ಯುಜಿಸಿ ಎನ್ಇಟಿ ಪರೀಕ್ಷೆಗೆ ಡೇಟ್ ಫಿಕ್ಸ್... ಇಂದಿನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ

Written By: Nishmitha B

ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಗೆ ನಡೆಸುವ 2018ರ ಸಾಲಿನ ಯುಜಿಸಿ ಹಾಗೂ ನೆಟ್ (NET) ಪರೀಕ್ಷೆಯ ದಿನಾಂಕವನ್ನ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ (ಸಿಬಿಎಸ್ಇ), ಪ್ರಕಟಿಸಿದೆ. ಈ ರಾಷ್ಟ್ರೀಯ ಅರ್ಹತಾ ಪರೀಕ್ಷೆಯು ಜುಲೈ 8 ರಂದು ನಡೆಯಲಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಮಾರ್ಚ್ 6 ರಿಂದ ಆನ್‌ಲೈನ್‌ನಲ್ಲಿ ಯುಜಿಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, 84 ಸಬ್‌ಜೆಕ್ಟ್ ನಲ್ಲಿ ಈ ಪರೀಕ್ಷೆ ನಡೆಯಲಿದೆ. ಹಾಗೂ ದೇಶದಾದ್ಯಂತ 91 ನಗರಗಳಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದಲಾಗಿದೆ

ಜುಲೈ 8 ರಂದು ಯುಜಿಸಿ ಎನ್ಇಟಿ ಪರೀಕ್ಷೆ... ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಪರೀಕ್ಷೆ ಮಾದರಿ: ಈ ಪರೀಕ್ಷೆಗೆ ಎರಡು ಪೇಪರ್‌ ಗಳಿದ್ದು, ಪೇಪರ್ 1 ಹಾಗೂ ಪೇಪರ್ 2 ಎಂದು ವರ್ಗೀಕರಿಸಲಾಗಿದೆ.

ಪೇಪರ್1 : ಇದರಲ್ಲಿ 50 ಆಬ್ ಜೆಕ್ಟೀವ್ ಪ್ರಶ್ನೆಗಳಿದ್ದು, ಪ್ರತಿಯೊಂದು ಪ್ರಶ್ನೆಯೂ 2 ಅಂಕಗಳನ್ನು ಹೊಂದಿದೆ. ಬೋಧನೆ / ಸಂಶೋಧನೆಯನ್ನು ನಿರ್ಣಯಿಸುವ ಉದ್ದೇಶದಿಂದ ಈ ಪರೀಕ್ಷೆ ನೀಡಲಾಗಿರುತ್ತದೆ. ಆಲೋಚನೆ ಮತ್ತು ಅಭ್ಯರ್ಥಿಯ ಸಾಮಾನ್ಯ ಜ್ಞಾನವನ್ನ ಟೆಸ್ಟ್ ಮಾಡಲು ಇರುವ ಪರೀಕ್ಷೆಯಾಗಿದ್ದು, ಇದರಲ್ಲಿ ಸಾಮಾನ್ಯ ವಿಷಯದ ಬಗ್ಗೆ ಪ್ರಶ್ನೆಗಳನ್ನ ಕೇಳಲಾಗಿರುತ್ತದೆ. ಈ ಪರೀಕ್ಷೆ ಅವಧಿ 1 ಗಂಟೆಯಾಗಿದ್ದು, ಬೆಳಗ್ಗೆ9.30 ರಿಂದ10.30 ವರೆಗೆ ನಡೆಯಲಿದೆ

ಪೇಪರ್ 2: ಇದು 100 ಆಬ್ ಜೆಕ್ಟೀವ್ ಪ್ರಶ್ನೆಗಳನ್ನ ಒಳಗೊಂಡಿರುತ್ತದೆ. ಪ್ರತಿಯೊಂದು ಪ್ರಶ್ನೆಯು 2 ಅಂಕಗಳನ್ನ ಒಳಗೊಂಡಿದೆ. ಈ ಪ್ರಶ್ನಾ ಪತ್ರಿಕೆಯಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿಕೊಂಡಿರುವ ವಿಷಯದ ಮೇಲೆ ಪ್ರಶ್ನೆ ಕೇಳಲಾಗಿರುತ್ತದೆ. ಈ ಪರೀಕ್ಷೆ ಅವಧಿ 2 ಗಂಟೆಯಾಗಿದ್ದು ಬೆಳಗ್ಗೆ 11 .00 ರಿಂದ ಮಧ್ಯಾಹ್ನ 1.00 ವರೆಗೆ ನಡೆಯಲಿದೆ

ಅಭ್ಯರ್ಥಿಗಳ ಆಯ್ಕೆ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮಾಡಲಾಗುತ್ತೆ. ಈ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ

