ವರ್ಷಕ್ಕೆ ಒಂದು ಬಾರಿ ಸಿಬಿಎಸ್ಇ ಎನ್ಇಟಿ

Posted By:

ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಕುರಿತಾಗಿ ಯುಜಿಸಿ ಮತ್ತು ಸಿಬಿಎಸ್ಇ ನಡುವೆ ಇದ್ದ ಗೊಂದಲ ಬಗೆಹರಿದಿದೆ. ಇನ್ನು ಮುಂದೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಸಿಬಿಎಸ್ಇ ಮುಂದುವರೆಸುಕೊಂಡು ಹೋಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸ್ಪಷ್ಟನೆ ನೀಡಿದೆ.

ವರ್ಷಕ್ಕೆ ಒಂದೇ ಎನ್ಇಟಿ

ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಆಯ್ಕೆಗೆ ಮಾನದಂಡವಾಗಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್)ಯನ್ನು ವರ್ಷಕ್ಕೆ ಒಂದೇ ಬಾರಿ ನಡೆಸುವಂತೆ ಸಿಬಿಎಸ್ಇ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸಕ್ತ ನೆಟ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಜುಲೈ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತಿದೆ. ಒಂದು ಬಾರಿ ಪರೀಕ್ಷೆ ನಡೆಸಿದರೆ ಉತ್ತಮ ಎಂದು ಸಿಬಿಎಸ್ಇ ಹೇಳಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳೊಂದಿಗೆ ಈಚೆಗೆ ಸಭೆ ನಡೆಸಲಾಗಿದ್ದು, ಯಾವುದೇ ವಿಳಂಬ ಇಲ್ಲದೆ ಜುಲೈನಲ್ಲಿ ಎನ್‌ಇಟಿ ನಡೆಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಒಂದು ಬಾರಿ ಸಿಬಿಎಸ್ಇ ಎನ್ಇಟಿ

ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕ, ಕಿರಿಯರ ಸಂಶೋಧನಾ ಶಿಷ್ಯವೇತನಕ್ಕೆ ಅರ್ಹತೆ ಪಡೆಯಬೇಕಾದರೆ ಎನ್‌ಇಟಿ ಪಾಸಾಗುವುದು ಕಡ್ಡಾಯ. ಪ್ರತಿ ವರ್ಷ ಜುಲೈ ಮತ್ತು ಡಿಸೆಂಬರ್‌ನಲ್ಲಿ ಎನ್‌ಇಟಿ ನಡೆಸಲಾಗುತ್ತಿತ್ತು.

ಎನ್ಇಟಿ ನಡೆಸಲು ಕಷ್ಟ ಎಂದಿದ್ದ ಸಿಬಿಎಸ್ಇ

ಐದು ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪ್ರತಿ ಬಾರಿ ಎನ್ಇಟಿ ತೆಗೆದುಕೊಳ್ಳುತ್ತಿದ್ದು ವರ್ಷಕ್ಕೆ ಎರಡು ಬಾರಿ ಎನ್ಇಟಿ ನಡೆಸಲಾಗುತ್ತದೆ. ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕೋರ್ಸ್‌ಗಳಿಗೆ ಜಂಟಿ ಪ್ರವೇಶ ಪರೀಕ್ಷೆ ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆಸುವುದರ ಜತೆಗೆ ಎನ್‌ಇಟಿಯನ್ನು ಎರಡೆರಡು ಬಾರಿ ನಡೆಸುವುದು ಸಾಮರ್ಥ್ಯಕ್ಕೂ ಮೀರಿದ್ದಾಗುತ್ತದೆ ಎಂದು ಸಿಬಿಎಸ್‌ಇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಬಳಿ ಅಸಹಾಯಕತೆ ವ್ಯಕ್ತಪಡಿಸಿತ್ತು.

ಈ ಬಾರಿಯ ಎನ್ಇಟಿ ವಿಳಂಬ

ಜುಲೈ ತಿಂಗಳ ಎನ್ಇಟಿ ಪರೀಕ್ಷೆಗೆ ಏಪ್ರಿಲ್ ತಿಂಗಳಲ್ಲೆ ಅಧಿಸೂಚನೆ ಹೊರಡಿಸಲಾಗುತ್ತಿತ್ತು. ಆದರೆ ಈ ಬಾರಿ ಏಪ್ರಿಲ್ ಮುಗಿಯುತ್ತ ಬಂದರು ಅಧಿಸೂಚನೆ ಪ್ರಕಟವಾಗದಿರುವ ಬಗ್ಗೆ ಹಲವು ವಿದ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.

English summary
The University Grants Commission (UGC) on Tuesday said that the Central board of Secondary Education (CBSE) has been convinced to conduct the entrance test on time.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia