COMEDK UGET Result 2020: ಕರ್ನಾಟಕ ಮೂಲದ ರಕ್ಷಿತ್ ಕಾಮೆಡ್-ಕೆ ಪರೀಕ್ಷೆಯಲ್ಲಿ ಟಾಪರ್

ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾದ ಕಾಮೆಡ್-ಕೆ 2020ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿಯ ಕಾಮೆಡ್ ಕೆ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, 45 ರ್ಯಾಂಕ್ ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿದೆ.

 
ಕಾಮೆಡ್-ಕೆ- 100 ರ್ಯಾಂಕ್ ಪಟ್ಟಿಯಲ್ಲಿ 45 ರ್ಯಾಂಕ್ ಕರ್ನಾಟಕ ವಿದ್ಯಾರ್ಥಿಗಳ ಪಾಲು

ಈ ವರ್ಷ ಆಗಸ್ಟ್ 19ರಂದು ನಡೆದ ಕಾಮೆಡ್ ಕೆ ಯುಜಿ ಪರೀಕ್ಷೆಗೆ ಒಟ್ಟು 43,249 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾಗಿದ್ದವರಲ್ಲಿ ಕರ್ನಾಟಕದ 14,322 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಮೊದಲ 100 ರ್ಯಾಂಕ್ ಗಳಲ್ಲಿ ಕರ್ನಾಟಕದ 45 ವಿದ್ಯಾರ್ಥಿಗಳು ಇದ್ದಾರೆ. ಅದೇ ರೀತಿ ಮೊದಲ 1,000 ರ್ಯಾಂಕ್ ನಲ್ಲಿ ಕರ್ನಾಟಕದ 346 ವಿದ್ಯಾರ್ಥಿಗಳು ಇದ್ದಾರೆ. ಮೊದಲ ಹತ್ತು ರ್ಯಾಂಕ್‌ಗಳಲ್ಲಿ ಇಬ್ಬರು ಕರ್ನಾಟಕದವರಿದ್ದಾರೆ.

ಬೆಂಗಳೂರು ಮೂಲಕ ರಕ್ಷಿತ್ 180 ಅಂಕಗಳಿಗೆ 168 ಅಂಕ ಗಳಿಸಿ ಕಾಮೆಡ್-ಕೆ ಪ್ರವೇಶ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ.

ರ್ಯಾಂಕ್ ಪಡೆದವರ ಪಟ್ಟಿ:

ಪ್ರಥಮ ರ್ಯಾಂಕ್- ರಕ್ಷಿತ್ ಎಂ-ಬೆಂಗಳೂರು
ದ್ವಿತೀಯ ರ್ಯಾಂಕ್ - ಸೌರವ್ ಕುಮಾರ್-ರಾಜಸ್ಥಾನ
ತೃತೀಯ ರ್ಯಾಂಕ್ - ಅನುಪಮಾ ಸಿನ್ಹ-ಬಿಹಾರ್
ನಾಲ್ಕನೇ ರ್ಯಾಂಕ್ - ಮೇಘಾಂಶ್ ಮುಂಡ್ರಾ-ಜಾರ್ಖಂಡ್
ಐದನೇ ರ್ಯಾಂಕ್ - ಆರ್ಯನ್ ರಾಜ್-ಬಿಹಾರ್
ಏಳನೇ ರ್ಯಾಂಕ್ - ಅಂಕಿತ್ ಭೂರನ್-ರಾಜಸ್ಥಾನ

ಕಾಮೆಡ್-ಕೆ- 100 ರ್ಯಾಂಕ್ ಪಟ್ಟಿಯಲ್ಲಿ 45 ರ್ಯಾಂಕ್ ಕರ್ನಾಟಕ ವಿದ್ಯಾರ್ಥಿಗಳ ಪಾಲು

ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಕಾಮೆಡ್-ಕೆ ಅಧಿಕೃತ ವೆಬ್‌ಸೈಟ್ https://www.comedk.org/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ಹೋಂ ಪೇಜ್‌ನಲ್ಲಿ ಲಭ್ಯವಿರುವ "COMEDK 2020 Results" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4: ಎಲ್ಲವೂ ಪೂರ್ಣಗೊಂಡ ಬಳಿಕ ಸಬ್‌ಮಿಟ್ ಮಾಡಿ
ಸ್ಟೆಪ್ 5: ಫಲಿತಾಂಶ ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
COMEDK UGET results announced. Here we are giving information about merit list and how to download results. Rakshit from bangalore got 168 marks and became topper.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X