2020-21ನೇ ಸಾಲಿನ ಶೈಕ್ಷಣಿಕ ವರ್ಷವು ಪ್ರಾರಂಭವಾಗಬೇಕಾಗಿದ್ದು, ಕೋವಿಡ್ 19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸದೇ ಇರುವ ಸಂದರ್ಭದಲ್ಲಿ, ಮಕ್ಕಳು ಶಾಲೆಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಮಕ್ಕಳ ಔಪಚಾರಿಕ ಕಲಿಕೆಗೆ ಹಿನ್ನಡೆ ಉಂಟಾಗಿದೆ. ಇದರಿಂದ ಮಕ್ಕಳ ಮುಂದಿನ ಕಲಿಕೆಗೆ ಪರಿಣಾಮ ಬೀರುತ್ತದೆ.
ಹಾಗಾಗಿ ಇಲಾಖೆಯು ಔಪಚಾರಿಕ ಶಿಕ್ಷಣಕ್ಕೆ ಪರ್ಯಾಯವಾಗಿ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇಟ್ಟುಕೊಳ್ಳುವ ಹಾಗೂ ಅದರಲ್ಲಿ ನಿರಂತರ ಕಲಿಕೆಯನ್ನು ಸ್ವಯಂ ಕಲಿಕಾ ವಿಧಾನ ಮೂಲಕ ಕಲಿಕಾ ಪ್ರಕ್ರಿಯೆಯನ್ನು ಮುಂದುವರೆಸಲು 'ವಿದ್ಯಾಗಮ' ಎನ್ನುವ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ರೂಪಿಸಲಾಗಿದೆ.
ಕಲಿಕೆಯಿಂದ ಸರ್ಕಾರಿ ಶಾಲೆ ಮಕ್ಕಳು ಹಿಂದುಳಿಯುತ್ತಿರುವುದು ಆತಂಕ ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಯೋಜ ನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಶಾಲೆಗಳು ಮರು ಪ್ರಾರಂಭಗೊಳ್ಳು ವವರೆಗೆ ಆಯಾ ಶಾಲಾ ವ್ಯಾಪ್ತಿಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ವಾಗಲು ಶಿಕ್ಷಕರನ್ನು ಸಿದ್ಧಗೊಳಿಸಲಾಗುತ್ತಿದೆ.
ವಿದ್ಯಾಗಮ ಯೋಜನೆಯ ಪ್ರಮುಖಾಂಶಗಳು:
- 20 ರಿಂದ 25 ಮಕ್ಕಳಿಗೆ ಒಬ್ಬ ಶಿಕ್ಷಕರ ನೇಮಕ ಮಾಡಲಾಗುವುದು.
- 1-5, 6- 7, 8-10ನೇ ತರಗತಿ ಮಕ್ಕಳನ್ನು ವಾಸ ಸ್ಥಳ ಆಧರಿಸಿ ಹಂಚಿಕೆ ಮಾಡಲಾಗುವುದು. ವಾರಕ್ಕೆ ಕನಿಷ್ಟ ಒಮ್ಮೆ ಶಿಕ್ಷಕರು ಭೇಟಿ ಮಾಡಿ ಚರ್ಚೆ ಮಾಡುವುದು.
- ಸ್ವಯಂ ಸೇವಕರು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಮಕ್ಕಳಿಗೆ ಪಾಠ ಮಾಡುವುದು.
- ಮೊಬೈಲ್ ಇಲ್ಲದ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡುವುದು.
- ಯೂಟ್ಯೂಬ್ ಚಾನಲ್ ಮಕ್ಕಳ ವಾಣಿಯಲ್ಲಿ ವೀಡಿಯೋ ಮೂಲಕ ಪಾಠ ಅಪ್ಲೋಡ್ ಮಾಡುವುದು.
- ಶಾಲೆ ಇಂದ ದೂರ ಉಳಿದ ಮಕ್ಕಳಿಗೆ ವಿಟಮಿನ್ ಹಾಗೂ ಪ್ರೊಟೀನ್ ಪದಾರ್ಥಗಳನ್ನು ಒದಗಿಸುವುದು.