ಜೂನ್ 26ರೊಳಗೆ ನೀಟ್ 2017 ಪರೀಕ್ಷೆ ಫಲಿತಾಂಶ

Posted By:

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ನೀಟ್ ಪರೀಕ್ಷೆ ಫಲಿತಾಂಶ ಇದೇ ತಿಂಗಳ 26ನೇ ತಾರೀಖಿನೊಳಗೆ ಪ್ರಕಾಟವಾಗಲಿವೆ.

ನೀಟ್ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸಿಬಿಎಸ್ಇ ಗೆ ನೀಡಿದ್ದ ತಡೆ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ್ದು, ಸಿಬಿಎಸ್ ಇ ಗೆ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದೆ.

ಪ್ರಶ್ನೆ ಪತ್ರಿಕೆಯಲ್ಲಿ ತಾರತಮ್ಯವಿದೆ ಎಂಬ ಕೆಲ ವಿದ್ಯಾರ್ಥಿಗಳ ದೂರನ್ನು ಪರಿಗಣಿಸಿದ್ದ ಮದ್ರಾಸ್ ಹೈಕೋರ್ಟ್ ಫಲಿತಾಂಶ ಪ್ರಕಟಿಸದಂತೆ ಸಿಬಿಎಸ್ಇ ಗೆ ತಡೆನೀಡಿತ್ತು.

ನೀಟ್ 2017 ಪರೀಕ್ಷೆ ಫಲಿತಾಂಶ

ಫಲಿತಾಂಶ ತಡೆಹಿಡಿಯಲು ಕಾರಣ

ಪರೀಕ್ಷೆ ಸಂದರ್ಭದಲ್ಲಿ ಇಂಗ್ಲಿಷ್‌ ಮತ್ತು ತಮಿಳು ಭಾಷೆಗಳಲ್ಲಿ ಏಕರೂಪದ ಪ್ರಶ್ನೆ ಪತ್ರಿಕೆ ನೀಡಲಾಗಿಲ್ಲ ಎಂದು ಆರೋಪಿಸಿ ತಮಿಳುನಾಡಿನ ಕೆಲವು ಅಭ್ಯರ್ಥಿಗಳು ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವುಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಮೇ 24ರಂದು ನೀಟ್‌ ಫಲಿತಾಂಶ ಪ್ರಕಟಣೆಗೆ ತಡೆಯಾಜ್ಞೆ ನೀಡಿತ್ತು

ಫಲಿತಾಂಶಕ್ಕೆ ತಡೆಹೊಡಿದ್ದ ಕಾರಣ ಎಂಬಿಬಿಎಸ್ (Bachelor of Medicine, Bachelor of Surgery,)ಮತ್ತು ಬಿಡಿಎಸ್ (Bachelor of dental surgery)ಕೋರ್ಸಿಗಾಗಿ ನೀಟ್ ಪರೀಕ್ಷೆ ಬರೆದಿದ್ದ ಸುಮಾರು 10.5 ಲಕ್ಷ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು

ಆದರೆ ಇದೀಗ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದ್ದು, ನೀಟ್ ಪರೀಕ್ಷೆಯ ಫಲಿತಾಂಶದ ದಿನಾಂಕವನ್ನು ಸಿಬಿಎಸ್ಇ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಸುಪ್ರೀಂ ಕೋರ್ಟ್‌ ನಿರ್ದಿಷ್ಟ ದಿನಾಂಕ ನಿಗದಿ ಪಡಿಸ­ದಿದ್ದರೂ, ಫಲಿತಾಂಶ ಘೋಷಣೆ ಪ್ರಕ್ರಿಯೆಯನ್ನು ಸಿಬಿಎಸ್‌ಇ ಆರಂಭಿಸಿದೆ. ಜೂನ್ ತಿಂಗಳ ಕೊನೆಯ ವಾರದಲ್ಲಿ ಫಲಿತಾಂಶಗಳು ಪ್ರಕಟವಾಗುವ ಸಾಧ್ಯತೆ ಇದೆ.

ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ದೇಶದಾದ್ಯಂತ ಮೇ 7 ರಂದು ನಡೆಸಿದ್ದ ನೀಟ್‌ಗೆ 12 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

English summary
CBSE will declare NEET Result 2017 on or before June 26 following the Supreme Court order on June 12.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia