ಸಿಬಿಎಸ್ಇ ಪರೀಕ್ಷೆ ಕುರಿತು ಶಾಲೆಗಳು ಮತ್ತು ಪೋಷಕರೊಂದಿಗೆ ಚರ್ಚೆ

Posted By:

ವಾರ್ಷಿಕ ಪರೀಕ್ಷೆಗಳನ್ನು ಅವಧಿಗೆ ಮೊದಲೇ ನಡೆಸುವ ಬಗ್ಗೆ ಪೋಷಕರೊಂದಿಗೆ ಚರ್ಚಿಸಲಾಗುವುದು ಎಂದು ಕೇಂದ್ರಿಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.

ಮೌಲ್ಯಮಾಪನಕ್ಕೆ ಮತ್ತು ಶಿಕ್ಷಣದಲ್ಲಿ  ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಅವಧಿಗೆ ಮೊದಲೇ ಪರೀಕ್ಷೆ ನಡೆಸಲು ಚಿಂತನೆ ನಡೆಸಿದ್ದ ಸಿಬಿಎಸ್ಇ ಈ ಹೇಳಿಕೆ ನೀಡಿದೆ.

ಪ್ರತಿ ಬಾರಿ ಫಲಿತಾಂಶದ ವೇಳೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಕೇಳಿಬಂದಿದ್ದವು. ಮೌಲ್ಯಮಾಪನದ ತಪ್ಪುಗಳು ಆಗದಂತೆ ಕೆಲವೊಂದು ಸುಧಾರಣೆ ತಂದಿದ್ದು, ಮುಂದಿನ ವರ್ಷದಿಂದ 10 ಮತ್ತು 12ನೇ ತರಗತಿ ಪರೀಕ್ಷೆ ಮಾರ್ಚ್ ಬದಲಾಗಿ ಫೆಬ್ರವರಿ ತಿಂಗಳಲ್ಲಿ ಆರಂಭಿಸವುದಾಗಿ ಕೆಲದಿನಗಳ ಹಿಂದಷ್ಟೇ ತಿಳಿಸಿತ್ತು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಂಡಳಿ ಈ ಸ್ಪಷ್ಟನೆ ನೀಡಿದೆ.

ಸಿಬಿಎಸ್ಇ ನೂತನ ಪರೀಕ್ಷಾ ನಿಯಮ

ಪ್ರಸ್ತುತ ಮಾರ್ಚ್ ಒಂದಕ್ಕೆ ಪರೀಕ್ಷೆ ಆರಂಭಗೊಂಡು ಎಪ್ರಿಲ್ 20 ರೊಳಗೆ ಮುಗಿಯುತ್ತಿವೆ. ಈ ಪರೀಕ್ಷೆ ಸುಮಾರು 45 ದಿನಗಳವರೆಗೂ ನಡೆಯುತ್ತಿತ್ತು.

ಮುಂಚಿತವಾಗಿ ಪರೀಕ್ಷೆ ನಡೆಸಲು ಕಾರಣ

ಅವಧಿಗೂ ಮುನ್ನ ಪರೀಕ್ಷೆಗಳನ್ನು ನಡೆಸಿದರೆ ಫಲಿತಾಂಶವನ್ನು ಬೇಗ ನೀಡಬಹುದು, ಬೇಗನೇ ಫಲಿತಾಂಶ ಪ್ರಕಟಗೊಳ್ಳಲಿರುವುದರಿಂದ ಪದವಿ ತರಗತಿಯ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಎದುರಿಸುತ್ತಿದ್ದ ಗೊಂದಲ ಪರಿಹಾರಗೊಳ್ಳಲಿದೆ.

ಮೌಲ್ಯಮಾಪನ ಸಂದರ್ಭದಲ್ಲಿ ಸಾಕಷ್ಟು ನ್ಯೂನ್ಯತೆಗಳು ಉಂಟಾಗುತ್ತಿದ್ದವು. ಇದನ್ನು ತಪ್ಪಿಸಲು ಬೇಗನೇ ಪರೀಕ್ಷೆ ನಡೆಸುವ ಸುಧಾರಣೆ ತರಲು ಮುಂದಾಗಿದೆ.

ಎಪ್ರಿಲ್‌ನಲ್ಲಿ ರಜೆ ಆರಂಭ ಮತ್ತು ಪರಿಣತಿ ಶಿಕ್ಷಕರು ದೊರೆಯುವುದಿಲ್ಲ. ಮಾರ್ಚ್ ಮಧ್ಯದಲ್ಲಿ ಮೌಲ್ಯಮಾಪನ ಆರಂಭಗೊಂಡರೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ಈ ಹೊಸ ನಿಯಮದಿಂದ ಈ ಎಲ್ಲ ಸಮಸ್ಯೆಗಳು ಪರಿಹಾರಗೊಳ್ಳಲಿದೆ ಎಂದು ಸಿಬಿಎಸ್‌ಸಿ ಹೇಳಿದೆ.

ಹೊಸ ನೀತಿಯಿಂದಾಗಿ ಮೌಲ್ಯಮಾಪನ ಮಾಡಲು ಪರಿಣತಿ ಹೊಂದಿದ ಶಿಕ್ಷಕರು ದೊರೆಯಲಿದ್ದಾರೆ. ಮಾತ್ರವಲ್ಲ ಎರಡು ಹಂತದಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಿಬಿಎಸ್‌ಇ ಅಧ್ಯಕ್ಷ ಆರ್.ಕೆ.ಚತುರ್ವೇದಿ ಹೇಳಿದ್ದಾರೆ.

ಇಲ್ಲಿಯವರೆಗೂ ಪರೀಕ್ಷೆಗಳ ಫಲಿತಾಂಶ ಘೋಷಣೆ ಈಗ ಮೇ ನಾಲ್ಕನೇ ವಾರದ ಸುಮಾರಿಗೆ ಪ್ರಕಟಗೊಳ್ಳುತ್ತಿತ್ತು. ಇದರಿಂದಾಗಿ ಪದವಿ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿತ್ತು. ಆದರೆ ಹೊಸ ನಿಯಮದಂತೆ ಪರೀಕ್ಷಾ ಪ್ರಕ್ರಿಯೆ ಫೆಬ್ರವರಿ 15 ಕ್ಕೆ ಆರಂಭಗೊಂಡು ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. 

ತೀರ್ಮಾನಕ್ಕೂ ಮುನ್ನ ಚರ್ಚೆ

ಹೊಸ ಪರೀಕ್ಷಾ ನೀತಿಯನ್ನು ಜಾರಿಗೊಳಿಸುವ ಮುನ್ನ ಶಾಲೆಗಳು, ಪೋಷಕರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಲಾಗಿದೆ.  ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಡಳಿತದಲ್ಲಿ ವಿವಿಧ ಹಂತಗಳಲ್ಲಿ ಪರಿಶೀಲಿಸಲಾಗುವುದು ನಂತರವೇ ಅವಧಿಗೆ ಮುನ್ನ 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಕೇಂದ್ರಿಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.

English summary
Before conducting the class 10 and 12 board exams in February next year, the Board said that no such decision will be taken without consultations with schools and parents

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia