ದಾವಣಗೆರೆ ವಿವಿ ನೇಮಕಾತಿ: ರದ್ದಾದ ಪರೀಕ್ಷೆ, ದಿನಾಂಕ ಮುಂದೂಡಿಕೆ

Posted By:

ದಾವಣಗೆರೆ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಇದೇ 21, 22ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದರಿಂದ ರದ್ದುಪಡಿಸಲಾಗಿದೆ.

ಪರೀಕ್ಷೆಯನ್ನು ರದ್ದು ಪಡಿಸಿ ಮುಂದೂಡಿರುವ ಕುರಿತು ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ತಿಳಿಸಲಾಗಿದೆ.

ದಾವಣಗೆರೆ ವಿವಿ ನೇಮಕಾತಿ

ಈ ಮೊದಲು ನೇರ ಸಂದರ್ಶನದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದ ವಿವಿಯು ನಂತರ ಲಿಖಿತ ಪರೀಕ್ಷೆ ನಡೆಸಲು ತೀರ್ಮಾನಿಸಿತು. ಅದರಂತೆ ಸೆಪ್ಟೆಂಬರ್ 21 ಮತ್ತು 22 ರಂದು ನಡೆಸಲು ಒಂದು ವಾರದ ಹಿಂದೆ ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಹುದ್ದೆಯ ವಿವರ

ಹುದ್ದೆಯ ಹೆಸರು

1.) ಪ್ರಾಧ್ಯಾಪಕ-10 ಹುದ್ದೆಗಳು
ವೇತನ ಶ್ರೇಣಿ - ರೂ.37400-67000 +ಎಜಿಪಿ 10000

2.) ಸಹಾಯಕ ಪ್ರಾಧ್ಯಾಪಕ -30 ಹುದ್ದೆ
ವೇತನ ಶ್ರೇಣಿ- ರೂ..37400-67000 + ಎಜಿಪಿ 9000

3.) ಸಹ ಪ್ರಾಧ್ಯಾಪಕ-71 ಹುದ್ದೆಗಳು
ವೇತನ ಶ್ರೇಣಿ-ರೂ. 15600-39100 +ಎಜಿಪಿ 6000

ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸೇರಿ ಒಟ್ಟು 111 ಬೋಧಕ ಹುದ್ದೆಗಳು ಮತ್ತು ಬೋಧಕೇತರ ಏಳು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಬೇಕಿತ್ತು. ಸುಮಾರು 900 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ದಾವಣಗೆರೆ ವಿವಿ: ಬೋಧಕ-ಬೋಧಕೇತರ ಹುದ್ದೆ ನೇಮಕಾತಿಗೆ ಲಿಖಿತ ಪರೀಕ್ಷೆ

ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆಗಳು ಅಭ್ಯರ್ಥಿಗಳಿಗೆ ಲಭ್ಯವಾಗಿವೆ ಎಂಬ ದೂರುಗಳು ಬಂದಿದ್ದರಿಂದ ಉನ್ನತ ಶಿಕ್ಷಣ ಇಲಾಖೆ ಬುಧವಾರ ಪರೀಕ್ಷೆ ರದ್ದುಪಡಿಸಿತು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

English summary
Davanagere university Written Test for Teaching & Non-Teaching Posts Recruitment Scheduled for 21st/22nd September 2017 have been post poned New Date will be announced soon on website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia