ಹೆಚ್ಚಾಗಲಿದೆ ಸೈನಿಕ ಶಾಲೆಗಳ ಸಂಖ್ಯೆ: ಹೆಣ್ಣು ಮಕ್ಕಳಿಗೂ ಅವಕಾಶ

Posted By:

ದೇಶದಲ್ಲಿರುವ 26 ಸೈನಿಕ ಶಾಲೆಗಳ ಜೊತೆಗೆ ಹೊಸದಾಗಿ ಇನ್ನು 21 ಶಾಲೆಗಳನ್ನು ಸೇರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಸೈನಿಕ ಶಾಲೆಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಹೆಣ್ಣು ಮಕ್ಕಳಿಗೂ ಸೈನಿಕ ಶಾಲೆ ಸೇರಲು ಅವಕಾಶ ಕಲ್ಪಿಸುವುದಾಗಿಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್‌ ರಾಮರಾವ್‌ ಭಾಮ್ರೆ ತಿಳಿಸಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿದ ಸಚಿವರು ಪ್ರಶ್ನೋತ್ತರ ವೇಳೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ರಾಷ್ಟ್ರದಲ್ಲಿ ಸದ್ಯಕ್ಕೆ 26 ಸೈನಿಕ ಶಾಲೆಗಳು ಇವೆ. ಇನ್ನೂ 21 ಶಾಲೆಗಳನ್ನು ಆರಂಭಿಸುವ ಪ್ರಸ್ತಾವ ಬಾಕಿ ಇದೆ ಎಂದರು.

ಹೆಚ್ಚಾಗಲಿದೆ ಸೈನಿಕ ಶಾಲೆಗಳ ಸಂಖ್ಯೆ

ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಾಗಿದ್ದು, ರಾಷ್ಟ್ರೀಯ ಮಿಲಿಟರಿ ಅಕಾಡೆಮಿಯಲ್ಲಿ (ಎನ್‌ಡಿಎ) ಮಹಿಳಾ ಕೆಡೆಟ್‌ಗಳಿಗೂ ಅವಕಾಶ ನೀಡುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

'22 ರಾಜ್ಯಗಳಲ್ಲಿ ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೈನಿಕ ಶಾಲೆಗಳನ್ನು ಆರಂಭಿಸುವಂತೆ ಪ್ರಸ್ತಾವ ಸಲ್ಲಿಸಿವೆ. ಈ ಶಾಲೆಗಳಿಗಾಗಿ 2017-2018ರ ಬಜೆಟ್‌ನಲ್ಲಿ ₹80 ಕೋಟಿ ಅನುದಾನ ಮೀಸಲಿಡಲಾಗಿದೆ' ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

'ಸೈನಿಕ ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಗಳು ಹೆಚ್ಚಿನ ಸಂಖ್ಯೆಯ ಕೆಡೆಟ್‌ಗಳನ್ನು ಎನ್‌ಡಿಎಗೆ ಒದಗಿಸುವ ಮೂಲಕ ತಮ್ಮ ಸಾಮರ್ಥ್ಯ ಹಾಗೂ ಸೌಲಭ್ಯಗಳನ್ನು ಸಾಬೀತುಪಡಿಸಿವೆ. 2016ರಲ್ಲಿ ಸೈನಿಕ ಶಾಲೆಗಳಿಂದ ಶೇ 29.33 ರಷ್ಟು ಕೆಡೆಟ್‌ಗಳನ್ನು ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಗಳು ಶೇ 5.71 ರಷ್ಟು ಕೆಡೆಟ್‌ಗಳನ್ನು ಅಕಾಡೆಮಿಗೆ ನೀಡಿವೆ' ಎಂದು ಅವರು ತಿಳಿಸಿದ್ದಾರೆ

English summary
Central government to introduce 21 more sainik school across the nation. It also planning to provide seats for girls in sainik schools.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia