COMEDK UGET 2022 : ಕಾಮೆಡ್‌ಕೆ ಯುಜಿಇಟಿ ಆಯ್ಕೆ ಭರ್ತಿ ಪ್ರಕ್ರಿಯೆ ಇಂದಿನಿಂದ ಆರಂಭ

COMEDK UGET 2022: ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು (COMEDK) ಇಂದಿನಿಂದ ಆಯ್ಕೆ ಭರ್ತಿ ಪ್ರಕ್ರಿಯೆಯನ್ನು ಆರಂಭಿಸಲಿದೆ. ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ತಮ್ಮ ಆಯ್ಕೆಯನ್ನು ಭರ್ತಿ ಮಾಡಬಹುದು.

 
ಕಾಮೆಡ್‌ಕೆ ಯುಜಿಇಟಿ ಆಯ್ಕೆ ಭರ್ತಿ ಪ್ರಕ್ರಿಯೆ ಪ್ರಾರಂಭ

ಅಣಕು ಸುತ್ತಿನ ಆಯ್ಕೆ ಭರ್ತಿ ಪ್ರಕ್ರಿಯೆಯು ಅಧಿಕೃತ ವೆಬ್‌ಸೈಟ್-comedk.org ನಲ್ಲಿ ಸಂಜೆ 4 ಗಂಟೆಗೆ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳು ಅಕ್ಟೋಬರ್ 2ರ (11:55 PM) ವರೆಗೆ ತಮ್ಮ ಆಯ್ಕೆಯನ್ನು ಭರ್ತಿ ಮಾಡಬಹುದು. UGET 2022 ಅಣಕು ಹಂಚಿಕೆ ಪಟ್ಟಿಯನ್ನು ಅಕ್ಟೋಬರ್ 4 ರಂದು ಪ್ರಕಟಿಸಲಾಗುತ್ತದೆ.

UGET 2022 ಆಯ್ಕೆಯ ಭರ್ತಿ ಮಾಡುವ ಆಯ್ಕೆಗಳನ್ನು ಆನ್‌ಲೈನ್‌ನಲ್ಲಿ ತುಂಬಲು ವಿದ್ಯಾರ್ಥಿಗಳು ಅಭ್ಯರ್ಥಿಯ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ವೆಬ್‌ಸೈಟ್-comedk.org ನಲ್ಲಿ ಲಾಗಿನ್ ಆಗಬೇಕು.

COMEDK UGET 2022: ಆಯ್ಕೆ ಭರ್ತಿ ಪ್ರಕ್ರಿಯೆ ಮಾಡುವುದು ಹೇಗೆ ? :

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು COMEDK ಅಧಿಕೃತ ವೆಬ್‌ಸೈಟ್ comedk.org ಗೆ ಭೇಟಿ ನೀಡಿ.
ಸ್ಟೆಪ್ 2 : ಮೊದಲು ಹೋಂ ಪೇಜ್ ನಲ್ಲಿ 'ಚಾಯ್ಸ್ ಫಿಲ್ಲಿಂಗ್' ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ಅಭ್ಯರ್ಥಿಗಳು ಲಾಗ್-ಇನ್ ರುಜುವಾತುಗಳನ್ನು ನಮೂದಿಸಿ
ಸ್ಟೆಪ್ 4 : ಆಯ್ಕೆ ಭರ್ತಿ ಮಾಡುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ
ಸ್ಟೆಪ್ 5 : ಅಭ್ಯರ್ಥಿಗಳು ಹೆಚ್ಚಿನ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

COMEDK UGET 2022ರ ಫಲಿತಾಂಶವನ್ನು ಜುಲೈ 5 ರಂದು ಘೋಷಿಸಲಾಯಿತು, ಜೂನ್ 18 ರಂದು UGET ಪರೀಕ್ಷೆಯನ್ನು ನಡೆಸಲಾಯಿತು. COMEDK UGET 2022 ಅನ್ನು ಕರ್ನಾಟಕ ವೃತ್ತಿಪರ ಕಾಲೇಜುಗಳ ಫೌಂಡೇಶನ್ ಟ್ರಸ್ಟ್‌ಗೆ ಸಂಯೋಜಿತವಾಗಿರುವ ಕಾಲೇಜುಗಳು ನೀಡುವ BE ಅಥವಾ BTech ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
COMEDK UGET 2022 : Applicants choice filling process begins from today. Here is how to fill it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X