ಸಿಇಟಿ-2017 ಕೌನ್ಸಲಿಂಗ್: ಪರಿಷ್ಕೃತ ವೇಳಾಪಟ್ಟಿ ಪ್ರಕಟ

Posted By:

ಸಿಇಟಿ-2017 ರ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾ ಅಭ್ಯರ್ಥಿಗಳಿಗೆ ಛಾಯ್ಸ್ ಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಕೊನೆಯ ದಿನಾಂಕವನ್ನು 07-07-2017 ರವರೆಗೆ ವಿಸ್ತರಿಸಲಾಗಿದೆ.

ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ನಂತರ ಇಲ್ಲಿಯವರೆಗೆ ಛಾಯ್ಸ್ ಗಳ ಆಯ್ಕೆ ಮಾಡಿರುವ ಅಭ್ಯರ್ಥಿಗಳು ಸೂಕ್ತವಾದ ಛಾಯ್ಸ್ ಆಯ್ಕೆ ಮಾಡಿ ಅದರಂತೆ ಕ್ರಮ ವಹಿಸಬಹುದಾಗಿದೆ.

ಮೊದಲ ಸುತ್ತಿನ ದಿನಾಂಕ ವಿಸ್ತರಣೆ ಜೊತೆಗೆ ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಮಾರ್ಪಡು ಮಾಡಿ ಪ್ರಕಟಿಸಲಾಗಿದೆ.

ಸಿಇಟಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಎರಡನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ವೇಳಾಪಟ್ಟಿ

ಸಿಇಟಿ-2017 ರ ಬ್ರೋಚರ್ನಲ್ಲಿ ನೀಡಿರುವ ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪರಿಷ್ಕೃತ ವೇಳಾಪಟ್ಟಿಯಂತೆ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದಾಗಿದೆ.

ಮೊದಲನೇ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ/ರದ್ದುಪಡಿಸಿಕೊಂಡಿರುವ ಅಥವಾ ಯಾವುದಾದರು ಸೀಟುಗಳು ಹೊಸದಾಗಿ ಸೇರಿಸಲ್ಪಟ್ಟಿದ್ದರೆ ಅಂತಹ ಸೀಟುಗಳನ್ನು ಈ ಸುತ್ತಿನಲ್ಲಿ ಹಂಚಿಕೆಗೆ ಲಭ್ಯಮಾಡಲಾಗುವುದು.

ಛಾಯ್ಸ್ 2 ಮತ್ತು ಛಾಯ್ಸ್ 3 ಗಳನ್ನು ಆಯ್ಕೆ ಮಾಡಿರುವ ಮತ್ತು ಯಾವುದೇ ಸೀಟುಗಳನ್ನು ಇಲ್ಲಿಯವರೆಗೆ ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹಗೊಳ್ಳುತ್ತಾರೆ.

ಪರಿಷ್ಕೃತ ವೇಳಾಪಟ್ಟಿ

ಅಭ್ಯರ್ಥಿಗಳು ಸೀಟುಗಳ ಬದಲಾವಣೆ ಮಾಡಲು ಅವಕಾಶದಿನಾಂಕ 11-07-2017(ಬೆಳಗ್ಗೆ 11 ರಿಂದ) ರಿಂದ 14-07-2017 ಬೆಳಗ್ಗೆ 11 ರವರೆಗೆ
ಸೀಟು ಹಂಚಿಕೆಯ ಪ್ರಕಟಣೆ17-07-2017 ಬೆಳಗ್ಗೆ 11 ಗಂಟೆಗೆ
ಸೀಟುಗಳನ್ನು ಖಾತ್ರಿ ಪಡಿಸಿಕೊಳ್ಳಲು, ಶುಲ್ಕ ಪಾವತಿಸಲು ಮತ್ತು ದಾಖಲಾತಿ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು18-07-2017 ರಿಂದ 20-07-2017
ಕಾಲೇಜುಗಳಲ್ಲಿ ರಿಪೋರ್ಟ್ ಮಾಡಿಕೊಳ್ಳಲು ಕೊನೆಯ ದಿನಾಂಕ21-07-2017 ಸಂಜ 5.30ರವರೆಗೆ

ಶುಲ್ಕ ಪಾವತಿಗೆ ಅವಧಿ ವಿಸ್ತರಣೆ

ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಜುಲೈ 07 ರವರೆಗೂ ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ kea.kar.nic.in ಗಮನಿಸಲು ಕೋರಿದೆ.

English summary
Karnataka examination authority has extended the dates for first round activities and also published revised time table for second round seat allotment

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia