ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ 'ಸ್ವಯಂ' ಮನೆ ಪಾಠ

ಸ್ವಯಂ ಹೆಸರಿನಲ್ಲಿ ಶುರುವಾಗಿರುವ ಉಚಿತ ಆನ್-ಲೈನ್ ಶಿಕ್ಷಣ ಮೂಲಕ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪ್ರವೇಶ ಪರೀಕ್ಷೆಗೆ ಅಭ್ಯಾಸ ಮಾಡಬಹುದಾಗಿದೆ.

ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ನಾಲ್ಕು ಶೈಕ್ಷಣಿಕ ಟಿವಿ ವಾಹಿನಿಗಳಿಗೆ ಭಾನುವಾರ ಚಾಲನೆ ನೀಡಿದೆ.

ಸ್ವಯಂ ಹೆಸರಿನಲ್ಲಿ ಶುರುವಾಗಿರುವ ಉಚಿತ ಆನ್-ಲೈನ್ ಶಿಕ್ಷಣ ಮೂಲಕ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪ್ರವೇಶ ಪರೀಕ್ಷೆಗೆ ಅಭ್ಯಾಸ ಮಾಡಬಹುದಾಗಿದೆ.

ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ತಜ್ಞರು ವಾಹಿನಿಗಳ ಮೂಲಕ ಪರೀಕ್ಷಾ ತಯಾರಿ ಬಗ್ಗೆ ಬೋಧನೆ ಮಾಡಲಿದ್ದಾರೆ

ಸ್ವಯಂ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಸ್ವಯಂ ಪ್ರಭ ವಾಹಿನಿ

ಭಾನುವಾರ ಆರಂಭಗೊಂಡಿರುವ 32 ಶೈಕ್ಷಣಿಕ ವಾಹಿನಿಗಳು 'ಸ್ವಯಂ ಪ್ರಭ' ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಡಿಶ್‌ ಟಿವಿಯಲ್ಲಿ ದಿನದ 24 ಗಂಟೆಗಳೂ ಪ್ರಸಾರವಾಗಲಿವೆ.

ಆನ್‌ಲೈನ್‌ ಕೋರ್ಸ್‌ಗಳ ವೇದಿಕೆ 'ಸ್ವಯಂ' ಪ್ರೌಢ ಮತ್ತು ಪಿಯುಸಿ ಮಟ್ಟದ 29 ವಿಷಯಗಳಲ್ಲಿ ವರ್ಚ್ಯುವಲ್ ತರಗತಿಗಳನ್ನು ನಡೆಸಲಿದೆ.

ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ ಮೆಂಟ್‌ ಸೇರಿದಂತೆ ವಿವಿಧ ಕ್ಷೇತ್ರಗಳ 210 ಪದವಿ ಕೋರ್ಸ್‌ಗಳು ಮತ್ತು 192 ಸ್ನಾತಕೋತ್ತರ ಪದವಿ ರ್ಸ್‌ಗಳ ಬೋಧನೆಯೂ ಸ್ವಯಂ ವಾಹಿನಿಯಲ್ಲಿ ಇರಲಿದೆ. ಇದರ ಜೊತೆಗೆ 14 ಅಲ್ಪಾವಧಿ (ಸರ್ಟಿಫಿಕೇಟ್‌) ಕೋರ್ಸ್‌ಗಳು ಮತ್ತು ಮೂರು ಡಿಪ್ಲೊಮಾ ಕೋರ್ಸ್‌ಗಳನ್ನೂ ನೀಡಲಿದೆ.

ಸ್ವಯಂ ಪ್ರಭ ಕಾರ್ಯ ವೈಖರಿ

ಸ್ವಯಂ ಪ್ರಭದ ನಾಲ್ಕು ವಾಹಿನಿಗಳು ಐಐಟಿ-ಪಾಲ್‌ (ಐಐಟಿ ಪ್ರೊಫೆಸರ್‌ ನೆರವಿನಿಂದ ಕಲಿಯುವಿಕೆ) ಅಡಿಯಲ್ಲಿ ಪ್ರಸಾರವಾಗಲಿವೆ. ಚಾನೆಲ್‌ಗಳು ಪ್ರತಿದಿನ ನಾಲ್ಕು ಗಂಟೆಗಳ ಕಾಲ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಹೊಸ ಮಾಹಿತಿಯನ್ನು ಪ್ರಸಾರ ಮಾಡಲಿವೆ. ನಂತರ ಅದು ಐದು ಬಾರಿ ಮರು ಪ್ರಸಾರ ಆಗಲಿದೆ.

ಐಐಟಿ-ಪಾಲ್‌ ವಾಹಿನಿಗಳನ್ನು ದೆಹಲಿಯ ಐಐಟಿ ನಿರ್ವಹಿಸಲಿದೆ. ವಿವಿಧ ಐಐಟಿಗಳು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇತರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿಷಯ ತಜ್ಞರು ನೇರ ಮತ್ತು ಸಂವಹನಾತ್ಮಕ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ.

ಸ್ವಯಂ ಆನ್-ಲೈನ್ ಕೋರ್ಸ್

ಸ್ವಯಂ ಆನ್-ಲೈನ್ ಶಿಕ್ಷಣ ಮೂಲಕ ಯಾರು ಬೇಕಾದರೂ, ದೇಶದ ಯಾವ ಮೂಲೆಯಿಂದಲೂ ಆನ್‌ಲೈನ್‌ ಮೂಲಕ ಅಲ್ಪ ಖರ್ಚಿನಲ್ಲಿ ಈ ಕೋರ್ಸ್‌ಗಳನ್ನು ಮಾಡಬಹುದು.

ಸ್ವಯಂ ಆನ್-ಲೈನ್ ಶಿಕ್ಷಣ ಮೂಲಕ ಪ್ರಮಾಣ ಪತ್ರ, ಡಿಪ್ಲೊಮಾ ಮತ್ತು ಪದವಿ ಪಡೆಯಲು ಬಯಸುವವರು ಅದರ ಪೋರ್ಟಲ್‌ಗೆ ಭೇಟಿ ಕೊಟ್ಟು ನೋಂದಣಿ ಮಾಡಿಸಿಕೊಂಡು, ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕು.

ಕೋರ್ಸ್‌ ಮುಗಿದು ಪದವಿ, ಡಿಪ್ಲೊಮಾ ಪ್ರಮಾಣಪತ್ರ ನೀಡುವುದಕ್ಕೂ ಮುನ್ನ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಪಡೆದಿರುವ ಅಂಕ/ಗ್ರೇಡ್‌ಗಳನ್ನು ಆ ಅಭ್ಯರ್ಥಿಯ ಶೈಕ್ಷಣಿಕ ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ಯಾವುದಾದರೂ ವಿ.ವಿ ಮತ್ತು ಕಾಲೇಜುಗಳಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರ ಅಂಕಗಳು ಮತ್ತು ಗ್ರೇಡ್‌ಗಳನ್ನು ಅವರ ಮಾತೃ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಸ್ವಯಂ: swayam.gov.in

ಸ್ವಯಂ ಪ್ರಭಾ: www.swayamprabha.gov.in

For Quick Alerts
ALLOW NOTIFICATIONS  
For Daily Alerts

English summary
Government of India introduced new scheme called Swayam Prabha in association with Ministry of Human Resource Development. Swayam Prabha Scheme allows 32 Direct-to-Home (DTH) Television Channels for providing high quality educational content to all teachers, students and citizens across the country.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X