ಕಾಮೆಡ್ ಕೆ ಫಲಿತಾಂಶ ಪ್ರಕಟ: ರಾಜ್ಯದ ವಿದ್ಯಾರ್ಥಿಗಳ ಅಮೋಘ ಸಾಧನೆ

Posted By:

ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾದ ಕಾಮೆಡ್-ಕೆ 2017 ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗಿದೆ. ಈ ಬಾರಿಯ ಕಾಮೆಡ್ ಕೆ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಮೊದಲ ಹತ್ತು ರ್ಯಾಂಕ್ ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿದೆ.

ಈ ವರ್ಷದ ಕಾಮೆಡ್ ಗೆ ಪರೀಕ್ಷೆಗೆ ಒಟ್ಟು 58,932 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದೇ 14ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದವರಲ್ಲಿ ಕರ್ನಾಟಕದ 19,601 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 1,423 ವಿದ್ಯಾರ್ಥಿಗಳು ‌ಮೊದಲ 2,000 ರ್ಯಾಂಕ್ ಪಡೆದು ಶೇ 70ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.

ಕಾಮೆಡ್ ಕೆ ಫಲಿತಾಂಶ ಪ್ರಕಟ

ಮೊದಲ 100 ರ್ಯಾಂಕ್ ಗಳಲ್ಲಿ ಕರ್ನಾಟಕದ 70 ವಿದ್ಯಾರ್ಥಿಗಳು ಇದ್ದಾರೆ. ಅದೇ ರೀತಿ ಮೊದಲ 1,000 ರ್ಯಾಂಕ್ ನಲ್ಲಿ ಕರ್ನಾಟಕದ 398 ವಿದ್ಯಾರ್ಥಿಗಳು ಇದ್ದಾರೆ.

ಜೆ.ಪಿ. ನಗರದ ಮಾಯಾಂಕ್ ಬರನ್ವಾಲ್ 180 ಅಂಕಗಳಿಗೆ 165 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲೆ ಶಿರಸಿಯ ವಿಶ್ವಜಿತ್ ಪ್ರಕಾಶ್‌ ಹೆಗಡೆ (164 ಅಂಕ) ಎರಡನೇ ರ್ಯಾಂಕ್ ಪಡೆದಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಸೋಮೇಶ್ವರ ಲೇಔಟ್‌ನ ರುದ್ರಪಟ್ಟಣ ವಲ್ಲಭ್ ರಮಾಕಾಂತ್, ಸಹಕಾರ ನಗರದ ಸಿ.ವಿ. ಸಿದ್ಧಾರ್ಥ ಮತ್ತು ವಿಜಯ ಬ್ಯಾಂಕ್‌ ಲೇಔಟ್‌ನ ಎನ್‌. ಸಹನಾ ಈ ಮೂವರು ವಿದ್ಯಾರ್ಥಿಗಳು ತಲಾ 163 ಅಂಕ ಪಡೆದು ಮೂರನೇ ರ್ಯಾಂಕ್ ಪಡೆದಿದ್ದಾರೆ.

ಉಳಿದ 577 ವಿದ್ಯಾರ್ಥಿಗಳು ಶೇ 67ರಿಂದ ಶೇ 70ರಷ್ಟು ಅಂಕಗಳನ್ನು ಪಡೆದಿದ್ದಾರೆ. 7,427 ವಿದ್ಯಾರ್ಥಿಗಳು ಶೇ 50ರಿಂದ ಶೇ 60ರಷ್ಟು ಅಂಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳ ವೈಯಕ್ತಿಕ ಅಂಕ ಮತ್ತು ವಿವರಗಳು ವೆಬ್‌ಸೈಟ್‌ನಲ್ಲಿ www.comedk.org ಲಭ್ಯವಿದೆ

English summary
The Consortium of Medical Engineering and Dental Colleges of Karnataka has declared the result of COMEDK UGET 2017 on May 28.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia