ಶಿಕ್ಷಕ ತರಬೇತಿಗೆ ಕೇಂದ್ರ ಸರ್ಕಾರ ತಡೆ

Posted By:

ಶಿಕ್ಷಕ ತರಬೇತಿಯ ಹೊಸ ಸಂಸ್ಥೆಗಳಿಗೆ 2018ರಿಂದ ಒಂದು ವರ್ಷ ಅನುಮತಿ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸರ್ಟಿಫಿಕೇಟ್‌ ಕೋರ್ಸ್‌, ಡಿಪ್ಲೊಮಾ ಮತ್ತು ಪದವಿ ಕೋರ್ಸ್‌ಗಳನ್ನು ನಡೆಸುವ ಹೊಸ ಸಂಸ್ಥೆಗಳಿಗೆ ಇನ್ನು ಒಂದು ವರ್ಷ ಅನುಮತಿ ದೊರೆಯುವುದಿಲ್ಲ. ಅಲ್ಲದೇ ಈಗಾಗಲೇ ಇರುವ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ 2018-19ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದ ಕೋರಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ.

ತರಬೇತಿಗೆ ಕೇಂದ್ರ ಸರ್ಕಾರದ ತಡೆ

ಅನುಮತಿ ನೀಡದಿರಲು ಕಾರಣ

ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್‌ನ (ಎನ್‌ಸಿಟಿಇ) ನಿಯಂತ್ರಣ ವ್ಯವಸ್ಥೆ ಮತ್ತು ಸಂರಚನೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಇದಕ್ಕೆ ಕಾರಣ.

'ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈಗ ಇರುವ ಶಿಕ್ಷಕ ಶಿಕ್ಷಣದ ನಿಯಂತ್ರಣ ವ್ಯವಸ್ಥೆ ಮತ್ತು ಸಂರಚನೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಅಗತ್ಯ ಇದೆ. ಶಿಕ್ಷಕ ಶಿಕ್ಷಣ ಮತ್ತು ಶಿಕ್ಷಕ ತರಬೇತಿ ಸಂಸ್ಥೆಗಳು ಉತ್ತಮವಾಗಿದ್ದರೆ ಮಾತ್ರ ಗುಣಮಟ್ಟದ ಶಿಕ್ಷಕರು ರೂಪುಗೊಳ್ಳುತ್ತಾರೆ. ಈ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ' ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್‌ (ಎನ್‌ಸಿಟಿಇ)

1995ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್‌ (ಎನ್‌ಸಿಟಿಇ) ಸ್ಥಾಪನೆಗೊಂಡಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ಇರುವ ಶಾಲಾ ಕಾಲೇಜುಗಳಲ್ಲಿ  ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಶಿಕ್ಷಕರಿಗೆ ತರಬೇತಿ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಸಂಶೋಧನೆ ಮತ್ತು ತರಬೇತಿ ಸೇರಿ ಶಿಕ್ಷಕ ಶಿಕ್ಷಣದ ಸಂಪೂರ್ಣ ನಿರ್ವಹಣೆ ಈ ಪರಿಷತ್‌ನ ಹೊಣೆಯಾಗಿದೆ. ಅನೌಪಚಾರಿಕ ಶಿಕ್ಷಣ ವ್ಯವಸ್ಥೆ, ವಯಸ್ಕರ ಶಿಕ್ಷಣ ಮತ್ತು ದೂರ ಶಿಕ್ಷಣ ಕ್ಷೇತ್ರದ ಶಿಕ್ಷಕ ತರಬೇತಿ ಕೂಡ ಈ ಸಂಸ್ಥೆಯ ವ್ಯಾಪ್ತಿಗೆ ಬರುತ್ತದೆ.

ಕಾನೂನು ರೂಪಿಸಿ ಎನ್‌ಸಿಟಿಇಯನ್ನು ಪ್ರತ್ಯೇಕಗೊಳಿಸುವ ಮೊದಲು ಅದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಭಾಗವಾಗಿತ್ತು. ಆಗ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹಾ ಮಂಡಳಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು.

ಎನ್ ಸಿ ಟಿ ಇ ಕಾರ್ಯಕ್ರಮಗಳು

 • ಬಾಲ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಶಾಲಾಪೂರ್ವ ಶಿಕ್ಷಣ ಡಿಪ್ಲೊಮಾ (DPSE)
 • ಪ್ರಾಥಮಿಕ ಶಿಕ್ಷಣ ಡಿಪ್ಲೊಮಾ (D.El.Ed.) ಕಾರ್ಯಕ್ರಮ
 • ಪ್ರಾಥಮಿಕ ಶಿಕ್ಷಕ ಶಿಕ್ಷಣ ಕಾರ್ಯಕ್ರಮದ ಬ್ಯಾಚುಲರ್ ಪದವಿ ಪ್ರಾಥಮಿಕ ಶಿಕ್ಷಣ (B.El.Ed.)
 • ಬ್ಯಾಚುಲರ್ ಪದವಿ ಶಿಕ್ಷಣ (ಬಿ.ಎಡ್)
 • ಮಾಸ್ಟರ್ ಆಫ್ ಎಜುಕೇಶನ್ (M.Ed.) ಶಿಕ್ಷಣ ಕಾರ್ಯಕ್ರಮ
 • ದೈಹಿಕ ಶಿಕ್ಷಣ ಡಿಪ್ಲೊಮಾ (D.P.Ed.) ಕಾರ್ಯಕ್ರಮ
 • ದೈಹಿಕ ಶಿಕ್ಷಣ ಕಾರ್ಯಕ್ರಮದ ಬ್ಯಾಚುಲರ್ ಪದವಿ ದೈಹಿಕ ಶಿಕ್ಷಣ (B.P.Ed.) ಪದವಿ
 • ಮಾಸ್ಟರ್ ದೈಹಿಕ ಶಿಕ್ಷಣ (M.P.Ed.) ಪದವಿ
 • ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಯಡಿ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಡಿಪ್ಲೊಮಾ (D.El.Ed.)
 • ಆರ್ಟ್ಸ್ ಶಿಕ್ಷಣ (ದೃಶ್ಯಕಲೆ) ಡಿಪ್ಲೊಮಾ
 • ಕಲೆಗಳ (ದೃಶ್ಯಕಲೆ) ಪ್ರೋಗ್ರಾಂ
 • ಡಿಪ್ಲೊಮಾ ಕಲೆ ಶಿಕ್ಷಣದಲ್ಲಿ (ಪ್ರದರ್ಶನ ಕಲೆಗಳು) ಆರ್ಟ್ಸ್ ಶಿಕ್ಷಣ (ಪ್ರದರ್ಶನ ಕಲೆಗಳು) ಡಿಪ್ಲೊಮಾ ಪ್ರೋಗ್ರಾಂ
 • 4 ವರ್ಷದ B.A.B.Ed./B.Sc.B.Ed ಇಂಟಿಗ್ರೇಟೆಡ್ ಪ್ರೋಗ್ರಾಂ.

ಎನ್ ಸಿ ಟಿ ಇ ಬಗ್ಗೆ ಹೆಚ್ಚಿನದ್ದನ್ನು ತಿಳಿಯಿಲು www.ncte-india.org  ಕ್ಲಿಕ್ ಮಾಡಿ

English summary
central government orders to stop teachers training for one year to newly formed institutions

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia