ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಾಮಾನ್ಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ-ಯುಜಿ (CUET UG) 2022ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಇದೀಗ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

NTA CUET 2022ರ ಪ್ರವೇಶ ಪತ್ರವು ಅಭ್ಯರ್ಥಿಯ ಹೆಸರು, ರೋಲ್ ಸಂಖ್ಯೆ, ಪ್ರವೇಶ ಪರೀಕ್ಷೆಯ ದಿನಾಂಕ, ಸಮಯ, ಪರೀಕ್ಷಾ ಕೇಂದ್ರದ ವಿವರಗಳು, ಸಹಿ ಹೊಂದಿರುವ ಅಭ್ಯರ್ಥಿಯ ಫೋಟೋ ಮತ್ತು ಸೂಚನೆಗಳಂತಹ ವಿವರಗಳನ್ನು ಒಳಗೊಂಡಿರುತ್ತದೆ. CUET 2022 ಅನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ಜುಲೈ 15 ರಿಂದ ಆಗಸ್ಟ್ 20 ರವರೆಗೆ ನಡೆಸಲಾಗುತ್ತದೆ.
CUET 2022 ಪ್ರವೇಶ ಪರೀಕ್ಷೆಯು ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ನಡೆಯಲಿದೆ. ಇವುಗಳ ಜೊತೆಗೆ ಫ್ರೆಂಚ್, ಜರ್ಮನ್, ಜಪಾನೀಸ್, ರಷ್ಯನ್, ಬೋಡೋ ಮತ್ತು ಸಂತಾಲಿ ಸೇರಿದಂತೆ 19 ಇತರ ಭಾಷೆಗಳಿವೆ, ಅಭ್ಯರ್ಥಿಯು ಯಾವ ಭಾಷೆಗಳಲ್ಲಿ ಯುಜಿ ಪದವಿಗೆ ದಾಖಲಾಗಲು ಬಯಸುತ್ತಾರೋ ಅದನ್ನು ಆಯ್ಕೆ ಮಾಡಬಹುದು.
CUET 2022 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ?:
ಸ್ಟೆಪ್ 1 : ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cuet.samarth.ac.in. ಗೆ ಭೇಟಿ ನೀಡಿ-
ಸ್ಟೆಪ್ 2 : ಹೋಂ ಪೇಜ್ ನಲ್ಲಿ 'ಸೈನ್ ಇನ್' ಮಾಡಿ 'CUET UG 2022 ಪ್ರವೇಶ ಪತ್ರ' ಲಿಂಕ್‌ಗೆ ಹೋಗಿ
ಸ್ಟೆಪ್ 3 : ಅಭ್ಯರ್ಥಿಗಳು ನಿಮ್ಮ ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4 : CUET UG 2022 ಪ್ರವೇಶ ಪತ್ರ ಪರದೆಯ ಮೇಲೆ ಕಾಣಿಸುತ್ತದೆ.
ಸ್ಟೆಪ್ 5 : ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
CUET UG 2022ರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದ ನಂತರ ಅಭ್ಯರ್ಥಿಗಳು ಅದರಲ್ಲಿ ತಿಳಿಸಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು.
CUET UG- 2022ರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಯಾವುದೇ ಅಭ್ಯರ್ಥಿಯು ತೊಂದರೆಯನ್ನು ಎದುರಿಸಿದಲ್ಲಿ 011-40759000 ಅನ್ನು ಸಂಪರ್ಕಿಸಬಹುದು ಅಥವಾ cuetug@nta.ac.in ನಲ್ಲಿ ಇಮೇಲ್ ಕಳುಹಿಸಬಹುದು.
ಸಿಯುಇಟಿ ಯುಜಿ ಪರೀಕ್ಷೆಯನ್ನು 43 ಕೇಂದ್ರೀಯ ವಿಶ್ವವಿದ್ಯಾಲಯಗಳು, 13 ರಾಜ್ಯ ವಿಶ್ವವಿದ್ಯಾಲಯಗಳು, 12 ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು 18 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. NTA CUET ಪರೀಕ್ಷೆಯು ಜುಲೈ 15 ರಿಂದ ಭಾರತದಾದ್ಯಂತ 554 ನಗರಗಳಲ್ಲಿ ಮತ್ತು ಭಾರತದ ಹೊರಗಿನ 13 ನಗರಗಳಲ್ಲಿ ನಡೆಯಲಿದೆ.
ಅಭ್ಯರ್ಥಿಗಳು ನೇರವಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.