ಸಿಇಟಿ 2017: ಎರಡನೇ ಸುತ್ತಿನ ಸೀಟು ಹಂಚಿಕೆ ವಿವರ ಪ್ರಕಟ

Posted By:

2017 ನೇ ಸಾಲಿನ ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇಂಜಿನಿಯರಿಂಗ್, ಅಗ್ರಕಲ್ಚರ್, ಡಿ ಫಾರ್ಮ ಮತ್ತ ಆಯುಷ್ ಕೋರ್ಸುಗಳ ಸೀಟು ಹಂಚಿಕೆಯ ವಿವರವನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆ ವಿವರವನ್ನು ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.

ಸಿಇಟಿ ಸೀಟು ಹಂಚಿಕೆ ವಿವರ ಪ್ರಕಟ

ಸೀಟು ಹಂಚಿಕೆ ವಿವರದ ಜೊತೆಗೆ ಕಟ್ ಆಫ್ ಮಾಹಿತಿ ಕೂಡ ವೆಬ್ಸೈಟ್ ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಸೀಟು ಹಂಚಿಕೆಯ ವಿವರಗಳನ್ನು ಪರಿಶೀಲಿಸಿದ ನಂತರ ಸೀಟುಗಳ ಆಯ್ಕೆ ಮತ್ತು ಸೀಟು ಕಾಯ್ದಿರಿಸುವಿಕೆ ಮಾಡಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ದಾಖಲಿಸುವ ಮುನ್ನ ಪ್ರಾಧಿಕಾರವು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಪ್ರಕಟಿಸಿರುವ ಮೊದಲ ಸುತ್ತಿನ ಸೀಟುಗಳ ಹಂಚಿಕೆಯನ್ನು ಗಮನಿಸತಕ್ಕದ್ದು. ಒಂದು ವೇಳೆ ವೈದ್ಯಕೀಯ ಕೋರ್ಸುಗಳಿಗೆ ಅರ್ಹತೆ ಹೊಂದಿದ್ದರೆ ತಮಗೆ ಯಾವುದು ಸೂಕ್ತ ಎಂದು ನಿರ್ಧರಿಸಿ ಎಚ್ಚರಿಕೆಯಿಂದ ಸೀಟು ಆಯ್ಕೆ ಮಾಡಿಕೊಳ್ಳುವುದು.

ಯಾವ ಆಯ್ಕೆ ದಾಖಲಿಸಿದರೆ ಏನು ಪರಿಣಾಮ ಎಂಬುದನ್ನು ಗಮನದಲ್ಲಿಟ್ಟಕೊಂಡು, ನೀಡಿರುವ ಮಾಹಿತಿಯನ್ನು ಸಂಪೂರ್ಣ ಓದಿ ನಂತರ ಸೀಟುಗಳನ್ನು ದಾಖಲಿಸಕ್ಕದ್ದು. ಎರಡನೇ ಸುತ್ತಿನ ಮಾಹಿತಿ ಪ್ರಕಟವಾದ ನಂತರ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಆಯ್ಕೆ ದಾಖಲಿಸಲು ಅವಕಾಶವಿರುವುದಿಲ್ಲ.
ಎರಡನೇ ಸುತ್ತಿನಲ್ಲಿ ಆಯ್ಕೆ ಮಾಡಿಕೊಂಡ ಸೀಟುಗಳಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪಡೆಯಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ kea.kar.nic.in ಗಮನಿಸಿ

English summary
Karnataka Examination Authority (KEA) declared the second allotment results for the Common Entrance Test (CET) 2017. The examination was held for providing admissions to students who are looking for professional degree courses in Engineering, Architecture, Agriculture ISMH (AYUSH) and Pharmacy.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia