ಡಿಪ್ಲೊಮಾ ಪರೀಕ್ಷೆಗಳಿಗು ಸಿಸಿ ಕ್ಯಾಮೆರಾ ಅಳವಡಿಕೆ

Posted By:

ಡಿಪ್ಲೊಮಾ ಪರೀಕ್ಷೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ತಾಂತ್ರಿಕ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆದಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಲು ನಡೆದಿರಲಿಲ್ಲ. ಈಗ ಇದೇ ಮಾದರಿಯನ್ನು ಅನುಸರಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಏಪ್ರಿಲ್-ಮೇ ತಿಂಗಳಲ್ಲಿ ಪರೀಕ್ಷೆ

ಡಿಪ್ಲೊಮಾ ಪರೀಕ್ಷೆಗಳು ಏಪ್ರಿಲ್ 27 ರಿಂದ ಆರಂಭಗೊಳ್ಳಲಿದ್ದು ಮೇ 19 ರವರೆಗೆ ನಡೆಯಲಿವೆ. ಈ ಬಾರಿಯ ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರೀಕ್ಷೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ

ಪ್ರಶ್ನೆಪತ್ರಿಕೆ ಕೊಠಡಿಯಲ್ಲೂ ಕ್ಯಾಮೆರಾ

ಕೇವಲ ಪರೀಕ್ಷಾ ಕೊಠಡಿಯಲ್ಲಿ ಮಾತ್ರವಲ್ಲದೆ ಪ್ರಶ್ನೆಪತ್ರಿಕೆ ಭದ್ರತಾ ಕೋಣೆಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲು ಇಲಾಖೆ ಸೂಚನೆ ನೀಡಿದೆ. ಪರೀಕ್ಷಾ ವೇಳೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇನ್ನಿತರ ಅಕ್ರಮಕ್ಕೆ ಕಡಿವಾಣ ಹಾಕಲು ಇಲಾಖೆ ಈ ತೀರ್ಮಾನ ಕೈಗೊಂಡಿದೆ.

ಪಿಯು ಪರೀಕ್ಷೆಯ ಯಶಸ್ಸು

ಈ ಬಾರಿಯ ಪಿಯುಸಿ ಪರೀಕ್ಷೆ ವೇಳೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಯೋಜನೆ ಯಶಸ್ವಿಯಾಗಿತ್ತು. ರಾಜ್ಯಾದ್ಯಂತ ಎಲ್ಲಾ ಪರೀಕ್ಷಾ ಕೆಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಬಿಗಿಭದ್ರತೆಯ ನಡುವೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅಲ್ಲದೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತೆಯೂ ನೋಡಿಕೊಳ್ಳಲಾಗಿತ್ತು.

English summary
Department of technical education orders all technical institutions to keep cc cameras in exam centres to avoid mallpractice
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia