ಸಿಇಟಿ 2017 ಫಲಿತಾಂಶ ಪ್ರಕಟ: ಪ್ರತೀಕ್ ಎಸ್ ನಾಯಕ್ ಪ್ರಥಮ

Posted By:

2017ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ(ಮೇ 30) ಮಧ್ಯಾಹ್ನ 11.15 ಗಂಟೆ ಸುಮಾರಿಗೆ ಪ್ರಕಟಿಸಿದರು.

ವಿದ್ಯಾರ್ಥಿಗಳು ಇಂದು ಮಧ್ಯಾಹ್ನ 1 ಗಂಟೆ ನಂತರ ಪ್ರಾಧಿಕಾರದ ವೆಬ್ಸೈಟ್ ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ವಿವಿಧ ವೃತ್ತಿಪರ ಕೋರ್ಸ್(ಬಿಇ, ಬಿಫಾರ್ಮಾ, ಆಯುಷ್, ಕೃಷಿ ಇಂಜಿನಿಯರಿಂಗ್) ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಸಿಇಟಿ 2017 ಫಲಿತಾಂಶ ಪ್ರಕಟ

ಈ ಬಾರಿಯ ಟಾಪರ್ಸ್

  • ಇಂಜಿನಿಯರಿಂಗ್ ನಲ್ಲಿ  ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿ ಪ್ರತೀಕ್ ನಾಯಕ್ ಅಗ್ರಸ್ಥಾನ ಪಡೆದಿದ್ದಾರೆ.
  • ದ್ವಿತೀಯ ಸ್ಥಾನದಲ್ಲಿ ಸುಮಂತ್ ಹೆಗಡೆ, ವಿವಿಎಸ್ ಸರ್ದಾರ್ ಕಾಲೇಜು.
  • ಮೂರನೇ ಸ್ಥಾನದಲ್ಲಿ ಅನಿರುದ್ಧ್, ಆರ್ ವಿ ಪಿಯು ಕಾಲೇಜು, ಬೆಂಗಳೂರು.

ಸಿಇಟಿ ಫಲಿತಾಂಶ ನೋಡುವ ವಿಧಾನ

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • Kea.kar.nic.in ಅಥವಾ Karresults.nic.in
  • "ಸಿಇಟಿ 2017" ಬಟನ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ
  • ರಿಸಲ್ಟ್ ಪಡೆಯಿರಿ, ಡೌನ್ ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ

ಸರ್ಕಾರದಿಂದ ಉಚಿತ ಶಿಕ್ಷಣ

ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರ 2016ರಲ್ಲೇ ಘೋಷಿಸಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವುದಾಗಿ ಸಚಿವರು ತಿಳಿಸಿದರು.

English summary
CET 2017 results are announced. Mangalore student Prathik naik got first rank, Sumanth hegde from Bangalore got second rank.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia