Key Changes In CMAT 2021: ಈ ವರ್ಷದಲ್ಲಿ ಸಿಎಂಎಟಿ ಪರೀಕ್ಷೆಯಲ್ಲಿ ಏನೆಲ್ಲಾ ಹೊಸ ಬದಲಾವಣೆಗಳಿವೆ ಗೊತ್ತಾ?

2021ರ ಸಿಎಂಎಟಿ ಪರೀಕ್ಷೆಯ  ಹೊಸ ಬದಲಾವಣೆಗಳ ಮಾಹಿತಿ ತಿಳಿಯಿರಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ (ಸಿಎಂಎಟಿ) 2021ರಲ್ಲಿ ಹಲವು ಮಹತ್ವ ಬದಲಾವಣೆಗಳನ್ನು ಪರಿಚಯಿಸಿದೆ. ಈ ಭಾರಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಕಾಮನ್ ಮ್ಯಾನೇಜ್‌ಮೆಂಟ್ ಅಡ್ಮಿಶನ್ ಟೆಸ್ಟ್ ಗೆ ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದ್ದು, ಅರ್ಹ ಅಭ್ಯರ್ಥಿಗಳು ಜನವರಿ 22,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಸಿಎಂಎಟಿ ಪರೀಕ್ಷೆಯು ಫೆಬ್ರವರಿ 22 ಮತ್ತು 27,2021 ರಂದು ದೇಶದಾದ್ಯಂತ ನಡೆಯಲಿದೆ.

CMAT 2021: ಸಿಎಂಎಟಿ ಪರೀಕ್ಷೆ 2021ಗೆ ಅರ್ಜಿ ಆಹ್ವಾನCMAT 2021: ಸಿಎಂಎಟಿ ಪರೀಕ್ಷೆ 2021ಗೆ ಅರ್ಜಿ ಆಹ್ವಾನ

2021ನೇ ಸಾಲಿನಲ್ಲಿ ಸಿಎಂಎಟಿ ಪರೀಕ್ಷೆಯಲ್ಲಿನ ಮಹತ್ವದ ಬದಲಾವಣೆಗಳಿವು :

* ಸಿಎಂಎಟಿ 2020ರಲ್ಲಿ ಪರೀಕ್ಷೆಯು ಒಂದೇ ದಿನದಲ್ಲಿ ಒಂದೇ ಶಿಫ್ಟ್ ನಲ್ಲಿ ನಡೆದಿತ್ತು. ಆದರೆ ಸಿಎಂಎಟಿ 2021ರ ಪರೀಕ್ಷೆಯು ಫೆಬ್ರವರಿ 22 ಮತ್ತು 27,2021ರಂದು ಅಂದರೆ ಎರಡು ದಿನಗಳಲ್ಲಿ ಎರಡು ಶಿಫ್ಟ್ ಗಳಲ್ಲಿ ನಡೆಯಲಿದೆ.

* ಸಿಎಂಎಟಿ 2021ರಲ್ಲಿ ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು 1,600 ರಿಂದ 2,000/-ರೂ ಗೆ ಹೆಚ್ಚಿಸಲಾಗಿದೆ.

* ಕಾಯ್ದಿರಿಸಿದ ವರ್ಗ ಮತ್ತು ಲಿಂಗಾಯಿತ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು 700/- ರಿಂದ 1,000/-ರೂ ಗೆ ಹೆಚ್ಚಿಸಲಾಗಿದೆ.

* ಈ ಭಾರಿ ಸಿಎಂಎಟಿ 2021 ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 104 ರಿಂದ 153ಕ್ಕೆ ಏರಿಸಲಾಗಿದೆ.

* ಡಾ. ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ (ಎಕೆಟಿಯು) ನಡೆಸಿದ ಯುಪಿಎಸ್‌ಇ ಪ್ರವೇಶ ಪರೀಕ್ಷೆಯ ವ್ಯಾಪ್ತಿಗೆ ಬರುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು 2021 ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಲಿದೆ. ಆದಾಗ್ಯೂ, 2021 ರ ಶೈಕ್ಷಣಿಕ ವರ್ಷದಲ್ಲಿ, ಎಕೆಟಿಯು ಸಿಎಮ್‌ಎಟಿ ಸ್ಕೋರ್‌ಕಾರ್ಡ್ ಅನ್ನು ಎಂಬಿಎ ಪ್ರೋಗ್ರಾಂಗೆ ಪ್ರವೇಶ ನೀಡಲು ಪರಿಗಣಿಸುತ್ತದೆ.

ಸಿಎಂಎಟಿ 2021 ಪರೀಕ್ಷೆಗೆ ಕೋವಿಡ್ ಹಿನ್ನೆಲೆಯಲ್ಲಿ ಸಲಹೆ:

ಅಭ್ಯರ್ಥಿಗಳು ಸಿಎಂಎಟಿ 2021 ಪ್ರವೇಶ ಪತ್ರದ ಜೊತೆಗೆ ಎನ್‌ಟಿಎ ವೆಬ್‌ಸೈಟ್‌ನಿಂದ ಸ್ವಯಂ ಘೋಷಣೆ (ಜವಾಬ್ದಾರಿಯನ್ನು) ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಪರೀಕ್ಷೆಯ ದಿನದಂದು ಅಭ್ಯರ್ಥಿಗಳು ಅದನ್ನು ಭರ್ತಿ ಮಾಡಿ ಪರೀಕ್ಷೆಯ ಇನ್ವಿಜಿಲೇಟರ್‌ಗೆ ಹಸ್ತಾಂತರಿಸಬೇಕಾಗುತ್ತದೆ.

ಎನ್‌ಟಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಜುಯೇಟ್ ಫಾರ್ಮಸಿ ಆಪ್ಟಿಟ್ಯೂಡ್ ಟೆಸ್ಟ್ (ಜಿಪಿಎಟಿ 2021) ಗಾಗಿ ಆನ್‌ಲೈನ್ ಅರ್ಜಿಗಳನ್ನು ಕೂಡ ಪ್ರಾರಂಭಿಸಿದೆ.

For Quick Alerts
ALLOW NOTIFICATIONS  
For Daily Alerts

English summary
CMAT 2021: Here Are the New Changes by NTA Candidates Should Know. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X