಿತಾಂಶವನ್ನು ಮಾರ್ಚ್-ಏಪ್ರಿಲ್, 2022 ರಲ್ಲಿ ನಿಗದಿಪಡಿಸಲಾದ ಟರ್ಮ್ 2 ಬೋರ್ಡ್ ಪರೀಕ್ಷೆಗಳ ನಂತರ ಪ್ರಕಟಿಸಲಾಗುವುದು. ಸಿಬಿಎಸ್ಇ ಟರ್ಮ್ 2 ಪರೀಕ್ಷೆಗಳ ದಿನಾಂಕವನ್ನು cbse.nic.in ಅಥವಾ cbse.gov.in ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಸಿಬಿಎಸ್‌ಇ 10ನೇ ತರಗತಿ ಮತ್ತು 12 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಟರ್ಮ್ 1 ಪರೀಕ್ಷೆ ಮತ್ತು ಇಂಟರ್‌ನಲ್ ಮಾರ್ಕ್ಸ್ ಹಾಗೂ ಟರ್ಮ್ 2 ಪರೀಕ್ಷೆ ಮತ್ತು ಇಂಟರ್‌ನಲ್ ಮಾರ್ಕ್ಸ್ ಆಧಾರಿತವಾಗಿ ಬಿಡುಗಡೆ ಮಾಡಲಾಗುತ್ತದೆ. ಫಲಿತಾಂಶ ಪ್ರಕಟವಾದ ಬಳಿಕ ವೀಕ್ಷಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮಂದೆ ನೋಡಿ.
ಸಿಬಿಎಸ್ಇ ಟರ್ಮ್ 1ರ ಫಲಿತಾಂಶ ವೀಕ್ಷಿಸುವುದು ಹೇಗೆ ?
ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://cbseresults.nic.in/ ಗೆ ಭೇಟಿ ನೀಡಿ.
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಲಭ್ಯವಿರುವ 'ಸಿಬಿಎಸ್ಇ ಫಲಿತಾಂಶ 2022' ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4: ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಡಿಜಿಲಾಕರ್ ಆಪ್‌ನಿಂದ ಸಿಬಿಎಸ್ಇ 10ನೇ ಮತ್ತು 12 ನೇ ತರಗತಿ ಟರ್ಮ್ 1ರ ಮಾರ್ಕ್‌ಶೀಟ್ ಅನ್ನು ಪರಿಶೀಲಿಸುವುದು ಅಥವಾ ಡೌನ್‌ಲೋಡ್ ಮಾಡುವುದು ಹೇಗೆ? :
ಸ್ಟೆಪ್ 1 : ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ಹೋಗಿ.
ಸ್ಟೆಪ್ 2 : ಡಿಜಿಲಾಕರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಸ್ಟೆಪ್ 3 : ಸಿಬಿಎಸ್ಇ ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ.
ಸ್ಟೆಪ್ 4 : ಶಿಕ್ಷಣ ವಿಭಾಗಕ್ಕೆ ಹೋಗಿ ಮತ್ತು "10 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 10 ನೇ ತರಗತಿಯ ಅಂಕಪಟ್ಟಿ" ಅಥವಾ "12 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 12 ನೇ ತರಗತಿಯ ಅಂಕಪಟ್ಟಿ" ಆಯ್ಕೆಮಾಡಿ.
ಸ್ಟೆಪ್ 5 : ಲಾಗಿನ್ ಜಾಗದಲ್ಲಿ ವರ್ಷ, ಹೆಸರು ಮತ್ತು ರೋಲ್ ಸಂಖ್ಯೆಯನ್ನು ನಮೂದಿಸಿ.
ಸ್ಟೆಪ್ 6 : ಸಿಬಿಎಸ್ಇ ಟರ್ಮ್ 1ರ ಮಾರ್ಕ್‌ಶೀಟ್ ಪರದೆಯ ಮೇಲೆ ಮೂಡುತ್ತದೆ.