ವಯೋಮಿತಿ: ಜನವರಿ 1,2018 ಕ್ಕೆ ಅನುಗುಣವಾಗಿ ಜೆ ಆರ್ ಎಫ್‌: 30 ವರ್ಷ. ನೆಟ್ ಪರೀಕ್ಷೆಗೆ ಯಾವುದೇ ವಯೋಮಿತಿ ಇಲ್ಲ

ಅರ್ಜಿ ಶುಲ್ಕ

ಸಾಮಾನ್ಯ ರೂ 1000
 ಒಬಿಸಿ ರೂ 500
 ಎಸ್‌ಸಿ/ಎಸ್‌ಟಿ/ಪಿಹೆಚ್ ರೂ.250

ಈ ಅಧಿಕೃತ್ ವೆಬ್ ಸೈಟ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕ ಮಾರ್ಚ್ 6, 2018
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 4, 2018
 ಆನ್‌ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆಯ ದಿನಾಂಕ ಎಪ್ರಿಲ್ 6, 2018
 ಪರೀಕ್ಷೆ ದಿನಾಂಕ ಜುಲೈ 8, 2018

ಹೇಗೆ ಅರ್ಜಿ ಸಲ್ಲಿಸುವುದು
ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ cbsenet.nic.in ಅರ್ಜಿ ಸಲ್ಲಿಸ ಬಹುದು. ಅರ್ಜಿ ಸಲ್ಲಿಸುವ ಮುನ್ನ ನೋಟಿಫಿಕೇಶನ್ ಓದಿಕೊಳ್ಳ ತಕ್ಕದ್ದು.

ಅರ್ಜಿ ಸಲ್ಲಿಸುವ ಮುನ್ನ 4 ಕೆಬಿಯಿಂದ 40 ಕೆಬಿ ಒಳಗೆ ಇರುವ 3.5 ಸೆ ಮೀ ಉದ್ದ ಹಾಗೂ 4.5 ಸೆಮಿ ಅಗಲ ಅಳತೆಯ ಪಾಸ್‌ಪೋರ್ಟ್ ಫೋಟೋ ಜತೆಗೆ 4 ಕೆಬಿಯಿಂದ 30 ಕೆಬಿ ಒಳಗೆ ಇರುವ 3.5 ಸೆ ಮೀ ಉದ್ದ ಹಾಗೂ 1.5 ಸೆಮಿ ಅಗಲ ಅಳತೆಯ ಸಹಿಯನ್ನ ರೆಡಿಮಾಡಿಟ್ಟು ಕೊಳ್ಳಿ

ಎಲ್ಲಾ ಮಾಹಿತಿ ನೀಡಿದ ಬಳಿಕ ಶುಲ್ಕ ಪಾವತಿಯ ವಿಧಾನವನ್ನ ಆಯ್ಕೆ ಮಾಡಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಲ್ಲ ಇ ಚಲನ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ. ಒಂದು ವೇಳೆ ಮನಿ ಆರ್ಡರ್, ಡಿಮಾಂಡ್ ಡ್ರಾಫ್ಟ್‌, ಐಪಿಓ ಮೂಲಕ ಶುಲ್ಕ ಪಾವತಿಸಿದ್ದಲ್ಲಿ ಅಭ್ಯರ್ಥಿಯ ಅರ್ಜಿಯನ್ನ ತಿರಸ್ಕರಿಸಲಾಗುವುದು

ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಯಾಕೆಂದರೆ ಕೊನೆಯ ಗಳಿಗೆಯಲ್ಲಿ ಒತ್ತಡ ಜಾಸ್ತಿಯಾಗುವುದರಿಂದ ಇಂಟರ್ ನೆಟ್‌ಗೆ ಸಂಬಂಧಪಟ್ಟಂತೆ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು

ಯುಜಿಸಿ ಪರೀಕ್ಷೆಯ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಜೂನ್ ಮೂರನೇ ವಾರದಲ್ಲಿ ಅಧಿಕೃತ ವೆಬ್‌ಸೈಟ್‌ cbsenet.nic.in ಇದರಲ್ಲಿ ಪ್ರವೇಶಪತ್ರ ಅಪ್‌ಲೋಡ್‌ ಮಾಡಲಾಗುವುದು ವಿನಾಃ ಯಾರಿಗೂ ಪೋಸ್ಟ್ ಮೂಲಕ ಕಳುಹಿಸಲಾಗುವುದಿಲ್ಲ. ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಅಭ್ಯರ್ಥಿಗಳು ತಮ್ಮ ತಮ್ಮ ಪ್ರವೇಶಪತ್ರವನ್ನ ಡೌನ್‌ಲೋಡ್ ಮಾಡಿಕೊಂಡು ಜತೆಗೆ ಫೋಟೋ ಐಡಿಯನ್ನು ಪರೀಕ್ಷೆ ವೇಳೆ ಹಾಜರುಪಡಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ

English summary
The Central Board of Secondary Education has released the exam date for UGC NET 2018. the exam will be held on July 8, 2018

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia