ಯುಜಿಸಿ ಸಿಎಸ್ಐಆರ್ ಎನ್ಇಟಿ 2017 ರ ಫಲಿತಾಂಶ ಪ್ರಕಟ

Posted By:

ಯುಜಿಸಿ ಸಿಎಸ್ಐಆರ್ ಎನ್ಇಟಿ 2017 ರ ಫಲಿತಾಂಶ ಪ್ರಕಟಗೊಂಡಿದ್ದು, ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಫಲಿತಾಂಶವನ್ನು ನೋಡಬಹುದಾಗಿದೆ.

ಜೂನ್ 18 ರಂದು ದೇಶಾದ್ಯಂತ ಸಿಎಸ್ಐಆರ್ ಎನ್ಇಟಿ ಪರೀಕ್ಷೆ ನಡೆಸಲಾಗಿತ್ತು. ಭೌತಶಾಸ್ತ್ರ, ಜೀವಶಾಸ್ತ್ರ, ಮ್ಯಾಥಮೆಟಿಕಲ್ ಸೈನ್ಸ್ ವಿಷಯ ಸೇರಿದಂತೆ ವಿವಿಧ ವಿಷಯಗಳಿಗೆ ಸಿ‌ಎಸ್‌ಐ‌ಆರ್-ದಿ ಕೌನ್ಸಿಲ್ ಆಫ್ ಸೈನ್‌ಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಹಾಗೂ ಯುಜಿಸಿ ಜಂಟಿಯಾಗಿ ಎನ್‌ಇಟಿ ಪರೀಕ್ಷೆಯನ್ನು ನಡೆಸಿತ್ತು.

ಕ್ಯಾಟ್ ಪರೀಕ್ಷೆ-2017: 31 ಸಾವಿರಕ್ಕೂ ಅಧಿಕ ಮಂದಿ ಗೈರು

ಸಿಎಸ್ಐಆರ್ ಎನ್ಇಟಿ-2017 ಫಲಿತಾಂಶ

ಫಲಿತಾಂಶ ನೋಡುವ ವಿಧಾನ

  • ಸಿಎಸ್ಐಆರ್ ಎನ್ಇಟಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ರಿಸಲ್ಟ್ ಬಟನ್ ಕ್ಲಿಕ್ ಮಾಡಿ
  • ಎಡಭಾಗದಲ್ಲಿ ಕಾಣುವ "Result of Joint CSIR-UGC NET Exam" ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಫಲಿತಾಂಶದ ಪಿಡಿಎಫ್ ಪುಟ ತೆರೆದುಕೊಳ್ಳುತ್ತದೆ
  • ನೋಂದಣಿ ಸಂಖ್ಯೆ ಮೂಲಕ ನೀವು ತೇರ್ಗಡೆಯಾಗಿದ್ದೀರಾ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.

ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ

ಜೆಆರ್ ಎಫ್ ಬಯಸುವವರಿಗೆ ಗರಿಷ್ಠ ವಯೋಮಿತಿ 28 ವರ್ಷ

ಎನ್ಇಟಿ (ಪ್ರಾಧ್ಯಾಪಕ) ಬಯಸುವವರಿಗೆ ವಯೋಮಿತಿ ಇಲ್ಲ.

ಪರೀಕ್ಷಾ ವಿಧಾನ

ಪರೀಕ್ಷೆಯು 200 ಅಂಕಗಳಿಗೆ ನಡೆಯಲಿದ್ದು, ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶ್ನೆಗೆ ಉತ್ತರಿಸಲು ಮೂರು ಗಂಟೆಯ ಅವಧಿ ನೀಡಲಾಗಿರುತ್ತದೆ.

ಪರೀಕ್ಷಾ ವಿಷಯಗಳು

ಲೈಫ್ ಸೈನ್ಸ್, ಅರ್ಥ್ ಸೈನ್ಸ್, ಅಟ್ಮಾಸ್ಪೆರಿಕ್, ಓಷನ್, ಪ್ಲಾನೆಟರಿ, ಮ್ಯಾಥಮೆಟಿಕಲ್ ಸೈನ್ಸ್, ಕೆಮಿಕಲ್ ಸೈನ್ಸ್, ಫಿಸಿಕಲ್ ಸೈನ್ಸ್.

ಸಿಎಸ್ಐಆರ್ ಯುಜಿಸಿ ಎನ್ಇಟಿ

ಸಿ‌ಎಸ್‌ಐ‌ಆರ್-ದಿ ಕೌನ್ಸಿಲ್ ಆಫ್ ಸೈನ್‌ಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಹಾಗೂ ಯುಜಿಸಿ ಜಂಟಿಯಾಗಿ ಎನ್‌ಇಟಿ ಪರೀಕ್ಷೆಯನ್ನು ನಡೆಸುತ್ತದೆ. ಈ ಮೂಲಕ ಪ್ರಾಧ್ಯಾಪಕ ವೃತ್ತಿ ಸ್ವೀಕರಿಸುವವರಿಗೆ ಹಾಗೂ ಸಂಶೋಧನೆ ಮಾಡುವವರಿಗೆ ಅರ್ಹತಾ ಪತ್ರ ನೀಡಲಾಗುತ್ತದೆ.

English summary
The result for the Joint UGC CSIR NET June 2017 exam has been released. Candidates who had written the exam can now check out the results online.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia