ಸಿಟಿಇಟಿ 2019ರ ಜುಲೈ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ

ಸಿಬಿಎಸ್‌ಇ ನಡೆಸುವ 2019ರ ಶಿಕ್ಷಕರ ಅರ್ಹತಾ ಪರೀಕ್ಷೆ ಸಿಟಿಇಟಿ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಿಟಿಇಟಿ 2019ರ ಪರೀಕ್ಷೆಗಳು ಜುಲೈ 7, 2019ರಂದು ನಡೆಯಲಿದೆ. ಸಿಟಿಇಟಿ 2019ರ ಪರೀಕ್ಷೆಯಲ್ಲಿ ಪೇಪರ್‍‌ 1 ಮತ್ತು ಪೇಪರ್‌ 2 ಎಂಬ ಎರಡು ಪೇಪರ್‌ಗಳಿದ್ದು ಮೊದಲ ಪೇಪರ್‌ ಬೆಳಗ್ಗಿನ ಅವಧಿಯಲ್ಲಿ ಮತ್ತೊಂದು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿದೆ.

ಸಿಟಿಇಟಿ  ಪ್ರವೇಶ ಪತ್ರ ಬಿಡುಗಡೆ

ಸಿಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಗಳು ಶೇ.60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಬೇಕು. ಡಿಸೆಂಬರ್‌ 2018ರ ಪರೀಕ್ಷೆಯಲ್ಲಿ 1.78 ಲಕ್ಷ ಅಭ್ಯರ್ಥಿಗಳು ಪೇಪರ್‌ 1 ಅಥವಾ ಪ್ರಾಥಮಿಕ ಶಿಕ್ಷಕರಾಗಿ ಅರ್ಹತೆ ಪಡೆದಿದ್ದಾರೆ. 1.26 ಲಕ್ಷ ಅಭ್ಯರ್ಥಿಗಳು ಪ್ರೌಢಶಾಲೆ ಶಿಕ್ಷಕರಾಗಿ ಅರ್ಹತೆ ಪಡೆದಿದ್ದಾರೆ. 10,73,545 ಅಭ್ಯರ್ಥಿಗಳು ಪೇಪರ್ 1 ಪರೀಕ್ಷೆಯನ್ನು ಬರೆದಿದ್ದರು. ಪೇಪರ್‌ 2 ಪರೀಕ್ಷೆಯಲ್ಲಿ 8,78,425 ಅಭ್ಯರ್ಥಿಗಳು ಭಾಗವಹಿಸಿದ್ದರು.

<strong>ಆರ್‌ಪಿಎಫ್ ಕಾನ್‌ಸ್ಟೇಬಲ್ (ಆನ್ಸಿಲ್ಲರಿ) ಹುದ್ದೆಗಳ ಪಿಇಟಿ ಮತ್ತು ಪಿಎಂಟಿ ಪ್ರವೇಶ ಪತ್ರ ಬಿಡುಗಡೆ</strong>ಆರ್‌ಪಿಎಫ್ ಕಾನ್‌ಸ್ಟೇಬಲ್ (ಆನ್ಸಿಲ್ಲರಿ) ಹುದ್ದೆಗಳ ಪಿಇಟಿ ಮತ್ತು ಪಿಎಂಟಿ ಪ್ರವೇಶ ಪತ್ರ ಬಿಡುಗಡೆ

ಸಿಟಿಇಟಿ 2019ರ ಜುಲೈ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು https://ctet.nic.in/CMS/Public/Home.aspx ಅಧಿಕೃತ ವೆಬ್‌ಸೈಟ್‌ ಗೆ ಹೋಗಿ
ಸ್ಟೆಪ್ 2: ನಂತರ ಹೋಂ ಪೇಜ್‌ನಲ್ಲಿ ಇರುವ "DOWNLOAD ADMIT CARD (Server 1)" ಅಥವಾ "DOWNLOAD ADMIT CARD (Server 2)" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ "Download Admit Card Through Application Number and Date of Birth" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ನಿಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮದಿನಾಂಕ ನೀಡಿ ಲಾಗಿನ್ ಆಗಿ
ಸ್ಟೆಪ್ 5: ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು
ಸ್ಟೆಪ್ 6: ಪ್ರವೇಶ ಪತ್ರವನ್ನು ಸೇವ್ ಮಾಡಿ ನಂತರ ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

<strong>ಎಸ್‌ಎಸ್‌ಸಿ 2019: ಸಿಹೆಚ್ಎಸ್‌ಎಲ್‌ ಹುದ್ದೆಗಳ ಟಯರ್ 1 ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ</strong>ಎಸ್‌ಎಸ್‌ಸಿ 2019: ಸಿಹೆಚ್ಎಸ್‌ಎಲ್‌ ಹುದ್ದೆಗಳ ಟಯರ್ 1 ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಪ್ರವೇಶವನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿರುತ್ತದೆ ಹಾಗೂ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ. ಪರೀಕ್ಷೆಯ ಬಗೆಗೆ ಇನ್ನಷ್ಟು ತಿಳಿಯಲು ಅಧಿಕೃತ ವೆಬ್‌ಸೈಟ್‌ ಅನ್ನು ಚೆಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
CBSE 2019 released Admit Card for CTET July examination
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X