ಸರ್ಕಾರಿ ಉದ್ಯೋಗಕ್ಕೆ ಕಂಪ್ಯೂಟರ್ ಶಿಕ್ಷಣ ಕಡ್ಡಾಯ

ಕಂಪ್ಯೂಟರ್ ವಿದ್ಯಾರ್ಹತೆಯನ್ನು ಸರ್ಕಾರಿ ನೌಕರಿಗೆ ಅಪೇಕ್ಷಿತ ಮಾನದಂಡವಾಗಿ ಪರಿಗಣಿಸುವ ನಿಟ್ಟಿನಲ್ಲಿ ಐಟಿಬಿಟಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಈ ಜವಾಬ್ದಾರಿ ಹೊರಲಿದೆ.

ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುವವರು ಇನ್ನು ಮುಂದೆ ಕಂಪ್ಯೂಟರ್ ಶಿಕ್ಷಣ ಪಡೆಯುವುದು ಕಡ್ಡಾಯವಾಗಲಿದೆ.

ಕಂಪ್ಯೂಟರ್ ವಿದ್ಯಾರ್ಹತೆಯನ್ನು ಸರ್ಕಾರಿ ನೌಕರಿಗೆ ಅಪೇಕ್ಷಿತ ಮಾನದಂಡವಾಗಿ ಪರಿಗಣಿಸುವ ನಿಟ್ಟಿನಲ್ಲಿ ಐಟಿಬಿಟಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಈ ಜವಾಬ್ದಾರಿ ಹೊರಲಿದೆ.

ಮಹಾರಾಷ್ಟ್ರ ಮಾದರಿಯಲ್ಲಿ ತರಬೇತಿ

ಮಹಾರಾಷ್ಟ್ರದಲ್ಲಿ 2001ರಿಂದಲೇ ರಾಜ್ಯ ಸರ್ಕಾರದ ಹುದ್ದೆ ಪಡೆಯಲು ಕಂಪ್ಯೂಟರ್ ಶಿಕ್ಷಣ ಕಡ್ಡಾಯ ಮಾಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕಂಪ್ಯೂಟರ್ ತರಬೇತಿ ನೀಡುವ ಯೋಜನೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ಕಂಪ್ಯೂಟರ್ ಶಿಕ್ಷಣ ಕಡ್ಡಾಯ

ಮಹಾರಾಷ್ಟ್ರ ನಾಲೆಜ್ ಕಾರ್ಪೆರೇಷನ್ ಲಿಮಿಟೆಡ್ (ಎಂಸಿಎಲ್) ಅಲ್ಲಿನ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಂಪ್ಯೂಟರ್ ಶಿಕ್ಷಣ ನೀಡುತ್ತಿದೆ. ಎ,ಬಿ,ಸಿ ಮತ್ತು ಡಿ ದರ್ಜೆ ನೌಕರಿಗೆ ಪ್ರತ್ಯೇಕವಾದ ಕಂಪ್ಯೂಟರ್ ಕೋರ್ಸ್ ವಿನ್ಯಾಸ ಮಾಡಿ, ಅದರ ಅನುಸಾರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಕೋರ್ಸ್ ಮುಗಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಬಿಎಸ್ಎನ್ಎಲ್: 996 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನಬಿಎಸ್ಎನ್ಎಲ್: 996 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

6 ತಿಂಗಳ ಕೋರ್ಸ್ ವಿನ್ಯಾಸ

ಎಂಸಿಎಲ್ 3 ತಿಂಗಳಿಂದ 1 ವರ್ಷದ ಅವಧಿಯ ಕೋರ್ಸ್ ಗಳನ್ನು ವಿನ್ಯಾಸ ಮಾಡಿದೆ. ಅಭ್ಯರ್ಥಿಗಳು ತಮಗೆ ಬೇಕಾದ ಕೋರ್ಸ್ ಆಯ್ಕೆ ಮಾಡಿಕೊಂಡು ತರಬೇತಿ ಪಡೆದುಕೊಳ್ಳಬೇಕು. ಆದರೆ, ರಾಜ್ಯದಲ್ಲಿ ಕಿಯೋನಿಕ್ಸ್ 6 ತಿಂಗಳ ಕೋರ್ಸ್ ವಿನ್ಯಾಸ ಮಾಡಲು ತೀರ್ಮಾನಿಸಿದೆ.

ರಾಜ್ಯದ ವಿವಿಧೆಡೆಯಿರುವ 300 ಕಿಯೋನಿಕ್ಸ್ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಎಲ್ಲ ಕೇಂದ್ರದಲ್ಲಿ ತಜ್ಞ ತರಬೇತುದಾರರನ್ನು ಕಿಯೋನಿಕ್ಸ್ ಹೊಂದಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಂಪ್ಯೂಟರ್ ಶಿಕ್ಷಣ ಕಡ್ಡಾಯ. ಈ ನಿಯಮವನ್ನು ರಾಜ್ಯದಲ್ಲಿಯೂ ಜಾರಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವೆ. ತಾಂತ್ರಿಕ ಯುಗದಲ್ಲಿ ಎಲ್ಲ ಕ್ಷೇತ್ರ ಕಂಪ್ಯೂಟರ್ ಶಿಕ್ಷಣ ಬೇಡುತ್ತದೆ. ಎಂಸಿಎಲ್ ಜತೆಗೆ ಸಹ ಮಾತುಕತೆ ನಡೆಸಲಾಗಿದೆ. ಎಂದು ವ್ಯವಸ್ಥಾಪಕ ನಿರ್ದೇಶಕ ಕಿಯೋನಿಕ್ಸ್ ರಂಗೇಗೌಡ ತಿಳಿಸಿದ್ದಾರೆ.

2014 ರಿಂದ ಸರ್ಕಾರದ ಅಧಿಸೂಚನೆ ಅನುಸಾರ ಸರ್ಕಾರಿ ಉದ್ಯೋಗ ಪಡೆದ ಹಾಗೂ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳಿಗೆ ಕಿಯೋನಿಕ್ಸ್ ಕಂಪ್ಯೂಟರ್ ಶಿಕ್ಷಣ ನೀಡಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಡೆಸಿಕೊಂಡು ಬರುತ್ತಿದೆ.

ಆನ್​ಲೈನ್ ಮೂಲಕ ನಡೆಯುವ ಈ ಪರೀಕ್ಷೆಯಲ್ಲಿ ಸಾಮಾನ್ಯ ಕಂಪ್ಯೂಟರ್ ಜ್ಞಾನದ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಕಡ್ಡಾಯ ಕಂಪ್ಯೂಟರ್ ಶಿಕ್ಷಣ ಜಾರಿಯಾದರೂ ಈ ಪರೀಕ್ಷೆ ಹಾಗೇ ಮುಂದುವರಿಯಲಿದೆ.

ಮೂರು ರಾಜ್ಯಗಳಲ್ಲಿ ಜಾರಿ

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕೇರಳ ರಾಜ್ಯಗಳು ಈಗಾಗಲೇ ಕಡ್ಡಾಯ ಕಂಪ್ಯೂಟರ್ ಶಿಕ್ಷಣಕ್ಕೆ ಮಹಾರಾಷ್ಟ್ರ ಮಾದರಿ ಆಯ್ಕೆ ಮಾಡಿಕೊಂಡಿವೆ. ಎಂಕೆಸಿಎಲ್ ವಿವಿಧ ವಿದ್ಯಾರ್ಹತೆ ಹಾಗೂ ಸರ್ಕಾರಿ ಹುದ್ದೆಗೆ 115 ಕೋರ್ಸ್ ವಿನ್ಯಾಸ ಮಾಡಿದೆ.

For Quick Alerts
ALLOW NOTIFICATIONS  
For Daily Alerts

English summary
Knowledge of operating computers is a must for all government employees. Karnataka govt is preparing to provide computer knowledge for govt employees.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X